ಈ ಫೋಟೋ ನೋಡಿ ಜನ ಅಮಿತಾಬ್ ಬಚ್ಚನ್ ಗೆ ಟ್ರೊಲ್ ಮಾಡಿದ್ದೇಕೆ? ಅಂಥದ್ದೆನಿದೆ ಈ ಫೋಟೋ ದಲ್ಲಿ?

ಈ ಫೋಟೋ ನೋಡಿ ಜನ ಅಮಿತಾಬ್ ಬಚ್ಚನ್ ಗೆ ಟ್ರೊಲ್ ಮಾಡಿದ್ದೇಕೆ? ಅಂಥದ್ದೆನಿದೆ ಈ ಫೋಟೋ ದಲ್ಲಿ?

 

ಪಿಂಕ್ ಚಲಚಿತ್ರದ ನೆನಪಿನಲ್ಲಿ ಬಾಲಿವುಡ್ ಬಾದಶಾಹ್ ಅಮಿತಾಬ್ ಬಚ್ಚನ್ ಮಾಡಿದ ಪೋಸ್ಟ್ ನೆಟ್ಟಿಗರ ಟೀಕೆಗೆ ಗುರಿಯಾಗಿದೆ.

74 ವರ್ಷದ ವಯಸ್ಸಿನಲ್ಲಿಯೂ ಬಾಲಿವುಡ್ ನ ಮಹಾನಾಯಕ ಅಮಿತಾಬ್ ಬಚ್ಚನ್ ಫಿಲಂ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಹೆಚ್ಚು ಎಕ್ಟಿವ್ ಆಗಿರುತ್ತಾರೆ. ಹಾಗೂ ಪೋಸ್ಟ್ ಗಳನ್ನು ಸಹ ಮಾಡುತ್ತಿರುತ್ತಾರೆ. ಇಂತಹದೇ ಒಂದು ಪೋಸ್ಟ್ ನೆಟ್ಟಿಗರ ಟೀಕೆಗೆ ಕಾರಣವಾಗಿದೆ. 16 ಸಪ್ಟೆಂಬರ್ ದಂದು ಕಳೆದ ವರ್ಷ ಬಿಡುಗಡೆಯಾದ ಅಮಿತಾಬ್ ರ ‘ಪಿಂಕ್‘ ಚಲನಚಿತ್ರಕ್ಕೆ ಒಂದು ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ,ಅದನ್ನು ನೆನಪಿಸಿ ‘ಪಿಂಕ್‘ ಚಿತ್ರದ ಟೀಮ್ ನೊಂದಿಗಿನ ಒಂದು ಫೋಟೋ ಶೆಅರ್ ಮಾಡಿದ್ದರು.

ಟ್ರೊಲ್ ಗೆ ಕಾರಣ :- ನೆಟ್ಟಿಗರು ಬೇಸರವಾಗಲಿಕ್ಕೆ ಕಾರಣ ಬಿಗ್ ಬಿ ಪೋಸ್ಟ್ ಮಾಡಿದ ಫೋಟೋದಲ್ಲಿ ಚಲನ ಚಿತ್ರದಲ್ಲಿಯ ಯಾವ ನಟಿಯೂ ಇಲ್ಲದಿರುವದು.

ಯಾಕೆಂದರೆ , ಚಿತ್ರದ ಕಥೆ ಪೂರ್ಣತಃ ಮಹಿಳೆಯರ ಜೀವನದ ಮೇಲೆ ಆಧಾರಿತವಾದ ಕಾರಣ ಹಾಗೂ ಚಿತ್ರದಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡ ತಾಪಸಿ ಪನ್ನು, ಕೀರ್ತಿ ಮತ್ತು ಎಂಡ್ರಿಯಾ ಈ ಮೂವರುಗಳು ಒಳ್ಳೆಯ ಅಭಿನಯ ಪ್ರಸ್ತುತ ಪಡಿಸಿದ್ದರು. ಅಷ್ಟೇ ಅಲ್ಲ ಚಿತ್ರಕ್ಕೆ ನ್ಯಾಷನಲ್ ಅವಾರ್ಡ್ ಸಹ ದೊರಕಿತ್ತು. ಕ್ಯಾಪ್ಶನ್ ನಲ್ಲಿ ಪಿಂಕ್ ಚಲನಚಿತ್ರ ತಂಡ. ಎಲ್ಲರೂ ಒಂದೇ ಫ್ರೇಮ್ ನಲ್ಲಿ , ಎಲ್ಲರೂ ಸ್ವತಂತ್ರ, ನ್ಯಾಷನಲ್ ಅವಾರ್ಡ್ ವಿನ್ನರ್ಸ್….. ಎಂದು ಬರೆದಿದ್ದರಿಂದ ಬಾಲಿವುಡ್ ಬಿಗ್ ಬಿ ಟೀಕೆಗೆ ಗುರಿಯಾದರು.

ಕೆಲವು ಟೀಕೆ ಟಿಪ್ಪಣಿಗಳು
● ಒಬ್ಬ ಯೂಜರ್ “ಆ ಮೂರೂ ಹುಡುಗಿಯರು ಎಲ್ಲಿ ಕಾಣ್ತಾ ಇಲ್ಲ ಅವರು ಸ್ವತಂತ್ರವಾಗಿ ಇರುತ್ತಾರಾ? ಅವರದು ಸಹ ಫೋಟೋ ಪೋಸ್ಟ್ ಮಾಡಿ.”

● ಇನ್ನೊಬ್ಬ ಯೂಜರ್ ‘ಏನ್ ಸರ್ ಚಿತ್ರ ಮಹಿಳೆಯರ ಮೇಲೆ ಆಧಾರಿತವಾಗಿದ್ದು ಫ್ರೇಮ್ ನಲ್ಲಿ ಒಬ್ಬರೂ ಮಹಿಳೆಯರಿಲ್ಲವೆ.’

● “ಈ ಚಲನಚಿತ್ರದಲ್ಲಿಯ ಮಹಿಳೆಯರು ಕಳೆದು ಕೊಂಡಿದ್ದಾರಾ?”

ಹೀಗೆಲ್ಲ ಟೀಕೆ ಟಿಪ್ಪಣಿಗಳಿಗೆ ಗುರಿಯಾಗಬೇಕಾಗಿ ಬಂತು ಅಮಿತಾಬ್ ರಿಗೆ.

Leave a Reply

Your email address will not be published. Required fields are marked *