“ಯಾವ ಕೋರ್ಟಿನಲ್ಲಿ ತಂದೆ ಚಹಾ ಮಾರುತ್ತಿದ್ದರು ಅದೇ ಕೋರ್ಟಿನಲ್ಲಿ ಮಗಳು ಜಡ್ಜ (Judge) ಆದ ಕಥೆ”.

"ಯಾವ ಕೋರ್ಟಿನಲ್ಲಿ ತಂದೆ ಚಹಾ ಮಾರುತ್ತಿದ್ದರು ಅದೇ ಕೋರ್ಟಿನಲ್ಲಿ ಮಗಳು ಜಡ್ಜ (Judge) ಆದ ಕಥೆ".

 

ಪ್ರತಿಕೂಲ ಪರಿಸ್ಥಿತಿಯ ವಿರುದ್ದ ಈಜಿ ಯಶಸ್ಸಿನ ಶಿಖರವನ್ನು ತಲುಪಿದವರ ಉದಾಹರಣೆಗಳನ್ನು ನಾವೆಷ್ಟೋ ಕೇಳಿದ್ದೇವೆ. ಅಂತಹುದೇ ಒಂದು ಉದಾಹರಣೆ ಪಂಜಾಬನಲ್ಲಿ ಕಂಡು ಬಂದಿದೆ.
ಯಾರೂ ಕಲ್ಪನೆಯೂ ಸಹಿತ ಮಾಡಲಿಕ್ಕಿಲ್ಲ ಅಂತಹ ಸತ್ಯ ಇಲ್ಲಿ ಶಿಕ್ಷಣದ ಬಲದಿಂದ ಸಾಧ್ಯವಾಗಿದೆ.


ತನ್ನ ಇಡೀ ಆಯುಷ್ಯವನ್ನೇ ಕೋರ್ಟಿನಲ್ಲಿ ಚಹಾ ಮಾರಿ ಜೀವನ ನಡೆಸಿದ ಒಬ್ಬ ತಂದೆಯ ಮಗಳು ಅದೇ ಕೋರ್ಟಿನಲ್ಲಿ ಸರ್ವೋಚ್ಛ ಸ್ಥಾನದಲ್ಲಿ ಅಂದರೆ ನ್ಯಾಯಾಧೀಶಳಾಗಿ ವಿರಾಜಮಾನವಾಗಿದ್ದಾಳೆ.


ಸುರೇಂದ್ರಕುಮಾರ ಅನ್ನೋ ಹೆಸರಿನ ವ್ಯಕ್ತಿ ತನ್ನ ಜೀವಮಾನವೆಲ್ಲ ಕೋರ್ಟಿನಲ್ಲಿ ಚಹಾ ಮಾಡುವದರಲ್ಲಿ ಸವೆಸಿದನು. ಜೊತೆಗೆ ಅವನು ಒಂದು ಕನಸು ಕಂಡಿದ್ದನು. ಅದರ ಪ್ರಕಾರ ತನ್ನ ಮಗಳು ಸಹ ಇದೇ ಕೋರ್ಟಿನಲ್ಲಿ ಕಪ್ಪು ಕೋಟ್ ಧರಿಸಿ ಸೇವೆ ಮಾಡುವದನ್ನು ನೋಡಬೇಕು.
ಸುರೇಂದ್ರನ ಮಗಳು ತಂದೆಯ ಕನಸನ್ನು ಅರಿತುಕೊಂಡು ಸ್ವಪ್ರಯತ್ನ ಜಿದ್ದು ಹಾಗೂ ಸತತ ಪ್ರಯತ್ನಗಳ ಮುಖಾಂತರ ಕನಸು ನನಸಾಗಿ ಪರಿವರ್ತಿಸಿದಳು.
23 ವರ್ಷದ ಶೃತಿ ಪಂಜಾಬ ಲೋಕಸೇವೆ ಆಯೋಗದ ಪರೀಕ್ಷೆಯನ್ನು ಒಂದೇ ಪ್ರಯತ್ನದಲ್ಲಿ ಉತ್ತೀರ್ಣವಾದಳು. ತದನಂತರ ಒಂದು ವರ್ಷದ ತರಬೇತಿಯನ್ನು ಪಡೆದು ಈಗ ನ್ಯಾಯಾಧೀಶಳಾಗಿ ತನ್ನ ಕಾರ್ಯಕಲಾಪ ಪ್ರಾರಂಭಿಸಿದ್ದಾಳೆ.


ಶೃತಿ ಪ್ರಕಾರ ನನ್ನ ಕರಿಯರ್ ‘ಲಾ'(Law) ಕ್ಷೇತ್ರದಲ್ಲಿಯೇ ಮಾಡಬೇಕು ಎನ್ನು ಹಂಬಲ ಮೊದಲಿನಿಂದಲೂ ಇತ್ತು. ಆದ್ದರಿಂದ ನಾನು ಪರಿಪೂರ್ಣ ನಿಯೋಜನೆಯನ್ನು ಮಾಡಿ ಪರೀಕ್ಷೆಯನ್ನು ಕೊಟ್ಟಿದ್ದೆ ಹಾಗೂ S.T.ಕೆಟಗೆರಿಯಲ್ಲಿ ಮೊದಲ ಕ್ರಮಾಂಕವನ್ನು ಗಿಟ್ಟಿಸಿದೆ. ಎಂದು ಹೇಳಿದ್ದಾರೆ.


ರಾಜ್ಯಸಭಾ ಸದಸ್ಯರಿಂದ ಅವಿನಾಶ ರಾಯ್ ಖನ್ನಾ ‘ Honor of punjab ‘ ಪುರಸ್ಕಾರವನ್ನು ಕೊಟ್ಟು ಗೌರವಿಸಿದ್ದಾರೆ.

Leave a Reply

Your email address will not be published. Required fields are marked *