ಏನಿದು ಸುದ್ದಿ ; ಪೂರ್ತಿ ಓದಿ

ಏನಿದು ಸುದ್ದಿ ; ಪೂರ್ತಿ ಓದಿ

ನಿಶ್ಚಿತಾರ್ಥದ ನಂತರ ಹುಡುಗಿ ತಾನು ಬಸುರಿ ಇದ್ದ ಸುದ್ದಿಯನ್ನು ತನ್ನ ಗಂಡನಾಗ ಬಯಸುವವನಿಗೆ ಹೇಳಿದಾಗ, ಹುಟ್ಟುವ ಮಗ ತನ್ನದಾಗಲಿಕ್ಕೆ ಸಾಧ್ಯವೇ ಇಲ್ಲ ಎಂದು ಹೇಳಿ ನಿಶ್ಚಿತಾರ್ಥ ಮುರಿದು ಬಿಟ್ಟನು. ತನ್ನ ಪ್ರಿಯಕರನಿಂದಲೇ ನನಗೆ ವಂಚನೆಯಾಯಿತು ಎಂಬ ಕೊರಗು ಮನಸ್ಸಿನಲ್ಲಿ ಇಟ್ಟುಕೊಂಡು , ಹುಡುಗಿ ಪರಿಸ್ಥಿತಿಗೆ ಧೈರ್ಯದಿಂದ ಎದುರು ಹೋಗದೆ, ಮಾಡಬಾರದ ಕೆಲಸಕ್ಕೆ ಕೈ ಹಾಕಿದಳು.

ನಾಲ್ಕು ತಿಂಗಳು ಮೊದಲು ವಿಮಲಾ ಅನ್ನುವ ಹುಡುಗಿಯ ನಿಶ್ಚಿತಾರ್ಥ ದಿವಾನ್ ಅನ್ನೊ ಹುಡುಗನ ಜೊತೆಗೆ ಆಗಿತ್ತು. ಇಬ್ಬರೂ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ನಿಶ್ಚಿತಾರ್ಥದ ನಂತರ ಇಬ್ಬರೂ ಕಾಲೇಜ್ ಕ್ಕೆ ಜೊತೆಯಲ್ಲಿಯೇ ಹೋಗುತ್ತಿದ್ದರು ಮತ್ತು ಜೊತೆಯಲ್ಲಿಯೇ ಬರುತ್ತಿದ್ದರು. ಇದೇ ಒಡನಾಟದಲ್ಲಿ ಇಬ್ಬರು ಪರಸ್ಪರ ಸಮ್ಮತಿಯಿಂದ ಒಂದಾಗಿದ್ದಾರೆ. ನಂತರ ವಿಮಲಾ ಗರ್ಭಧರಿಸಿದ್ದಾಳೆ.

ಘಟನೆಯ ಗಾಂಭೀರ್ಯ ಅರಿತು ವಿಮಲಾ ತನ್ನ ಮದುವೆಯಾಗುವ ಹುಡುಗನಿಗೆ ವಿಷಯ ಸೂಚಿಸಿದ್ದಾಳೆ. ಇದನ್ನು ಕೇಳಿ ದಿವಾನ್ ನನ್ನಿಂದ ನೀನು ಗರ್ಭ ಧರಿಸಿಲ್ಲ, ಇದು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದಾನೆ. ಅಷ್ಟೇ ಅಲ್ಲ ನಿಶ್ಚಿತಾರ್ಥವನ್ನು ಸಹ ಕ್ಯಾನ್ಸಲ್ ಮಾಡಿದ್ದಾನೆ. ಇದೇ ವಿಷಯವಾಗಿ ಇಬ್ಬರ ಮಧ್ಯೆ ಜಗಳವೂ ಆಗಿದೆ. ಹುಡುಗ ಯಾವುದಕ್ಕೂ ಜಗ್ಗದ್ದರಿಂದ ವಿಮಲಾ ಮನೆಯಿಂದ ಕೀಟನಾಶಕ ಔಷಧಿಯನ್ನು ದಿವಾನನ ಮುಂದೆಯೇ ಸೇವಿಸಿದ್ದಾಳೆ. ನಂತರ ಕುಟುಂಬದವರು ಆರೋಗ್ಯ ಕೇಂದ್ರಕ್ಕೆ ಒಯ್ಯಲಾಗಿ ಉಪಚಾರದ ಸಂದರ್ಭದಲ್ಲಿಯೇ ಅಸುನೀಗಿದ್ದಾಳೆ.

ವಿಮಲಾಳ ಮೃತದೇಹ

ವಿಮಲಾಳ ಮೊಬೈಲ್ ತೆಗೆದುಕೊಂಡು ಓಡಿಹೋದ ದಿವಾನ

ವಿಮಲಾಳಿಗೆ ಆರೋಗ್ಯ ಕೇಂದ್ರ ತಲುಪಿಸುವಾಗ ಪ್ರಿಯಕರ ದಿವಾನ್ ನು ಅವಳ ಜೊತೆಯಲ್ಲಿದ್ದ. ಅವಳ ಸಾವಿನ ಸುದ್ದಿ ಕೇಳಿದಾಗ ದಿವಾನ್ ಸದ್ದಿಲ್ಲದೆ ಜಾರಿಕೊಂಡು, ವಿಮಲಾಳ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ, ಮನೆಯಿಂದ ಅವಳ ಮೊಬೈಲ್ ತೆಗೆದುಕೊಂಡು ಪರಾರಿಯಾಗಿದ್ದಾನೆ.

ಆಸ್ಪತ್ರೆ ಹೊರಗೆ ಪರಿಜನರು

ಘಟನೆ ಮಧ್ಯಪ್ರದೇಶದ ಇಂದೂರ ಜಿಲ್ಲೆಯ ಖೆಡಕಿ ಗ್ರಾಮದಲ್ಲಿ ವರದಿಯಾಗಿದೆ.

Leave a Reply

Your email address will not be published. Required fields are marked *