ತಿಳಿದುಕೊಳ್ಳಿ ಬಂಗಾರದ ಗಾಡಿಯಲ್ಲಿ ತಿರುಗಾಡುವ ಬಂಗಾರದ ಮನುಷ್ಯನ ವ್ಯವಸಾಯ ಮತ್ತು ಹವ್ಯಾಸ.

ತಿಳಿದುಕೊಳ್ಳಿ ಬಂಗಾರದ ಗಾಡಿಯಲ್ಲಿ ತಿರುಗಾಡುವ ಬಂಗಾರದ ಮನುಷ್ಯನ ವ್ಯವಸಾಯ ಮತ್ತು ಹವ್ಯಾಸ.

 

ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಬಂಗಾರದ ಚೈನು ಧರಿಸಿದ ವ್ಯಕ್ತಿಯ ಭಾವಚಿತ್ರ ಎಲ್ಲೆಡೆಯೂ ಟ್ರೆಂಡ್ ಆಗುತ್ತಿದೆ. ಆದರೆ ಆ ಯುವಕ ಯಾರು? ಎನ್ನುವದು ಅನೇಕರಿಗೆ ಗೊತ್ತಿಲ್ಲ. ಇನ್ನು ಕೆಲವರಿಗೆ ಗೊತ್ತಿರಲೂಬಹುದು. ಇದ್ದರೂ ಪರಿಪೂರ್ಣ ಮಾಹಿತಿ ಇರಲಿಕ್ಕಿಲ್ಲ. ಆದ್ದರಿಂದ ಆ ವ್ಯಕ್ತಿಯ ಪರಿಚಯ ನಿಮಗಾಗಿ.


ಯುವಕ ನೆರೆಯ ರಾಜ್ಯ ಮಹಾರಾಷ್ಟ್ರದಲ್ಲಿಯ ಪುಣೆಯ ಸಮೀಪದ ಪಿಂಪರಿ ಚಿಂಚವಡ ನಗರದವನು. ಅವನ ಸದ್ಯದ ಜೀವನ ಅಂದರೆ ಯಾವುದೇ ರಾಜಕುಮಾರನಿಗೆ ಕಮ್ಮಿ ಇಲ್ಲ ಎನ್ನಬಹುದು. ಅದು ಅವನ ಭಾವಚಿತ್ರಗಳಿಂದಲೂ ಸಹ ಪರಿಚಯವಾಗುತ್ತದೆ. ಇವನ ಹೆಸರು ಸನಿ ವಾಘಚೌರೆ. ಸನಿಯ ಗೋಲ್ಡನ್ ಆಡಿ ಕಾರು, ಗೋಲ್ಡನ್ ಶೂಜ್ ಹಾಗೂ ಮೈಮೇಲೆ ಬಂಗಾರದ ಆಭರಣ ಇವು ಆತನ ದಿನನಿತ್ಯದ ಸಾಮಾನ್ಯ ಉಡುಪುಗಳು.

ಈತನ ಜೊತೆಗೆ ಅನೇಕ ರಾಜಕೀಯ ಧುರೀಣರು ಹಾಗೂ ಸಿನೆ ಕಲಾವಿದರು ಕಂಡು ಬರುತ್ತಾರೆ. ಸನಿ ಇಂತಹ ಅಪಾರ ಸಂಪತ್ತಿನ ಗಳಿಕೆ ಹೇಗೆ ಮಾಡಿರಬಹುದೆನ್ನುವಿರಾ? ಹಾಗಾದರೆ ಇವನ ಉತ್ಪನ್ನದ ಬಗ್ಗೆ ತಿಳಿದುಕೊಳ್ಳೋಣ.

