ಹುಷಾರ್..! ಈ ಕೆಳಗಿನ ಕೆಲಸಗಳಿಗೆ ಯಾವತ್ತೂ ಕ್ರೆಡಿಟ್ ಕಾರ್ಡ್ ಉಪಯೋಗಿಸಬೇಡಿ..

ಹುಷಾರ್..! ಈ ಕೆಳಗಿನ ಕೆಲಸಗಳಿಗೆ ಯಾವತ್ತೂ ಕ್ರೆಡಿಟ್ ಕಾರ್ಡ್ ಉಪಯೋಗಿಸಬೇಡಿ..

ಒಂದು ವೇಳೆ ನೀವು ಕ್ರೆಡಿಟ್ ಕಾರ್ಡ್ (Credit Card) ಉಪಯೊಗಿಸುತ್ತಿದ್ದರೆ ಬಹುಶಃ ಒಂದೇ ಸವನೆ ಹಾಗೂ ಮೇಲಿಂದ ಮೇಲೆ ಹೆಚ್ಚಾಗುತ್ತಿರುವ Tax ಮತ್ತು Extra Charge ಇವುಗಳಿಂದ ಬೇಸತ್ತಿರಬೇಕು. ಎಷ್ಟೋ ಸಲ ತಮಗೆ ಡೆಬಿಟ್ ಕಾರ್ಡ್ (Debit Card) ಉಪಯೋಗಿಸುವ ಸಮಯದಲ್ಲಿ ಗಡಿಬಿಡಿಯಿಂದ ಅಥವಾ ಇನ್ನಾವುದೋ ಕಾರಣಕ್ಕಾಗಿ ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡಿ ಬಿಡುತ್ತೇವೆ.ಇಂಥ ಕಾರಣಗಳಿಂದ ನಿಮ್ಮ ಕ್ರೆಡಿಟ್ ಕಾರ್ಡಗಳ ಬಿಲ್ ಹೆಚ್ಚಾಗಬಹುದು ಬಿಟ್ಟು ಬೇರೇನೂ ಆಗದು, ಆದ್ದರಿಂದ ಕ್ರೆಡಿಟ್ ಕಾರ್ಡ ಉಪಯೋಗ ಯಾವಾಗ ಎಲ್ಲಿ ಹೇಗೆ ಉಪಯೋಗಿಸಬೇಕು ಎನ್ನುವದರ ಬಗ್ಗೆ ತಿಳಿದುಕೊಳ್ಳೋಣ.

1)ಸಣ್ಣ ಪುಟ್ಟ ಖರ್ಚಗಳಿಗಾಗಿ ಬೇಡ
ಈ ಕ್ರೆಡಿಟ್ ಕಾರ್ಡಿನ ಉಪಯೋಗ ನಿಮಗೆ ತುಂಬಾ ಸೌಲಭ್ಯಯುತ ಅನ್ನಿಸಬಹುದು ಆದರೆ ಇದರ ಉಪಯೋಗ ಕಾಫಿ ಡೇ ದಲ್ಲಿ ಅಥವಾ ಡಿನ್ನರ್ , ಇಲ್ಲವೇ ಬಿಗ್ ಬಜಾರ್ ಅಂತಹ ಸ್ಟೋರ್ ಗಳಲ್ಲಿ ಸ್ವೀಪ್ ಮಾಡುವದು ಅಷ್ಟು ಸರಿ ಇಲ್ಲ. ಯಾಕೆಂದರೆ, ಇಂತಹ ಚಿಕ್ಕ ಪುಟ್ಟ ಖರ್ಚುಗಳಿಗಾಗಿ ಕ್ರೆಡಿಟ್ ಕಾರ್ಡಿನ ಉಪಯೋಗ ತಮಗೆ ಖರ್ಚು ಇನ್ನಷ್ಟು ಹೆಚ್ಚು ಮಾಡಲು ಪ್ರೇರೆಪಿಸುತ್ತದೆ. ಹಾಗೂ ಎರಡನೆಯದಾಗಿ ಕಾರ್ಡಿನ ನಿಗದಿಪಡಿಸಿದ ಮರ್ಯಾದೆಗಿಂತ ಹೆಚ್ಚು ಉಪಯೋಗ ಮಾಡುವದರಿಂದ ನಿಮಗೆ ಪ್ರೊಸೆಸಿಂಗ್ ಫೀ 2% ಹೆಚ್ಚು ಮಾಡಬೇಕಾಗುವದು. ಅಷ್ಟೇ ಅಲ್ಲ TAX ಬಿಲ್ ಜೊತೆಗೆ ಕಾರ್ಡ್ ಸ್ವೈಪ್ ಮಾಡುವ ವೇಳೆಯಲ್ಲಿಯೂ ಎಕ್ಸ್ಟ್ರಾ ಭರಿಸಬೇಕಾಗುತ್ತದೆ.

