ಎಂಟನೇ ತರಗತಿಯಲ್ಲಿ ಓದುವ ಹುಡುಗಿ ಪ್ರೆಗ್ನೆಂಟ್! ಒತ್ತಾಯ ಮಾಡಿದಾಗ ಬಾಯಿಬಿಟ್ಟಳು ಬೆಚ್ಚಿ ಬೀಳಿಸುವ ಸತ್ಯ

ಎಂಟನೇ ತರಗತಿಯಲ್ಲಿ ಓದುವ ಹುಡುಗಿ ಪ್ರೆಗ್ನೆಂಟ್! ಒತ್ತಾಯ ಮಾಡಿದಾಗ ಬಾಯಿಬಿಟ್ಟಳು ಬೆಚ್ಚಿ ಬೀಳಿಸುವ ಸತ್ಯ

8ನೇ ವರ್ಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯು ಬಿಜೆಪಿ ಲೀಡರ್ ಮೇಲೆ ರೇಪ್ ನ ಆರೋಪ ಮಾಡಿದ್ದಾಳೆ. ವಿದ್ಯಾರ್ಥಿನಿ ಗರ್ಭ ಧರಿಸಿ ಮೂರು ತಿಂಗಳಾಗಿದೆ. ಎಸ್ಪಿಯ ಆದೇಶದ ಮೇರೆಗೆ ಆರೋಪಿ ವಿರುದ್ಧ ಕೇಸು ದಾಖಲಿಸಲಾಗಿದೆ. ಅಷ್ಟೇ ಅಲ್ಲ ಆರೋಪಿಯ ಮೇಲೆ ಸೆಕ್ಸ್ ರಾಕೆಟ್ ನಡೆಸುತ್ತಿದ್ದಾನೆ ಎನ್ನುವ ಸಂದೇಹವೂ ಸಹಿತ ವ್ಯಕ್ತವಾಗುತ್ತಿದೆ. ಇದೇ ಸಂಶಯದ ಮೇರೆಗೆ ಒಂದು ಮಹಿಳೆಗೂ ಸಹಿತ ಪೋಲಿಸ ವಶದಲ್ಲಿ ತೆಗೆದುಕೋಳ್ಳಲಾಗಿದೆ.

ಹೇಮರಾಜ್ ಬುಂದೇಲಾ

ಘಟನೆ ಉತ್ತರಪ್ರದೇಶದ ಮಹೋಬಾ ಜಿಲ್ಲೆಯ ಚರಖಾರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹುಡುಗಿ ಹೆಸರು ಬಹಿರಂಗ ಪಡಿಸಿಲ್ಲ. ಹುಡುಗಿಯ ಹೇಳಿಕೆಯ ಪ್ರಕಾರ ನಾನು ಫೈನಲ್ ಎಕ್ಷಾಮ್ ನಲ್ಲಿ ಫೇಲಾಗಿದ್ದೆ . ಆಗ ನನ್ನ ಒಬ್ಬ ಗೆಳತಿ ತನ್ನ ಅಮ್ಮನ ಹತ್ತಿರ ಕರೆದುಕೊಂಡು ಹೋಗಿದ್ದಳು. ಅವಳು, ನಿನ್ನ ಅಡ್ಮಿಶನ್ ಒಂದು ಒಳ್ಳೆಯ ಶಾಲೆಯಲ್ಲಿ ಮಾಡುತ್ತೇವೆ ಅಂತ ಹೇಳಿ ಒಂದು ದಿವಸ ಹೋಟೆಲಿಗೆ ಕರೆದುಕೊಂಡು ಹೋಗಿ ರೂಮಿನಲ್ಲಿ ಬಿಟ್ಟಳು. ಸ್ವಲ್ಪ ಸಮಯದ ನಂತರ ಅಲ್ಲಿಗೆ ಬಂದ ಬಿಜೆಪಿಯ ನಗರಪಾಲಿಕೆ ಅಧ್ಯಕ್ಷ ಹೇಮರಾಜ್ ಬುಂದೇಲಾ ನನಗೆ ರೇಪ್ ಮಾಡಿದರು. ಹೀಗೆ ಸಾಯಂಕಾಲದ ವರೆಗೆ ಕೆಲವು ಸಲ ಇದೆ ವರ್ತನೆ ಮುಂದುವರಿಸಿದರು. ಜೊತೆಗೆ ವೀಡಿಯೊ ಸಹಿತ ತೆಗೆದು ಈ ವಿಷಯದ ಬಗ್ಗೆ ಯಾರ ಮುಂದೆನಾದರೂ ಬಾಯಿಬಿಟ್ಟರೆ ನಿನ್ನ ಮರ್ಡರ್ ಮಾಡಿ ಬಿಡುವೆನೆಂಬ ಬೆದರಿಕೆ ಹಾಕಿದ್ದ.

ಹೇಗೆ ಬಹಿರಂಗವಾಯ್ತು?

ಹುಡುಗಿಗೆ 9 ಸಪ್ಟೆಂಬರ್ ದಂದು ಆಕಸ್ಮಿಕವಾಗಿ ಹೊಟ್ಟೆ ನೋವು ಶುರುವಾದಾಗ ಸಮೀಪದ ಕ್ಲಿನಿಕ್ ಗೆ ಪೋಷಕರು ಕರೆದೊಯ್ದಿದ್ದಾರೆ. ಡಾಕ್ಟರ್ ಕಡೆಯಿಂದ ಕೆಲವು ಟೆಸ್ಟ್ ಗಳನ್ನು ಮಾಡಿಸಿದ್ದಾರೆ. ನಂತರ 10 ಸಪ್ಟೆಂಬರ್ ದಂದು ಬಂದ ರಿಪೋರ್ಟ್ ಗಳ ಪ್ರಕಾರ ಹುಡುಗಿ 3 ತಿಂಗಳು ಗರ್ಭ ಧರಿಸಿರುವ ಬಗ್ಗೆ ತಿಳಿದುಬಂದಿತು. ಆಗ ಹುಡುಗಿ ಪೋಷಕರ ಒತ್ತಾಯಕ್ಕೆ ಮಣಿದು ನಡೆದ ಎಲ್ಲ ಘಟನೆಯನ್ನು ವಿವರಿಸಿದ್ದಾಳೆ.

ಆ ಮೇಲೆ ಪೊಲೀಸರ ಕಡೆಗೆ ಹೋದಾಗ ಅಲ್ಲಿ ಯಾರು ಕಿವಿಗೆ ಹಾಕಿಕೊಳ್ಳಲಿಲ್ಲ. ನಂತರ ಮಹೋಬಾ ಜಿಲ್ಲೆಯ ಎಸ್ಪಿ  ಅನೀಸ್ ಅಹಮದ್ ಅನ್ಸಾರಿ ಕಡೆಗೆ ಹೋದಾಗ ಅವರ ಆದೇಶದ ಮೇರೆಗೆ F I R ದಾಖಲಿಸಲಾಯಿತು. ಅಷ್ಟಕ್ಕೂ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆದಷ್ಟು ಬೇಗ ಆತನನ್ನು ಸೆರೆಹಿಡಿಯಲಾಗುವದು ಎಂದು ಎಸ್ಪಿ  ಅನೀಸ್ ಅಹಮದ್ ಅನ್ಸಾರಿ ವಿವರಿಸಿದ್ದಾರೆ.

1 Comment

Leave a Reply

Your email address will not be published. Required fields are marked *