ಬಿಸಿಸಿಐ ವಿರುದ್ಧ ಸೆಹವಾಗ್ ರ ಬಿರುಸಿನ ಬ್ಯಾಟಿಂಗ್, ಬಹಿರಂಗ ಪಡಿಸಿದ ವಿಚಾರ ವಿವಾದಕ್ಕೀಡಾಗುವ ಸಾಧ್ಯತೆ!

ಬಿಸಿಸಿಐ ವಿರುದ್ಧ ಸೆಹವಾಗ್ ರ ಬಿರುಸಿನ ಬ್ಯಾಟಿಂಗ್, ಬಹಿರಂಗ ಪಡಿಸಿದ ವಿಚಾರ ವಿವಾದಕ್ಕೀಡಾಗುವ ಸಾಧ್ಯತೆ!

ಭಾರತದ ಪೂರ್ವ ಆರಂಭಿಕ ಆಟಗಾರ ವೀರೂ ಎಂದೇ ಖ್ಯಾತಿಪಡೆದ ವಿರೇಂದ್ರ ಸೆಹವಾಗ್ ಮತ್ತೆ ಜೋರಾಗಿ ಬ್ಯಾಟ್ ಬೀಸಿದ್ದಾರೆ ಆದರೆ ಇದು ಬಿಸಿಸಿಐ ವಿರುದ್ಧ.

ಕಿರುತೆರೆಯ ಒಂದು T V ಚಾಟ್ ಶೋನಲ್ಲಿ ವೀರೂ ಈ ಬಗ್ಗೆ ತಮ್ಮ ಮನಸ್ಸಿನಲ್ಲಿಯ ಮಾತು ಹೊರ ಹಾಕಿದ್ದಾರೆ.

ನಾನು ಕೋಚ್ ಆಗದೇ ಇರಲು ಕಾರಣ ಹುಡುಕಿ ಕೊಂಡಿದ್ದೆನೆ. ಏನೆಂದರೆ ಯಾರು ಕೋಚ್ ನನ್ನು ಆಯ್ಕೆ ಮಾಡುವವರಿದ್ದರೋ ಅವರ ಜೊತೆಗೆ ನನ್ನ ಸೆಟ್ಟಿಂಗ್ ಇರಲಿಲ್ಲ. ಆದ್ದರಿಂದ ನಾನು ಈ ಪ್ರಕ್ರಿಯೆಯಲ್ಲಿ ಹಿಂದೆ ಬಿದ್ದೆ ಮತ್ತು ನಾನು ಭಾರತ ಕ್ರಿಕೆಟ್ ತಂಡದ ಕೋಚ್ ಆಗುವ ಬಗ್ಗೆ ಯಾವತ್ತೂ ಕನಸು ಕಂಡವನಲ್ಲ.

ಮುಂದೆ ಹೀಗೂ ಹೇಳಿದ್ದಾರೆ, ನಾನು ತಂಡದ ನಾಯಕ ವಿರಾಟ್ ಜೊತೆಯೂ ಸಹ ಈ ವಿಷಯವಾಗಿ ಮಾತನಾಡಿ ಅವರು ಸಮ್ಮತಿಸಿದ ಮೇಲೆಯೇ ಅರ್ಜಿ ಹಾಕಿದ್ದೆ. ಬಿಸಿಸಿಐ ಸಚಿವರಾದ ಅಮಿತಾಬ್ ಚೌಧರಿ ಮತ್ತು ಜಿಎಮ್ (ಗೇಮ್ ಡೆವಲಪ್ ಮೆಂಟ್) ಎಮ್ ವಿ ಶ್ರೀಧರ ಇಬ್ಬರು ನನ್ನ ಕಡೆಗೆ ಬಂದು ಈ ವಿಷಯವಾಗಿ ಚರ್ಚಿಸಿ ಅರ್ಜಿ ಸಲ್ಲಿಸಲು ಹೇಳಿದ್ದರು.

ಅಷ್ಟೇ ಅಲ್ಲ ಚಾಂಪಿಯನ್ ಟ್ರಾಫಿ ಸಂದರ್ಭದಲ್ಲಿ ರವಿ ಶಾಸ್ತ್ರಿಯವರಿಗೆ ನೀವೂ ಕೋಚ್ ಸ್ಥಾನಕ್ಕಾಗಿ ಅರ್ಜಿ ಸಲ್ಲಿಸುವಿರಾ? ಎಂದು ಕೇಳಿದಾಗ ನಾನು ಒಮ್ಮೆ ಮಾಡಿದ ತಪ್ಪನ್ನು ಮತ್ತೊಮ್ಮೆ ಪುನರಾವರ್ತಿಸುವದಿಲ್ಲ ಎಂತಲೂ ಹೇಳಿದ್ದರು. ಒಂದು ವೇಳೆ ರವಿ ಶಾಸ್ತ್ರಿಯವರು ಆಗ ಸಮ್ಮತಿ ಸೂಚಿಸಿದ್ದರೆ ನಾನು ಅರ್ಜಿ ಸಲ್ಲಿಸುವ ಚಾನ್ಸೆ ಇರುತ್ತಿರಲಿಲ್ಲ. ಅದಕ್ಕಾಗಿ ಈ ಮೇಲಿನ ಎಲ್ಲ ವಿಷಯಗಳ ಮೇಲೆ ಸಾಕಷ್ಟು ವಿಚಾರ ಮಾಡಿ ನಾನು ಒಂದು ಹಂತಕ್ಕೆ ಬಂದು ಈ ನಿರ್ಧಾರವನ್ನು ತೆಗೆದುಕೊಂದಿದ್ದೆ, ಆದರೆ ಅದರಲ್ಲಿ ಈ ಮೇಲೆ ಹೇಳಿದ ಕಾರಣದಿಂದ (ಸೆಟ್ಟಿಂಗ್) ನನಗೆ ಯಶಸ್ಸು ಸಿಗಲಿಲ್ಲ.

ಭವಿಷ್ಯದಲ್ಲಿಯೂ ಸಹ ನಾನು ಎಂದಿಗೂ ಕೋಚ್ ಸ್ಥಾನಕ್ಕೆ ಇಷ್ಟ ಪಡುವದಿಲ್ಲ ಎಂದು ಹೇಳಲು ಮರೆತಿಲ್ಲ.

Leave a Reply

Your email address will not be published. Required fields are marked *