2)ಯಾವದೇ ಪ್ರಕಾರದ ಸಾಲ(Loan )ಪೇಡ್ ಮಾಡುವ ಸಲುವಾಗಿ
ನಿಮ್ಮ ಯಾವುದೇ ಪ್ರಕಾರದ ಲೋನ್ ಅಥವಾ ಸಾಲದ ಸಲುವಾಗಿ ಇಲ್ಲ ಬೇರೆ ಕ್ರೆಡಿಟ್ ಕಾರ್ಡ ಬಿಲ್ ಪಾವತಿಸುವ ಸಲುವಾಗಿ ನಿಮ್ಮ ಹತ್ತಿರ ಹಣವಿಲ್ಲದಾದ ಸಂದರ್ಭದಲ್ಲಿ ಕ್ರೆಡಿಟ್ ಕಾರ್ಡಿನ ಉಪಯೋಗ ಮಾಡುವದರಿಂದ ಸಾಧ್ಯವಾದಷ್ಟು ದೂರವಿರಬೇಕು. ಏಕೆಂದರೆ, ನೀವೂ ನಿಮ್ಮ ಸಾಲಿನ ಮೇಲೆ ಟ್ಯಾಕ್ಸ್ ಕೊಡುತ್ತಿರಿ, ಆಮೇಲೆ ಕ್ರೆಡಿಟ್ ಕಾರ್ಡಿನ್ ಬಿಲ್ ಮೇಲೆ ಟ್ಯಾಕ್ಸ್ ಕಟ್ಟುತ್ತೀರಾ, ಆಮೇಲೆ ಒಂದೇ ಸಮಯದಲ್ಲಿ ಕ್ರೆಡಿಟ್ ಕಾರ್ಡಿನ ಬಿಲ್ ಮರ್ಯಾದಿತ ಸಮಯದಲ್ಲಿ ಕಟ್ಟದಿದ್ದರೆ ಮತ್ತೆ ಇದರಿಂದ ನಿಮ್ಮ ಕ್ರೆಡಿಟ್ ವ್ಯಾಲ್ಯೂ ಮೇಲೂ ಪ್ರಭಾವ ಬೀರುವದು

3)ಕ್ರೆಡಿಟ್ ಕಾರ್ಡಿನಿಂದ ಹಣ ತಗೆದುಕೊಳ್ಳುವದು
ಒಂದು ವೇಳೆ ನಿಮ್ಮ್ ಕ್ರೆಡಿಟ್ ಕಾರ್ಡಿನಲ್ಲಿ Cash Advance Option ಇದ್ದರೆ ಮರೆತು ಸಹ ಅದರ ಉಪಯೋಗವನ್ನು ತಗೆದು ಕೊಳ್ಳಬೇಡಿ ಹಾಗೂ ಕ್ರೆಡಿಟ್ ಕಾರ್ಡನಿಂದ ಡೆಬಿಟ್ ಕಾರ್ಡ A/c ಗೆ ಹಣ ಹಸ್ತಾಂತರಿಸುವ ಬಗ್ಗೆ ವಿಚಾರ ಮಾಡಬೇಡಿ. ಇದರಿಂದ ಸಾಮಾನ್ಯವಾಗಿ ಕೊಡುವ ಬಡ್ಡಿದರಗಿಂತಲೂ ಎರಡು ಪಟ್ಟು ಅಥವಾ ಮೂರುಪಟ್ಟು ಬಡ್ಡಿದರ (Interest) ತೆತ್ತಬೇಕಾಗುತ್ತದೆ. ನೀವು ತೆಗೆದ ಹಣದ ಮೇಲೆ 24 ರಿಂದ 48% ಬಡ್ಡಿ ವಸೂಲಿ ಮಾಡಲಾಗುವದು

