ರಾಜಕೀಯ ಎಂಟ್ರಿ ಬಗ್ಗೆ ಮಾತನಾಡಿದ ನಟ ದರ್ಶನ್ ..!

ರಾಜಕೀಯ ಎಂಟ್ರಿ ಬಗ್ಗೆ ಮಾತನಾಡಿದ ನಟ ದರ್ಶನ್ ..!

ಕಲಾವಿದರು ರಾಜಕೀಯಕ್ಕೆ ಸೇರೋದು ಮತ್ತು ರಾಜಕೀಯದವರು ಚಿತ್ರಗಳಲ್ಲಿ ಮಿಂಚೋದು ಒಂದಕ್ಕೊಂದು ಮೊದಲಿನಿಂದ ನಡೆದು ಬಂದಿದ್ದೆ. ಸದ್ಯಕ್ಕೆ ರಿಯಲ್ ಸ್ಟಾರ್ ಉಪೇಂದ್ರ ತಮ್ಮದೇ ಆದ ಹೊಸ ಪಕ್ಷವನ್ನು ಸಂಘಟಿಸುವ ಮೂಲಕ ಸುದ್ದಿಯಲ್ಲಿದ್ದಾರೆ ಅನ್ನೋ ಅಷ್ಟರಲ್ಲಿಯೆ ಕನ್ನಡದ ಮಗದೊಬ್ಬ ಟಾಪ್ ನಟ ದರ್ಶನ ಅವರು ರಾಜಕೀಯ ಎಂಟ್ರಿ ಬಗ್ಗೆ ಗಾಂಧಿನಗರ ದ ಜೊತೆಗೆ ಅಭಿಮಾನಿಗಳಲ್ಲಿಯೂ ಸಹಿತ ತೀವ್ರ ಕುತೂಹಲ ಮೂಡಿಸಿದೆ.

ಸುದ್ದಿ ಮಾಧ್ಯಮಗಳ ಪ್ರಕಾರ  ” ಲೈಫ್ ಜೊತೆ ಒಂದು ಸೆಲ್ಫಿ” ಚಿತ್ರದ ಮುಹೂರ್ತ ಸಂದರ್ಭದಲ್ಲಿ ದರ್ಶನ್ ಅವರು ತಾಯಿ ಮೀನಾ ತೂಗುದೀಪ ಜೊತೆ ಹಾಜರಿದ್ದರು. ಈ ಸಂದರ್ಭದಲ್ಲಿ ಮಾಧ್ಯಮದವರು ಕೇಳಿದ ರಾಜಕೀಯದಲ್ಲಿ ಸೇರ್ಪಡೆಯ ಕುರಿತು ಪ್ರಶ್ನೆಗಳಿಗೆ ದರ್ಶನ ಅವರು ಮೌನಕ್ಕೆ ಶರಣಾದರು.

ಆದರೆ ಇದೇ ಪ್ರಶ್ನೆಯನ್ನು ಅವರ ತಾಯಿಗೆ ಕೇಳಿದಾಗ ರಾಜಕೀಯ ಸೇರ್ಪಡೆ ಮಗನ ಸ್ವಂತ ವಿಚಾರ ಅದು ಆತನು ನಿರ್ಧರಿಸ ಬೇಕಿದೆ, ನನ್ನದು ಯಾವ ಬಲವಂತದ ನಿರ್ಧಾರ ಏನಿಲ್ಲ ಎಂದು ದನಿಗೂಡಿಸಿದರು.

ಇದೇ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷರಾದ ಜಿ ಪರಮೇಶ್ವರ್ ಅವರು ನಟ ದರ್ಶನ ಅವರ ಕಾಂಗ್ರೆಸ್ ಪಕ್ಷದಲ್ಲಿ ಸೇರ್ಪಡೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಮತ್ತು ಅವರ ತಾಯಿ ಈಗಾಗಲೇ ಕೆಪಿಸಿಸಿ ಕಾರ್ಯದರ್ಶಿಯಾಗಿದ್ದರೆ.
ಹಾಗೆ ಅವರ ಜೊತೆ ರಾಜಕೀಯಕ್ಕೆ ಒಂದು ವೇಳೆ ಸೇರುವದಾದರೆ ನಮಗೂ ಒಂದು ದೊಡ್ಡ ಖುಷಿ ಅಂತಷ್ಟೇ ಹೇಳಿಕೆ ನೀಡಿದರು.

Leave a Reply

Your email address will not be published. Required fields are marked *