ಪ್ರವಾಸಕ್ಕಾಗಿ ಜಗತ್ತಿನಲ್ಲಿಯ ಅತ್ಯಂತ ಅಗ್ಗದ ದೇಶಗಳು, ಇಲ್ಲಿ 70₹ ಗೆ ಊಟ 200₹ ಗಳಿಗೆ ಹೋಟೆಲ್

ಪ್ರವಾಸಕ್ಕಾಗಿ ಜಗತ್ತಿನಲ್ಲಿಯ ಅತ್ಯಂತ ಅಗ್ಗದ ದೇಶಗಳು, ಇಲ್ಲಿ 70₹ ಗೆ ಊಟ 200₹ ಗಳಿಗೆ ಹೋಟೆಲ್

ಫಾರೆನ್ ಕಂಟ್ರಿಗಳಲ್ಲಿ ತಿರುಗಾಡಬೆಕೆನ್ನುವ ಆಸೆ ಯಾರಿಗೆ ಇರುವದಿಲ್ಲ? ಆದರೆ ಆ ಆಸೆ, ಕನಸು ನನಸಾಗದೆ ಹಾಗೇ ಉಳಿಯುತ್ತವೆ. ಸರ್ವ ಸಾಮಾನ್ಯರ ಭಾವನೆಗಳ ಪ್ರಕಾರ ಹೋರದೇಶಕ್ಕೆ ಅಂದಾಗ ಸಾಕಷ್ಟು ಹಣ ಬೇಕಾಗುವದೆನ್ನುವ ವಿಚಾರ ಮೊದಲು ಕಾಡುತ್ತದೆ. ಆದರೆ ಅಂಜಬೇಕಾಗಿಲ್ಲ ಹಾಗೂ ಹಣಕ್ಕಾಗಿ ಚಿಂತಿಸಬೇಕಾಗಿಲ್ಲ. ಕನ್ನಡ ಕಂಪುವಿನಲ್ಲಿಇಂತಹ ಕೆಲವು ದೇಶಗಳ ಬಗ್ಗೆ ಮಾಹಿತಿ ತಂದಿದ್ದೀವಿ. ಅಲ್ಲಿ ನಿಮ್ಮ ಬಜೆಟ್ ನಲ್ಲಿ ಪ್ರವಾಸ ಮತ್ತು ಅದರ ಜೊತೆಗೆ ಮನೋರಂಜನೆ ಎರಡು ಸಾಧ್ಯವಿವೆ. ಹಾಗಾದ್ರೆ ಯಾವುವು ಆ ದೇಶಗಳು ನೋಡಿ.

ಥೈಲೆಂಡ್

ಥಾಯಲ್ಯಾಂಡ್ ಹೆಸರು ಕೇಳಿದಾಕ್ಷಣ ನಮ್ಮ ಕಣ್ಣ ಮುಂದೆ ಬರುವದು ಅಲ್ಲಿಯ ನಯನ ಮನೋಹರ ಬೀಚ್ ಗಳು ಮತ್ತು ಪಾರ್ಟಿಗಳು. ಇಲ್ಲಿ ನಿಮಗೆ ಬರೀ 250 ರೂಪಾಯಿಗಳಿಗೆ ರೂಮ್ ಗಳು ಸಿಗುತ್ತವೆ ಹಾಗೆಯೇ 200 ರೂಪಾಯಿಗಳಲ್ಲಿ ಊಟದ ಸೌಲಭ್ಯ ಸಹ.

ನೇಪಾಳ

ನೈಸರ್ಗಿಕ ಸೌಂದರ್ಯಕ್ಕೆ ಸಾಕ್ಷಿ ಯಾಗಿರುವ ನೇಪಾಳದಲ್ಲಿ 600 ₹ ಗಳಿಗೆ ಮೂರು ಸಲ ಊಟದ ರುಚಿ ನೋಡಬಲ್ಲಿರಿ ಹಾಗೂ 270 ₹ ಗಳಲ್ಲಿ ರೂಮ್ ಬುಕ್ ಮಾಡಬಹುದು. ಭಾರತಕ್ಕೆ ನೆರೆಯ ದೇಶವೇ ಆಗಿರತಕ್ಕಂತಹ ಇದು ಒಂದು ಒಳ್ಳೆಯ ಪರ್ಯಾಯವಾಗಿದೆ.

ವ್ಹಿಯೆತ್ನಾಮ್

ಅಗ್ಗದ ಊಟ ತಿಂಡಿ ಹಾಗೂ ಸಾಕಷ್ಟು ಶಾಪಿಂಗ್ ಸಲುವಾಗಿ ಈ ದೇಶದ ಆಯ್ಕೆ ತುಂಬಾ ಚೆನ್ನಾಗಿದೆ. ಇಲ್ಲಿ ಊಟ ಉಪಹಾರ ರುಚಿ ಬರೀ 66 ₹ ಗಳಲ್ಲಿ ಆಗಬಹುದು. ಇನ್ನು ತಂಗಲು ಇಲ್ಲೂ ಅಷ್ಟೆ 200 ₹ ಗಳಲ್ಲಿ ಹೋಟೆಲ್ ಗಳು ಉಪಲಬ್ಧ.