4)ಮೆಡಿಕಲ್ ಬಿಲ್
ಕೆಲವೊಮ್ಮೆ ಮೆಡಿಕಲ್ ಬಿಲ್ ಸಾಕಷ್ಟಿರುವಾಗ ಕ್ರೆಡಿಟ್ ಕಾರ್ಡನಿಂದ ಪೆಮೆಂಟ್ ಮಾಡಿ ಬಿಡುತ್ತೇವೆ. ಒಂದು ವೇಳೆ ಮೆಡಿಕಲ್ ಬಿಲ್ ಕಡಿಮೆ ಇದ್ದರೆ ಅದನ್ನು ಆದಷ್ಟು ಡೆಬಿಟ್ ಕಾರ್ಡ ಅಥವಾ ಚೆಕ್ ನಿಂದ ಹಿಂತಿರುಗಿಸುವ ಪ್ರಯತ್ನ ಮಾಡಿ. ಒಂದು ವೇಳೆ ಕ್ರೆಡಿಟ್ ಕಾರ್ಡನಿಂದ ಹಿಂತಿರುಗಿಸುವ ವಿಚಾರ ಮಾಡಿದರೆ ಆದಷ್ಟು ಒಂದೇ ಹಂತದಲ್ಲಿ ಪೆಮೆಂಟ್ ಮಾಡಲು ಯತ್ನಿಸಿ ಹಾಗೂ ಕ್ರೆಡಿಟ್ ಕಾರ್ಡಿನ ಬಿಲ್ ಆದಷ್ಟು ಬೇಗ ಮರಳಿಸುವ ಯತ್ನ ಮಾಡಿ. ಒಂದುವೇಳೆ ಈ ರೀತಿ ಮಾಡದಿದ್ದರೆ ಮತ್ತು ಮೆಡಿಕಲ್ ಬಿಲ್ ಕ್ರೆಡಿಟ್ ಕಾರ್ಡಿನ EMI ಮೇಲೆ ಮರುಪಾವತಿಸದಿದ್ದರೆ ನೀವೂ ಕೊಡಬೇಕಾದ ಬಡ್ಡಿ ಅವಶ್ಯಕತೆಗಿಂತ ಹೆಚ್ಚಾಗುವದು. ಆದ್ದರಿಂದ ಯಾವುದೇ ಮೆಡಿಕಲ್ ಬಿಲ್ ಆದಷ್ಟು ಒಂದು ಅಥವಾ ಎರಡನೆಯ ಸಲದಲ್ಲಿ ಹಿಂತುರುಗಿಸಿಬಿಡಿ.

5)ಹೌಸ್ ಹೊಲ್ಡ್ ಬಿಲ್….
ಎಲೆಕ್ಟ್ರಿಕ್ ಬಿಲ್, ನೀರು ಹಾಗೂ ಫೋನಿನ ಬಿಲ್ ಗಾಗಿ ನೀವೂ ಕ್ರೆಡಿಟ್ ಕಾರ್ಡಿನ ಉಪಯೋಗ ಮಾಡುತ್ತಿದ್ದರೆ ತ್ವರಿತವಾಗಿ ಅದನ್ನು ನಿಲ್ಲಿಸಿ. ಈ ರೂಢಿಯಿಂದ ನೀವು ಅವಶ್ಯಕತೆಗಿಂತ ಹೆಚ್ಚಿಗೆ ಇಂಟರೆಸ್ಟ್ (ಬಡ್ಡಿ) ಮುಟ್ಟಿಸಲು ಸಿದ್ಧರಾಗುತ್ತೀರಿ. ಇಂತಹ ಬಿಲ್ ಗಳನ್ನೂ ಡೆಬಿಟ್ ಕಾರ್ಡ ಮುಖಾಂತರವೇ ಬಿಲ್ ಪೇ ಮಾಡಿ.

