ನಿಮ್ಮ ಬ್ಯಾಂಕ್ A/C  ಕೆಳಗೆ ನಮೂದಿಸಿದ ಬ್ಯಾಂಕಗಳಲ್ಲೇನಾದರೂ ಇದ್ದರೆ ಈ ಬ್ಯಾಂಕಿನ ಚೆಕ್ ರದ್ದುಗೊಳಿಸಲಾಗುವದು……..

ನಿಮ್ಮ ಬ್ಯಾಂಕ್ A/C  ಕೆಳಗೆ ನಮೂದಿಸಿದ ಬ್ಯಾಂಕಗಳಲ್ಲೇನಾದರೂ ಇದ್ದರೆ ಈ ಬ್ಯಾಂಕಿನ ಚೆಕ್ ರದ್ದುಗೊಳಿಸಲಾಗುವದು........

 

ನವದೆಹಲಿ:ಕಳೆದ ಏಪ್ರಿಲ್ 1 ನೇ ತಾರೀಖಿನಂದು ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಒಟ್ಟು ಐದು ಬ್ಯಾಂಕ್ ಗಳನ್ನು  ವಿಲೀನಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.

ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ವಿಲೀನಗೊಳಿಸಿದ ಬ್ಯಾಂಕ್ ಗಳ ಹೆಸರು ಇಂತಿವೆ:1~ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು(SBM) 2~ ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್ (SBH) 3~ ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ(SBP) 4~ಸ್ಟೇಟ್ ಬ್ಯಾಂಕ್ ಆಫ್ ತ್ರಾವಣಕೋರ(SBT) 4~ಸ್ಟೇಟ್ ಬ್ಯಾಂಕ್ ಅಫ್ ಬಿಕಾನೆರ ಆಂಡ್ ಜೈಪುರ್(SBBJ).ಈ ಬ್ಯಾಂಕ್ ಗಳಲ್ಲಿ ಒಂದು ವೇಳೆ ನಿಮ್ಮ A/C ಏನಾದರೂ ಇದ್ದರೆ ನಿಮಗಾಗಿ ಇದು ಮಹತ್ವದ ಸುದ್ದಿ. ಕಾರಣ SBI ನಲ್ಲಿ ವಿಲೀನಗೊಳಿಸಿದ ಐದು ಬ್ಯಾಂಕಗಳ ಹಳೆಯ ಚೆಕ್ ಗಳನ್ನು ಸೆ. 30 ರಿಂದ ಅಮಾನತು (ರದ್ದು) ಗೊಳಿಸಲಾಗುವದು. SBI  ಈಗಾಗಲೇ ತನ್ನೆಲ್ಲ ಸಹಯೋಗಿ ಬ್ಯಾಂಕಿನ ಗ್ರಾಹಕರಿಗೆ ಸೂಚನೆ ಜೊತೆಗೆ ವಿನಂತಿಯೂ ಸಹ ಮಾಡಿದೆ. ಗ್ರಾಹಕರು ಆದಷ್ಟು ಬೇಗ ಹೊಸ ಚೆಕ್ ಬುಕ್ ಗಳ ಸಲುವಾಗಿ ಅರ್ಜಿ ಸಲ್ಲಿಸಬೇಕು, ಯಾಕೆಂದರೆ ಹಳೆಯ ಚೆಕ್ ಗಳು ಸೆ. 30 ರಿಂದ ನಿಷ್ಕ್ರೀಯ ಗೊಳಿಸಲಾಗುವದು.

Leave a Reply

Your email address will not be published. Required fields are marked *