ಡೇಟಿಂಗ್ ಗೆ ಹೋದ ಕಾಲೇಜ್ ಕಪಲ್ಸಗಳ ದುರ್ಗತಿ ಪೋಲಿಸರಿಂದೇನಾ? ಶಾಕಿಂಗ್ ನ್ಯೂಸ್

ಡೇಟಿಂಗ್ ಗೆ ಹೋದ ಕಾಲೇಜ್ ಕಪಲ್ಸಗಳ ದುರ್ಗತಿ ಪೋಲಿಸರಿಂದೇನಾ? ಶಾಕಿಂಗ್ ನ್ಯೂಸ್

ಉತ್ತರ ಪ್ರದೇಶದ ಉರಯಿಯಲ್ಲ ಡೇಟಿಂಗ ನಿಂದ ಮರಳಿ ಬರುವಾಗ ಒಂದು ಜೋಡಿಯ (ಕಪಲ ) ಬೈಕಿಗೆ ವೇಗದಿಂದ್ ಬರುವ ಬುಲೇರೋ ಜೋರಾಗಿ ಗುದ್ದಿದೆ. ಈ ದುರ್ಘಟನೆಯಲ್ಲಿ 12 ನೇ ತರಗತಿಯಲ್ಲಿ ವ್ಯಾಸಂಗ ಮಾಡುವ ಯುವಕ ಸಾವಿಗೀಡಾಗಿದ್ದೂ,  ಜೊತೆಯಲ್ಲಿದ್ದ ಹುಡುಗಿ ಗಂಭೀರವಾಗಿ ಗಾಯಗೊಂಡಾಳೆ.

ಘಟನೆಯ ಬಗ್ಗೆ ಮಾಹಿತಿ ಪಡೆದು ಪೊಲೀಸರು ಸ್ಥಳದಲ್ಲಿ ಹಾಜರಾಗಿ ಉಪಚಾರಕ್ಕಾಗಿ ಅವಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಡಾಕ್ಟರ್ ಮೂಲಗಳ ಪ್ರಕಾರ ಸದ್ದ್ಯಕ್ಕೆ ಅವಳ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಘಟನೆಗೆ ಕಾರಣ ಬೇರಾರು ಅಲ್ಲ ಪೊಲೀಸರೇ ಅವರನ್ನು ಬೆನ್ನಟ್ಟಿಕೊಂಡು ಬರುತ್ತಿದ್ದರು ಎನ್ನಲಾಗಿದೆ.

ಸಂಪೂರ್ಣ ವಿವರ :

ಸುದ್ದಿ ಮೂಲಗಳ ಪ್ರಕಾರ ಪ್ರಸ್ತುತ ಘಟನೆ ಊರಯೀ ನಗರದ ರಾಹಿಯಾ ಠಾಣೆ ವ್ಯಾಪ್ತಿಯಲ್ಲಿ ದಾಖಲೆಯಾಗಿದೆ. ಇಲ್ಲಿಯವನೇ ಆದ ಮತ್ತು 12 ನೇ ಕ್ಲಾಸ್ಸಿನಲ್ಲಿ ಓದುತ್ತಿದ್ದ ಅನುಜ ಪಾಲ ತನ್ನ ಜೊತೆಯಲ್ಲಿಯೇ ಓದುತ್ತಿದ್ದ ಋತು ತ್ರಿಪಾಠಿಯ ಜೊತೆಗೆ ಬೈಕಿನಲ್ಲಿ ಒಂದು ರೆಸ್ಟೋರೆಂಟಗೆ ಹೋಗಿದ್ದರು.

ಸಾಯಂಕಾಲದ ಹೊತ್ತಿಗೆ ಅವರು ಉರಯಿ ವಾಪಸಾಗುತ್ತಿರುವಾಗ ಎದುರಿನಿಂದ ಬರುತ್ತಿರುವ ಬುಲೇರೋ ಗಾಡಿಯೊಂದಿಗೆ ಆಕ್ಸಿಡೆಂಟ್ ಆಗಿದೆ. ಈ ಘಟನೆಯಲ್ಲಿ ವಿದ್ಯಾರ್ಥಿ ಅನುಜನ ಸಾವು ಸ್ಥಳದಲ್ಲಿಯೇ ಸಂಭವಿಸಿದ್ದು ಋತು ಮಾತ್ರ ಗಂಭೀರವಾಗಿ ಗಾಯಗೊಂಡಿದ್ದಾಳೆ. ಘಟನೆಯ ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ಆಂಬುಲೆನ್ಸ್ ಸಹಾಯದಿಂದ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ತಲುಪಿಸಿದ್ದಾರೆ .

ಆದರೇ ಪ್ರತ್ಯಕ್ಷ್ಯದರ್ಶಿಗಳ ಪ್ರಕಾರ ಈ ದುರ್ಘಟನೆಗೆ ಕಾರಣ ಪೋಲೀಸರೇ. ಇವರಿಗೆ ಬೆನ್ನಟ್ಟಿ ಬಂದುದರ ಕಾರಣದಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ಹೇಳುತ್ತಿದ್ದಾರೆ.

ಪೊಲೀಸರು ಏನು ಹೇಳುತ್ತಾರೆ ?

ಈ ವಿಷಯದಲ್ಲಿ ಜಾಲೌನದ ASP ಸುರೇಂದ್ರನಾಥ ತಿವಾರಿಯವರು ಹೀಗೆ ಹೇಳಿದ್ದು, “ಈ ಘಟನೆಯಲ್ಲಿ ಒಬ್ಬನು ಸಾವಿಗೀಡಾಗಿದ್ದು ಒಬ್ಬಳು ಗಂಭೀರವಾಗಿ ಗಾಯಗೊಂಡಿದ್ದಾಳೆ”. ಮತ್ತು ಪೊಲೀಸರೇ ಬೆನ್ನಟ್ಟಿಕೊಂಡು ಬರುತ್ತಿದ್ದರೆಂಬ ಪ್ರಶ್ನೆಗೆ “ಸಂಪೂರ್ಣ್ ಘಟನೆಯ ವರದಿ ಸಿದ್ಧಪಡಿಸಿದ ನಂತರ ತಪ್ಪಿತಸ್ತರ ವಿರುದ್ಧ ಯೋಗ್ಯ ಕ್ರಮ ಕೈಗೊಳ್ಳಲಾಗುವದು” ಎಂದು ಉತ್ತರಿಸಿದರು.

ಅಷ್ಟೇ ಎಲ್ಲ ಗ್ರಾಮಸ್ಥರ ಸಹಾಯದಿಂದ ಬುಲೇರೋ ಗಾಡಿಯ ಚಾಲಕನಿಗೆ ಗಾಡಿ ಸಹಿತ ಅರೆಸ್ಟ್ ಮಾಡಲಾಗಿದೆ.

Leave a Reply

Your email address will not be published. Required fields are marked *