ಇಂಥ ಹೆಂಡತಿ ಯಾರಿಗೂ ಇರಬಾರದು, ಇವಳು ಮಾಡಿದ ಕೆಲಸ ನೋಡಿದ್ರೆ ಬೆಚ್ಚಿ ಬಿಳ್ತಿರಾ

ಇಂಥ ಹೆಂಡತಿ ಯಾರಿಗೂ ಇರಬಾರದು, ಇವಳು ಮಾಡಿದ ಕೆಲಸ ನೋಡಿದ್ರೆ ಬೆಚ್ಚಿ ಬಿಳ್ತಿರಾ

ಸಾಮರಸ್ಯದ ವೈವಾಹಿಕ ಜೀವನ ನಿಂತಿರುವುದೇ ಗಂಡ ಹೆಂಡಿರ ಪರಸ್ಪರ  ಪ್ರೀತಿ ಮತ್ತು ನಂಬಿಕೆಗಳ ಮೇಲೆ . ಆ ವಿಶ್ವಾಸ ನಂಬಿಕೆಗಳೆ ಮಣ್ಣು ಗೂಡಿದಾಗ ಮುಂದಿನ ಕೃತ್ಯ ಎಂತಹ  ಘೋರ ರೂಪ ಪಡೆಯುವದು ಎನ್ನುವ ನಿದರ್ಶನ ಇದನ್ನು ಓದಿದ ಮೇಲೆ ಬರುವುದು.

ಸದಾ ಒಂದಿಲ್ಲೊಂದು ಆತಂಕದ ಸುದ್ದಿಗಳಿಗೆ ಹೆಸರುವಾಸಿಯಾದ ಉತ್ತರ ಪ್ರದೇಶದ ಗೊರಖಪೂರದ ನಿವಾಸಿ ವಿವೇಕ್ ಪ್ರತಾಪ್ ಎಂಬುವನು ಏಳು ವರ್ಷದ ಹಿಂದೆ ಸುಷ್ಮಾ ಸಿಂಹ್ ಎಂಬಾಕೆಯನ್ನು ಮದುವೆಯಾದ. ಒಳ್ಳೆ ವ್ಯಕ್ತಿಮತ್ವದ ವಿವೇಕ್ ಒಂದು ಖಾಸಗಿ ಕಂಪನಿಯಲ್ಲಿ ಕೆಲಸಕ್ಕಾಗಿ ಬೆಳಿಗ್ಗೆ ಹೋದ್ರೆ ಮರಳಿ ಮನೆ ಸೇರುವದು ರಾತ್ರಿಯೇ.  ಗಂಡ ಹೆಂಡತಿ ಯಾವುದೇ ಬಂಧನಗಳಿಲ್ಲದೆ ಅನೊನ್ಯವಾಗಿ ಸ್ವಾತಂತ್ರ್ಯದಿಂದ ಇದ್ದರು.  ಹೆಂಡತಿಗೂ ಸಹ ವಿವೇಕ್ ಎಲ್ಲ ರೀತಿಯ ಸ್ವಾತಂತ್ರ್ಯ ಕೊಟ್ಟಿದ್ದ. ಎಲ್ಲಿಗೆ ಹೋದರೂ ಬಂದರೂ ಏನೂ ಮಾಡಿದರೂ ಗಂಡನಾದವನು ಯಾವುದಕ್ಕೂ ಪ್ರಶ್ನಿಸುತ್ತಿರಲಿಲ್ಲ.  ಇದಕ್ಕೆಲ್ಲ ಕಾರಣ ವಿವೇಕ್ ಹೆಂಡತಿಯ ಮೇಲಿಟ್ಟಿದ್ದ ವಿಶ್ವಾಸ. ಇವರಿಬ್ಬರ ಪ್ರೀತಿಯ ಸಂಕೇತವಾಗಿ ಒಬ್ಬ ಮಗನೂ ಹುಟ್ಟಿದ್ದ.

