ಮಧ್ಯರಾತ್ರಿ ಪ್ರಶಾಂತವಾದ ಹೆದ್ದಾರಿಯಲ್ಲಿ ಕ್ರಿಕೆಟ್ ರ್ ಸುರೇಶ್ ರೈನಾ ಸಾಗುತ್ತಿದ್ದಾಗ ಕನಸಿನಲ್ಲಿಯೂ ಯೋಚಿಸಿರಲಿಲ್ಲ ಅವರ ಜೊತೆ ಹೀಗಾಗುತ್ತದೆಂದು…

ಮಧ್ಯರಾತ್ರಿ ಪ್ರಶಾಂತವಾದ ಹೆದ್ದಾರಿಯಲ್ಲಿ ಕ್ರಿಕೆಟ್ ರ್ ಸುರೇಶ್ ರೈನಾ ಸಾಗುತ್ತಿದ್ದಾಗ ಕನಸಿನಲ್ಲಿಯೂ ಯೋಚಿಸಿರಲಿಲ್ಲ ಅವರ ಜೊತೆ ಹೀಗಾಗುತ್ತದೆಂದು...

 

ದಿಲ್ಲಿಯಿಂದ ಕಾನಪೂರಕ್ಕೆ ದುಲೀಪ ಟ್ರಾಫಿ ಕ್ರಿಕೆಟ್ ಪಂದ್ಯ ಆಡಲು ಹೊರಟ ಭಾರತ ಕ್ರಿಕೆಟ್ ನ ಮಧ್ಯ ಕ್ರಮಾಂಕದ ಬಿರುಸಿನ ಹೂಡೆತಗಾರ ಸುರೇಶ ರೈನಾಗೆ ಮಾರ್ಗ ಮಧ್ಯದಲ್ಲಿ ವಿಧಿ ಕಾಯುತ್ತಾ ಕುಳಿತಿದ್ದಳು. ಮೀಡಿಯಾ ರಿಪೋರ್ಟ್ ಗಳ ಪ್ರಕಾರ ರೈನಾ ತನ್ನ ರೇಂಜ್ ರೊವರ್ ಕಾರಿನಲ್ಲಿ(DL-I-C-M-4919) 13 ನೇ ದಿನಾಂಕದ ಪಂದ್ಯಕ್ಕೆ ಹಾಜರಾಗಬೇಕಿತ್ತು. ಆದರೆ ಸೋಮವಾರ ಮಧ್ಯರಾತ್ರಿ ಪ್ರವಾಸದ ಮಧ್ಯ ಕಾರಿನಿಂದ ಜೋರಾದ ಶಬ್ದ ಕೆಳಿಬಂದಿತು. ಸುರೇಶ ರೈನಾ ಅವರ ಕಾರಿನ ಟಾಯರ್ ಬ್ಲಾಸ್ಟ ಆಗಿತ್ತು. ಸುದೈವಕ್ಕೆ ಸುರೇಶ್ ರೈನಾ ಅವರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಆದರೆ ಪ್ರಶಾಂತವಾದ ದಾರಿಯಲ್ಲಿ ಯಾರು ಇಲ್ಲದ್ದರಿಂದ ಸಹಾಯಕ್ಕಾಗಿ ಒಂದು ಗಂಟೆಯವರೆಗೆ ದಾರಿಕಾಯಬೇಕಾಗಿ ಬಂತು ನಂತರ ಸ್ಥಳಿಯ ಪೊಲೀಸರ ಸಹಾಯದಿಂದ ಬೇರೆ ಕಾರಿನ ವ್ಯವಸ್ಥೆ ಮಾಡಿಕೊಂಡು ಕಾನಪೂರಕ್ಕೆ ತಲುಪಿದರು.

Leave a Reply

Your email address will not be published. Required fields are marked *