ಚೀನ

ಚೀನನಲ್ಲಿ ಸುತ್ತಾಡಲು ನಿಮಗೆ ಈ ಮೇಲಿನ ದೇಶಗಳಿಗೆ ಹೋಲಿಸಲಾಗಿ ಇಲ್ಲಿ ಸ್ವಲ್ಪ ಬಜೆಟ್ ಜಾಸ್ತಿಬೇಕಾಗುವದು. ಇಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಅಷ್ಟೇನು ಜಾಸ್ತಿ ಖರ್ಚು ಮಾಡಬೇಕಾಗುವುದಿಲ್ಲ. ಹೀಗೆ ಇಲ್ಲಿ ಪ್ರವಾಸದ ಖರ್ಚು ಕಡಿಮೆ ಯಾಗುವದು.

ಇಂಡೋನೇಷಿಯಾ

ನಿಸರ್ಗದತ್ತ ಸಾಂದರ್ಯದ ಮಜಾ ಸವಿಯಬೇಕು ಅಂದ್ರೆ ನೀವು ಇಂಡೋನೇಷಿಯಾ ಭೆಟ್ಟಿ ಕೊಡಲೇಬೇಕು. ಇಲ್ಲಿ 67 ₹ ಗಳಲ್ಲಿ ಊಟ ಮಾಡಬಹುದು ಹಾಗೂ 250 ₹ ಗಳಲ್ಲಿ ಹೋಟೆಲ್ ಬುಕ್ ಮಾಡಬಹುದು. ಅಷ್ಟೇ ಅಲ್ಲ ಈ ದೇಶವು  ಭಾರತದಿಂದ ಜಾಸ್ತಿ ದೂರ ಸಹ ಇಲ್ಲ.

ಬಲ್ಗೇರಿಯಾ

ಈ ದೇಶ ಪೂರ್ವ ಯುರೋಪ್ ನಲ್ಲಿ ಬರುತ್ತದೆ ಹಾಗೇ ನೋಡಿದರೆ ಯುರೋಪ್ ನಲ್ಲಿ ಅಮೇರಿಕಾ ಮತ್ತು ಆಗ್ನೇಯ ಏಶಿಯಾಗಿಂತಲೂ ಎಲ್ಲವೂ ದುಬಾರಿ ಇದೆ. ಆದರೆ ಬಲ್ಗೇರಿಯಾದಲ್ಲಿ ಮಾತ್ರ ಊಟ ತಿಂಡಿಗೆ ಹಾಗು ಹೋಟೆಲ್ ರೂಮ್ ಸಲುವಾಗಿ ಅಷ್ಟೇನೂ ಜಾಸ್ತಿ ಹಣ  ಬೇಕಾಗುವದಿಲ್ಲ. 1 ಲೀಟರ್ ಬಿಯರ್ ನ ಬೆಲೆ ಇಲ್ಲಿ ಬರೀ 130 ₹ ಹಾಗೂ 600 ₹ ಗಳಲ್ಲಿ ರೂಮ್ ಬುಕ್ ಮಾಡಬಹುದು.

ಕಾಂಬೋಡಿಯಾ

ಸುಂದರ ತಾಣವಾದ ಕಂಬೋಡಿಯಾ ಸಹಿತ ಒಂದು ಒಳ್ಳೆಯ ಡೆಸ್ಟಿನೆಷನ್ ಅನ್ನಬಹುದು. ಇಲ್ಲಿಯೂ ಸಹ ಊಟಕ್ಕೆ ಅಷ್ಟೆನೂ ಖರ್ಚು ಇಲ್ಲ. ಮತ್ತು 250 ₹ ಗಳಲ್ಲಿ ರೂಮ್ ಬುಕ್ ಮಾಡಬಹುದು.

ಪೇರು

ಜಗತ್ತಿನಲ್ಲಿ ತಂಪಾದ ಮತ್ತು ಮ್ಯಾಜಿಕಲ್ ಪ್ಲೆಸ್ ಅಂದರೆ ಪೇರು. ಇಲ್ಲಿ ನೀವೂ 500 ₹ ಗಳಲ್ಲಿ ರೂಮ್ ಬುಕ್ ಮಾಡುವದರೊಂದಿಗೆ 350 ₹ ಗಳಲ್ಲಿ ಊಟ ಸಹ ಲಭ್ಯವಿದೆ.

ಹಾಗಾದರೆ ತಡ ಯಾಕೆ? ಫಾರೆನ್ ಟೂರ್ ಗೆ ನಿಯೋಜನ ಮಾಡಬಹುದಲ್ವ?

ಈ Article ಇಷ್ಟವಾದರೆ ಮರೆಯದೆ ಶೇರ್ ಮಾಡಿ.

2 Comments


  1. It’s really very good information,which should be helpful foreverone ….really nice information…thanks for giving the valuable information regarding the tourism….. thanking you….

    Reply

Leave a Reply

Your email address will not be published. Required fields are marked *