6)ಇಂಧನ (Fuel) ತುಂಬಿಸುವ ಸಲುವಾಗಿ
ಹಾಗೆ ನೋಡಲಾಗಿ ಪೆಟ್ರೋಲ್ GST ಕ್ಷೇತ್ರ ದಿಂದ ದೂರವೇ ಇಡಲಾಗಿದೆ. ಆದರೂ ಕ್ರೆಡಿಟ್ ಕಾರ್ಡಿನ TAX ಅಂತೂ ಇದ್ದೆ ಇದೆ. ಇದಕ್ಕಾಗಿ ಡೆಬಿಟ್ ಕಾರ್ಡಿನ ಉಪಯೋಗ ತಗೆದುಕೊಳ್ಳುವದು ಒಳ್ಳೆಯದು. ಯಾಕೆಂದರೆ, ಕ್ರೆಡಿಟ್ ಕಾರ್ಡ ಉಪಯೋಗ ಮಾಡಿದರೆ ಅದಕ್ಕೆ GST ಪಾವತಿಸಬೇಕಾಗುವದು. ಹೇಗೆಂದರೆ ಪೆಟ್ರೋಲ್ ಖರೀದಿಸಿದ ಬೆಲೆ ನಿಮ್ಮ ಕ್ರೆಡಿಟ್ ಕಾರ್ಡ ಬಿಲ್ ನಲ್ಲಿ ಕೂಡುವದು (Add) ಹಾಗೂ ನಿಮ್ಮ Outstanding Amount ಮೇಲೆ 18% Tax ವಸೂಲಿ ಆಗುವದು. ಆದ್ದರಿಂದ ಕ್ರೆಡಿಟ್ ಕಾರ್ಡಿನಿಂದ ಪೆಟ್ರೋಲ್ ತುಂಬುವ ಹವ್ಯಾಸ ನಿಮಗೆ ಇದ್ದಲ್ಲಿ ಅದನ್ನು ಸ್ವಲ್ಪ ಬದಲಾಯಿಸಿಕೊಳ್ಳಿ.

7)ನೀವು ನಿಮ್ಮ ಕ್ರೆಡಿಟ್ ಕಾರ್ಡನಿಂದ ಪ್ರಾಪರ್ಟಿ ಟ್ಯಾಕ್ಸ್ ದಂತಹ ಬಿಲ್ ತುಂಬುತ್ತಿದ್ದರೆ ಮೊದಲು ನಿಮ್ಮ ಲಿಮಿಟ್ ಬೇಗ ಮುಗಿಯುವದು. ಜೊತೆಗೆ ಕ್ರೆಡಿಟ್ ಕಾರ್ಡ ಸ್ಕೋರ್ ಸಹ ತುಂಬ ಕಡಿಮೆ ಆಗುವದು. ಇದರಿಂದ ನಿಮಗೆ ಲೋನ್ ತಗೆದುಕೊಳ್ಳುವಂತಹ ಕೆಲಸಗಳಿಗೆ ಅಡ್ಡಿ ಯಾಗುತ್ತದೆ.

8)Down Payment (ಡೌನ್ ಪೆಮೆಂಟ್) ಗಾಗಿ ಉಪಯೋಗ ಮಾಡದಿರುವದು
ಮನೆ ,ಕಾರು ಇಂತಹ ಅನೇಕ ಸಂದರ್ಭಗಳಲ್ಲಿ ಮುಂಗಡ ಹಣ (Down Payment) ಪಾವತಿಸಲು ಕ್ರೆಡಿಟ್ ಕಾರ್ಡಿನ ಉಪಯೋಗ ಮಾಡುವದರಿಂದ ದೂರವಿರಿ. ಆದರೆ EMI ಕ್ರೆಡಿಟ್ ಕಾರ್ಡಿನಿಂದ ಮಾಡಬಹುದು. Down payment ಸಲುವಾಗಿ ಕ್ರೆಡಿಟ್ ಕಾರ್ಡಿನ ಉಪಯೋಗ ಮಾಡಿದ್ದಲ್ಲಿ ಇದರಿಂದ ನಿಮ್ ಡೆಬಿಟ್ Income ratio ಬದಲಾಗುವದು ಮತ್ತು ಕ್ರೆಡಿಟ್ ಸ್ಕೋರ್ ಮೇಲೆಯೂ ಸಹ ಪರಿಣಾಮವಾಗುವದು.

ಆದ್ದರಿಂದ ಈ ಎಲ್ಲ ವಿಷಯಗಳನ್ನರಿತು ಕ್ರೆಡಿಟ್ ಕಾರ್ಡಿನ ಉಪಯೋಗ ಮಾಡುವುದು ತುಂಬಾ ಒಳ್ಳೆಯದು.

Leave a Reply

Your email address will not be published. Required fields are marked *