ಫಿಲಂ ಫಾಯನಾನ್ಸ್:-
ಸಿನೆಮಾ ತಯಾರಿಕೆಗೆ ಸಾಕಷ್ಟು ಖರ್ಚು ಬರುತ್ತದೆ. ಬಾಲಿವುಡ್ ನಲ್ಲಿ ಯಾವುದೇ ಚಿತ್ರ ತಯಾರಿಸಲು ಸುಮಾರು 100 ಕೋಟಿ ರೂಪಾಯಿಗಳ ಅವಶ್ಯಕತೆ ಇರುತ್ತದೆ. ಇಂತಹ ಖರ್ಚಿಗಾಗಿ ಬಂಡವಾಳ ಹೂಡಿಕೆಯ ಕೆಲಸ ಸನಿ ಮಾಡುತ್ತಾನೆ. ಇದರ ಜೊತೆಗೆ ನಾಯಕನಟ ವಿವೇಕ್ ಓಬೇರಾಯ್ ಜೊತೆಗೆ ಕರ್ಮಾ ಇಂಟರ್ ಪ್ರಾಯಜೆಸ್ ನಲ್ಲಿ ಪಾರ್ಟನರ್ ಸಹ ಇದ್ದಾನೆ. ಈ ಕಂಪನಿ ಕನ್ ಸ್ಟ್ರಕ್ಶನ್ ಕ್ಷೇತ್ರದಲ್ಲಿ ತನ್ನ ಕೆಲಸ ಮಾಡುತ್ತಿದೆ.


ಸನಿಯ ಗಳಿಕೆ ಹೇಗೋ ಹಾಗೆ ಖರ್ಚುಸಹ ತುಂಬಾ ದುಬಾರಿಯಾಗಿದೆ. ಸನಿ ಹತ್ತಿರ ಇದ್ದ i phone 6s & 7 ಎರಡು ಮೊಬೈಲ್ ಗಳಿದ್ದು ಎರಡೂ ಬಂಗಾರ ಹಾಗೂ ರತ್ನಜಡಿತವಾಗಿವೆ. ಈ ಎರಡು ಮೊಬೈಲ್ ಗಳ ಬೆಲೆ ಸುಮಾರು 5 ಲಕ್ಷ ರೂಪಾಯಿಗಳ ವರೆಗೆ ಇದೆ. ಇವನು ಉಪಯೋಗಿಸುವ ಅಲಿಶಾನ್ ಗಾಡಿಗಳು ಸಹ ತುಂಬಾ ದುಬಾರಿಯಾಗಿವೆ. ಮರ್ಸಿಡೀಜ್ ಗಾಡಿಯಂತು ಬಂಗಾರದ ಹೋದಿಕೆಯಲ್ಲಿಯೇ ಮುಚ್ಚಿ ಹೋಗಿದೆ. Audi 7 ಇದಕ್ಕೂ ಬಂಗಾರದ ಲೇಪನ ಅಷ್ಟೇ ಅಲ್ಲ Audi Q 5, Audi A 4, BMW Z 4 , Jagaur X F, ಇವೆಲ್ಲಾ ಗಾಡಿಗಳು ಸಾಲಾಗಿ ನಿಂತಿರುತ್ತವೆ. ವಿಶೇಷವೆನೆಂದರೆ, ತನ್ನ ಗಾಡಿಯ ನಂಬರ್ ಪ್ಲೇಟ್ ಸಂಪೂರ್ಣವಾಗಿ ರತ್ನಗಳಲ್ಲಿಯೇ ಮಾಡಿಸಿದ್ದಾನೆ.


ಗಣೇಶ ಭಕ್ತನಾದ ಈತ ಬಾಲಿವುಡ್ ಕಲಾವಿದರ ಜೊತೆಗೆ ನೋಡಬಹುದು ಮತ್ತು ರಾಜಕಿಯದಲ್ಲಿಯೂ ಸಹ ಇವರ ಕುಟುಂಬ ಕಾರ್ಯಶೀಲವಾಗಿದೆ.

1 Comment

Leave a Reply

Your email address will not be published. Required fields are marked *