ಈ ನಡುವೆ ಇವರಿಬ್ಬರ ಮದುವೆಯಾದ ಕೆಲವೇ ತಿಂಗಳಲ್ಲಿ ಕಾಮೇಶ್ವರ ಅನ್ನೋ ವ್ಯಕ್ತಿಯ ಜೊತೆ ಪರಿಚಯ ಮಾಡಿಕೊಂಡು ಗಂಡನ ತೆರೆಮರೆಯಲ್ಲಿಯೇ ಸುಷ್ಮಾಳ ಅಕ್ರಮ ಸಂಬಂಧದ ರಾಸಲೀಲೆ ಗಂಡನಿಗೆ ಎಲ್ಲೂ ಅನುಮಾನ ಬಾರದ ಹಾಗೆ ಕಾಪಾಡಿಕೊಂಡು ಬಂದಿದ್ದಳು. ಈ ಎಲ್ಲ ಕಣ್ಣು ಮುಚ್ಚಾಲೆ ಆಟಗಳಲ್ಲಿ ಮಗನಿಗೂ ಆರು ವರ್ಷವಾಯಿತು.

ಮುಂದಿನ ಭವಿಷ್ಯ ಬಾಯ್ ಫ್ರೆಂಡ್ ಕಾಮೇಶ್ವರ ಜೊತೆಯಲ್ಲಿಯೇ ಎಂಜಾಯ್ ಮಾಡಬೇಕೆನ್ನುವ ಉದ್ದೇಶದಿಂದ ಸುಷ್ಮಾ ಒಂದು ಸ್ಕೆಚ್ ಹಾಕಿದಳು. ಕಾಮೇಶ್ವರ ಜೊತೆಗೂಡಿ ಒಂದು ದಿನ ನಸುಕಿನ 5 ಗಂಟೆಗೆ ಗಂಡ ಗಾಢ ನಿದ್ರೆಯಲ್ಲಿದ್ದಾಗ ಬಾಯ್ ಫ್ರೆಂಡ್ ಮತ್ತು ಆತನ 3 ಜನ ಸ್ನೇಹಿತರು ಕೂಡಿ ಗಂಡನ ತಲೆಗೆ ಇಟ್ಟಿಗೆಯಿಂದ ಚಚ್ಚಿ ಚಚ್ಚಿ ಸಾಯಿಸಲು ಸಹಾಯ ಮಾಡಿದಳು. ತದನಂತರ ಅವರು ಮಗನನ್ನೂ ಸಹ ಕೊಲ್ಲಲು ಮುಂದಾದಾಗ ಮಾತ್ರ ಆ ಮಗುವನ್ನು ಏನೂ ಮಾಡಬೇಡಿ ಮಗು ಗಂಡನಿಗೆ ಹುಟ್ಟಿದುದು ಅಲ್ಲ ನಮ್ಮಿಬ್ಬರಿಗೇ ಹುಟ್ಟಿದುದು ಎಂದು ಹೇಳಿ ನುಣುಚಿದಳು.

ಎಲ್ಲರೂ ಪೊಲೀಸರಿಗೆ ಸಿಕ್ಕಿಕೊಂಡರು

ಮುಂದೆ ಗಂಡನ ಶವವನ್ನು ಎಲ್ಲಿಯಾದರೂ ಮಣ್ಣು ಗೂಡಿಸಿ ಮರೆ ಮಾಚುವದಕ್ಕಾಗಿ ಹೋದಾಗ ಪೊಲೀಸರ ಕಣ್ಣು ತಪ್ಪಿಸಲಾಗದೆ ಕಾರನ್ನೂ ಅಲ್ಲೇ ಬಿಟ್ಟು ಓಡುವಾಗ ಒಬ್ಬಾತ ಪೋಲಿಸರಿಗೆ ಸಿಕ್ಕಿಕೊಂಡ . ಆಯ್ತು ಮುಂದಿನದನ್ನು ಪೋಲಿಸರು ಆರಾಮವಾಗಿ ಅವನ ಬಾಯಿಬಿಡಿಸಿ ನಂತರ ಉಳಿದೆಲ್ಲ ಆರೋಪಿಗಳನ್ನು ಸಹಿತ ಬಾಡಿಗೆ ಇಲ್ಲದ ಕೋಣೆಗೆ ಒಯ್ದರು.

Leave a Reply

Your email address will not be published. Required fields are marked *