ಗಂಡ ತೀರಿಹೋದ ಹತ್ತು ದಿನಗಳ ನಂತರ ಹೆಂಡತಿಗೆ ಕಾದಿತ್ತು ಅಚ್ಚರಿ! ಶಾಕಿಂಗ್!

ಗಂಡ ತೀರಿಹೋದ ಹತ್ತು ದಿನಗಳ ನಂತರ ಹೆಂಡತಿಗೆ ಕಾದಿತ್ತು ಅಚ್ಚರಿ! ಶಾಕಿಂಗ್!

 

ಒಮ್ಮೊಮ್ಮೆ ನಿಜ ಜೀವನದಲ್ಲೂ ನಡೆವ ಘಟನೆಗಳು ಸಿನಿಮಾ ಕಥೆಗಳ ಹಾಗೇ ರೋಚಕತೆಯನ್ನು ಹುಟ್ಟಿಸುತ್ತವೆ. ಇಂತಹ ಅಸಾಮಾನ್ಯ ಘಟನೆಗಳು ಒಬ್ಬೊಬ್ಬರ ಜೀವನದಲ್ಲಿ ಆಗುವುದುಂಟು. ಅವುಗಳನ್ನು ಕೇಳಿದರೂ ಹಾಗೂ ಓದಿದರೂ ಸಹ ಮೈ ನವಿರೇಳಿಸುತ್ತದೆ.

ಇದೇ ತರಹದ ಒಂದು ಘಟನೆ ಪಕ್ಕದ ರಾಜ್ಯ ಕೇರಳದಲ್ಲಿ ಘಟಿಸಿದೆ. ಕೃಷ್ಣ ಮತ್ತು ರಾಜೇಶ್ರೀ ಎಂಬ ದಂಪತಿಗಳ ಮದುವೆಯಾಗಿ ಸಿಲ್ವರ್ ಜ್ಯೂಬಲಿ ಯಾದರೂ ಇಬ್ಬರ ಮಧ್ಯದಲ್ಲಿಯ ಜಗಳ ಮಾತ್ರ ಯಾವಾಗಲೂ ನಡೆದೆ ಇರುತ್ತಿತ್ತು. ಇವರಿಬ್ಬರಿಗೂ ಮೂರು ಜನ ಮಕ್ಕಳಿದ್ದರು. ಎಷ್ಟೇ ಜಗಳ ಕಾದರೂ ಸಹ ಸಂಸಾರದಲ್ಲಿ ಮತ್ತೆ ಅನ್ನೋನ್ಯವಾಗಿ ಪ್ರೀತಿಯಿಂದ ಇರುತ್ತಿದ್ದರು.


ಹೀಗೆಯೇ ಕಳೆದ ವರ್ಷದ ಕೊನೆಯಲ್ಲಿ ಇಬ್ಬರ ಮಧ್ಯೆ ಸಹಜವಾಗಿ ಜಗಳ ಶುರುವಾಗಿ ಕಲಹ ತಾರಕಕ್ಕೇರಿದಾಗ ಕೃಷ್ಣ ತನ್ನ ಹೆಂಡತಿಗೆ ಹೊಡೆದಿದ್ದನು. ಪತ್ನಿ ಇದನ್ನು ಸಹಿಸಲಾರದೆ ಗಂಡನ ಮೇಲೆ ಕೈಯಲ್ಲಿ ಹಿಡಿದ ಪಾತ್ರೆಯಲ್ಲಿಯ ಬಿಸಿನೀರನ್ನು ಎರಚಿದ್ದಳು. ಈ ಕಾರಣದಿಂದ ಕೃಷ್ಣ ಮನೆ ಬಿಟ್ಟು ಓಡಿ ಹೋದನು. ಸಿಟ್ಟಿನ ಭರದಲ್ಲಿ ಹೋದ ಗಂಡ ಈಗ ಬರ್ತಾನೆ,ಇನ್ನೊಂದು ಸ್ವಲ್ಪ ಸಮಯದ ನಂತರ ಬರುತ್ತಾನೆ, ಎಂದುಕೊಂಡು ಹೆಂಡತಿ ದಾರಿ ಕಾಯ್ದಳು. ಆದರೆ ಗಂಡ ಬರಲಿಲ್ಲ. ಮುಂದೆ 1 ದಿನ 2 ದಿನ ಹೀಗೆ ಅನೇಕ ದಿನಗಳು ಉರುಳಿದವು. ಗಂಡ ಬಾರದಿದ್ದಾಗ ಪೋಲಿಸ್ ಕಂಪ್ಲೆಂಟ್ ಮಾಡಿದರು.

ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡ ಪೊಲೀಸರು ಒಂದು ದಿನ ಹೆಂಡತಿಗೆ, ಗುರುತು ಸಿಗದ ಅನಾಥ ಶವವನ್ನು ತೋರಿಸಿ ಇವರೇ ನಿಮ್ಮ ಗಂಡ ಇರಬಹುದಾ? ಎಂದು ಕೇಳಿದಾಗ ದುಃಖದ ಭರದಲ್ಲಿ ಮತ್ತು ಕೆಲವೊಂದು ಸಾಮ್ಯತೆಗಳು ಶವದಲ್ಲಿ ಕಾಣಿಸಿಕೊಂಡಾಗ ರಾಜಶ್ರೀಗೆ ದಿಕ್ಕೇ ತೋಚದಂತಾಗಿ ವಿಧಿಯಿಲ್ಲದೆ ಸಂಬಂಧಿಕರ ಜೊತೆಗೆ ಅಂತ್ಯಕ್ರಿಯೆ ಮಾಡಿ ಮುಗಿಸಿದರು.

ಏತನ್ಮಧ್ಯೆ ಗಂಡನು ತೆಗೆಸಿಕೊಂಡ ಹೆಲ್ಥ್ ಇನ್ಸೂರೆನ್ಸ್ ನ ಹಣವೂ ಸಹಿತ ಮಡದಿಗೆ ಸೇರಿತು. ಪಶ್ಚಾತಾಪದ ಕೊರಗು ಮನಸ್ಸಿನಲ್ಲಿ ಕಿತ್ತು ತಿನ್ನುತ್ತಿತ್ತು. ಗಂಡನಿಲ್ಲದ ಜೀವನ ಕ್ಷಣ ಕ್ಷಣಕ್ಕೆ ಸಾಯಿಸುತ್ತಿತ್ತು. ದಿನಗಳನ್ನು ನೂಕುವದು ಕಷ್ಟವಾಗುತ್ತಿತ್ತು. ಬೇಸರ ಎಡೆಯಿಲ್ಲದೆ ಬೆನ್ನು ಹತ್ತಿತ್ತು. ಮನಸ್ಸಿನ ತಾಕಲಾಟವನ್ನು ದೂರ ಮಾಡಲು ಸಂಬಂಧಿಕರ ಸಲಹೆಯಂತೆ ಪುಣ್ಯ ಕ್ಷೇತ್ರಗಳಿಗಾದರೂ ಹೋಗಿ ಬರಬೇಕೆಂದು ಸುಬ್ರಮಣ್ಯ ದೇವಸ್ಥಾನಕ್ಕೆ ಹೋದಾಗ ಅಲ್ಲಿ ಅಚ್ಚರಿಯೊಂದು ