ಇಂಥ ಊರು ನೀವೆಲ್ಲಿ ನೋಡಲಿಕ್ಕಿಲ್ಲ

ಮರಳು ಪ್ರದೇಶದ ಮಧ್ಯೆ ಇರುವ ಈ ಊರನ್ನು ನೋಡಿದರೆ ಅಕ್ಷರಶಃ ನೀವು ಮೂಕವಿಸ್ಮತರಾಗುವಿರಿ. ಈ ಊರು ಎಷ್ಟೊಂದು ಸೌಂದರ್ಯದಿಂದ ಕೂಡಿದೆ ಎಂದರೆ ಅಲ್ಲಿ ಹೋದ ಮೇಲೆ ಬಿಟ್ಟು ಬರುವ ಮನಸ್ಸೇ ಆಗಲ್ಲ.

ಒಂದು ವೇಳೆ ನೀವು ಮರಳುಗಾಡಿನ ಹೆಸರು ಕೇಳಿದರೆ ಸಾಮಾನ್ಯವಾಗಿ ನಿಮ್ಮ ಕಣ್ಮುಂದೆ ಬರುವ ಸಂಗತಿಯೆಂದರೆ ಅಲ್ಲಿರುವ ದೊಡ್ಡ ದೊಡ್ಡ ಮರಳಿನ ರಾಶಿ, ರಭಸದಿಂದ ಬೀಸುವ ಗಾಳಿ, ದೂರ ದೂರದವರೆಗೂ ಯಾವುದೇ ಮನುಷ್ಯ ಜೀವನದ ಸುಳಿವು ಇಲ್ಲದಿರುವದು. ಆದರೆ ನಿಸರ್ಗ ಎಂಥಹ ಶಕ್ತಿಯನ್ನು ಹೊಂದಿದೆ ಎಂದ್ರೆ ಇಂತಹ ಮರಳುಗಾಡಿನ ಪ್ರದೇಶದಲ್ಲಿಯೂ ನಿಸರ್ಗ ಯಾವ ರೀತಿ ತನ್ನ ಸೌಂದರ್ಯದ ಸಿರಿಯನ್ನು ಮೈ ಚೆಲ್ಲಿ ನಿಂತಿದೆ ಎಂದ್ರೆ ಅದನ್ನು ನಾವು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಇಂಥಹದ್ದೇ ಒಂದು ನಿಸರ್ಗದ ಅಪೂರ್ವ ಸೃಷ್ಟಿ ನೋಡಲು ಸಿಗುವುದು ಮರಳುಗಾಡಿನ ಈ ಊರಿನಲ್ಲಿ . ಖಂಡಿತ ಇದೊಂದು ನಿಸರ್ಗದ ಪವಾಡವೇ ಸರಿ. ನೋಡಿದರೆ ಅದನ್ನು ವರ್ಣಿಸದೆ ಇರಲು ಸಾಧ್ಯವೇ ಇಲ್ಲ. ಒಂದು ವೇಳೆ ನೀವು ಈ ಊರಿಗೆ ಹೋದರೆ ಅಲ್ಲಿಂದ ಮರಳಲು ನಿಮ್ಮ ಮನಸ್ಸೇ ಒಪ್ಪುವುದಿಲ್ಲ.

ದಕ್ಷಿಣ ಪಶ್ಚಿಮ ಪೇರು ದೇಶದ ಐ ಸಿ ಎ ಸಿಟಿಯ ಹತ್ತಿರದಲ್ಲಿ ಈ ಸುಂದರವಾದ ಊರಿದೆ. ಈ ಊರಿನ ಹೆಸರು ಹುಆಕಾಚಿನಾ, ನಿಮ್ಮ ದೃಷ್ಟಿ ಎಲ್ಲಿವರೆಗೆ ಹೋಗುವದೋ ಅಲ್ಲಿಯತನಕ ನಿಮಗೆ ಮರಳೇ ಕಾಣಿಸುವದು. ಈ ಊರು ಎಲ್ಲಾ ಕಡೆಯಿಂದ ಮರಳಿನ ರಾಶಿಯಿಂದ ಸತ್ತುವರಿದಿದೆ .
ಮರಳಿನ ರಾಶಿಯಿಂದ ಸುತ್ತುವರೆದ ಈ ಊರಿನ ಸೌಂದರ್ಯಕ್ಕೆ ಸಾಟಿಯೇ ಇಲ್ಲ. ಇಲ್ಲಿ ಪ್ರತಿ ವರ್ಷ ದೂರ ದೂರದಿಂದ ಪ್ರವಾಸಿಗರು ತಮ್ಮ ರಜೆಯನ್ನು ಕಳೆಯಲು ಮುಗಿ ಬೀಳುತ್ತಾರೆ. ಇಲ್ಲಿ ಪ್ರವಾಸಿಗರ ದೊಡ್ಡ ಜಾತ್ರೆಯೇ ನೆರೆಯುತ್ತದೆ.

ಈ ಊರಿನಲ್ಲಿ ಕೇವಲ ತೊಂಭತ್ತಾರು ಕುಟುಂಬಗಳು ವಾಸವಾಗಿರುತ್ತವೆ. ಇಲ್ಲಿರುವ ಜಲಾಶಯ ಕೇವಲ ಒಂದು ಪ್ರಕೃತಿಯ ಸೃಷ್ಟಿಯಾಗಿದೆ ಅದರಿಂದ ಈ ಊರಿನ ರಮಣೀಯತೆ, ಅದ್ಭುತ ಸೌಂದರ್ಯ ಶಾಶ್ವತವಾಗಿದೆ. ಇಲ್ಲಿಯ ಜನರ ಅಭಿಪ್ರಾಯದಂತೆ ಈ ಜಲಾಶಯದಲ್ಲಿ ಔಷಧೀಯ ಗುಣಗಳಿವೆ, ಅದು ರೋಗಗಳನ್ನು ಗುಣಪಡಿಸುವ ಕ್ಷಮತೆಯನ್ನು ಹೊಂದಿದೆ.

ಪಟ್ಟಣದ ಧಾವಂತ ಜೀವನದಿಂದ ಬೇಸತ್ತ ಜನರಿಗೆ ಅವರ್ಣನೀಯ ಮಾನಸಿಕ ನೆಮ್ಮದಿ ದೊರೆಯುತ್ತದೆ. ಇಲ್ಲಿ ಬಂದ ಪ್ರವಾಸಿಗರ ಸೌಲಭ್ಯಕ್ಕಾಗಿ ಹೊಟೇಲ್ ರೆಸ್ಟೋರೆಂಟಗಳ ವ್ಯವಸ್ಥೆ ಕೂಡಾ ಇದೆ .

ರಾತ್ರಿ ಸಮಯದಲ್ಲಂತೂ ಹುಆಕಾಚಿನಾದ ಸೌಂದರ್ಯ ನೋಡಲು ಎರಡು ಕಣ್ಣು ಸಾಲದು. ಆಕಾಶದಲ್ಲಿರುವ ನಕ್ಷತ್ರಗಳು ಭೂಮಿಗಿಳಿದು ಈ ಊರನ್ನು ಸಿಂಗರಿಸಿವೆ ಎಂಬಂತೆ ಭಾಸವಾಗುವುದು. ಇಲ್ಲಿ ಬೆಳಕು ಯಾವ ರೀತಿ ಪ್ರಕಾಶಿಸುತ್ತದೆ ಎಂದ್ರೆ ಇದೊಂದು ಜಾದು ನಗರಿ ಇಲ್ಲವೆ ಮಾಯಾ ನಗರಿಗಿಂತ ಕಡಿಮೆ ಅನಿಸುವದಿಲ್ಲ.
ಒಂದು ವೇಳೆ ನಿಮಗೆ ಈ ಟಿಪ್ಪಣಿ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇಯರ್ ಮಾಡಲು ಮರೆಯದಿರಿ.

Leave a Reply

Your email address will not be published. Required fields are marked *