ಉತ್ತರ ಪ್ರದೇಶದ ಜಬಲಪುರ ನಿವಾಸಿಯೊಬ್ಬಳು ತನ್ನ ಮಗಳನ್ನು 12 ವರ್ಷದವಳಿದ್ದಾಗ ನಾಗಪುರದ ರೆಡ್ ಲೈಟ್ ಏರಿಯಾದಲ್ಲಿ ಮಾರಿದ್ದಳು, ಹುಡುಗಿ 24 ವರ್ಷದವಳಾದಾಗ ಮರಳಿ ಬಂದಾಗ ಏನಾಯಿತು?

ಉತ್ತರ ಪ್ರದೇಶದ ಜಬಲಪುರ ನಿವಾಸಿಯೊಬ್ಬಳು ತನ್ನ ಮಗಳನ್ನು 12 ವರ್ಷದವಳಿದ್ದಾಗ ನಾಗಪುರದ ರೆಡ್ ಲೈಟ್ ಏರಿಯಾದಲ್ಲಿ ಮಾರಿದ್ದಳು, ಹುಡುಗಿ 24 ವರ್ಷದವಳಾದಾಗ ಮರಳಿ ಬಂದಾಗ ಏನಾಯಿತು?

ಉತ್ತರ ಪ್ರದೇಶದ ಜಬಲಪುರ ನಿವಾಸಿಯೊಬ್ಬಳು ತನ್ನ ಮಗಳನ್ನು 12 ವರ್ಷದವಳಿದ್ದಾಗ ನಾಗಪುರದ ರೆಡ್ ಲೈಟ್ ಏರಿಯಾದಲ್ಲಿ ಮಾರಿದ್ದಳು. ಹುಡುಗಿ 12 ವರ್ಷಗಳ ವರೆಗೆ ಶೋಷಣೆಗೆ ಗುರಿಯಾದಳು.

ಮುಂದೆ 24 ವರ್ಷದವಳಾದಾಗ ಅವಳ ಭೇಟ್ಟಿ ಒಬ್ಬ ಜಬಲಪುರದ ವ್ಯಕ್ತಿಯೊಂದಿಗೆ ಆಯಿತು. ಆತನಿಗೆ ತನ್ನೆಲ್ಲ ಭೂತಕಾಲದ ಕಥೆ ವಿವರಿಸಿ ಹೇಳಿದ ನಂತರ ಅವನು ಅವಳಿಗೆ ಕುಟುಂಬದವರನ್ನು ಶೋಧಿಸಿ ಮಾಹಿತಿ ನೀಡಿದನು. ತದನಂತರ ಪೊಲೀಸರ ಸಹಾಯದಿಂದ ನಾಗಪುರದ ವೇಶ್ಯಾಗೃಹದಿಂದ ಬಿಡುಗಡೆಗೊಳಿಸಿದರು.

ರೆಡ್ ಲೈಟ್ ಏರಿಯಾದಲ್ಲಿ ೧೨ ವರ್ಷ ಕಳೆದಳು

ನಾಗಪುರದಿಂದ ಮರಳಿ ಬಂದ ಸುನಿತಾಳ ಹೇಳಿಕೆಯ ಪ್ರಕಾರ ತಂದೆಯ ಮಾನಸಿಕ ಸ್ವಾಸ್ಥ್ಯ ಚೆನ್ನಾಗಿಲ್ಲ. ಅವಳು ಕೇವಲ 12 ವರ್ಷದವಳಿದ್ದಾಗ ತಾಯಿ ಒಂದು ಬಸ್ಸಿನಲ್ಲಿ ನನ್ನನ್ನು ನಾಗಪುರಕ್ಕೆ ಕರೆದೊಯ್ದಳು. ಅಷ್ಟೇ ಅಲ್ಲ ಒಂದು ಸ್ಥಳದಲ್ಲಿ ಕರೆದೊಯ್ದು ಇವರು ನಿನ್ನ ವಿದ್ಯಾಭ್ಯಾಸದ ಮತ್ತು ಊಟ ತಿಂಡಿಯ ಖರ್ಚು ಎಲ್ಲವನ್ನು ಮಾಡುತ್ತಾರೆ.ಇಲ್ಲಿ ನೀನು ನಿಶ್ಚಿಂತೆಯಿಂದ ಇರು ಎಂದು ಹೇಳಿದಳು. ಆಮೇಲೆ ನನಗೆ ಜಳಕ ಮಾಡಲು ಕಳಿಸಿದರು. ಜಳಕ ಮಾಡಿ ಬರುವಷ್ಟರಲ್ಲಿಯೇ ಅಮ್ಮ ಅಲ್ಲಿ ಇರಲಿಲ್ಲ. ಆಮೇಲೆ ಶುರುವಾಯ್ತು ನನ್ನ ಜೀವನ. ಅಂತಹ ಜನರ ಬಗ್ಗೆ ಹೇಳಲು ನನಗೆ ಹೇಸಿಗೆಯಾಗುತ್ತದೆ. ಅಲ್ಲಿಯ ಜನ ಅಲ್ಪ ವಯಸ್ಸಿನ ಮಕ್ಕಳನ್ನು ಖರೀದಿಸಿ ಅವರಿಗೆ ತಪ್ಪು ಕೆಲಸಗಳನ್ನು ಮಾಡುವಂತೆ ಶಿಕ್ಷಿಸುತ್ತಿದ್ದರು. ತಾಯಿ ತೀರಿಕೊಂಡಿದ್ದಳು. ಮಗಳಿಗೆ ವೇಶ್ಯಾವಾಟಿಕೆಯಲ್ಲಿ ತೊಡಗಿಸಿ ತಾಯಿ ಗಂಡನನ್ನು ಬಿಟ್ಟು ಓಡಿ ಹೋಗಿದ್ದಳು. ಸುನಿತಾಳ ಸಂಬಂಧಿಕರ ಅನುಸಾರ ಇವಳ ತಾಯಿ ತೀರಿಕೊಂಡು ಸುಮಾರು 5 ವರ್ಷಗಳಾದರೂ ಆಗಿರಬಹುದೆಂದು.

ಕುಟುಂಬದಲ್ಲಿ ಈಗ ತಂದೆಯ ವ್ಯತಿರಿಕ್ತ ಒಬ್ಬ ಚಿಕ್ಕ ತಮ್ಮನೊಬ್ಬನಿದ್ದಾನೆ. ಅವನು ದಿನಗೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾನೆ.

Leave a Reply

Your email address will not be published. Required fields are marked *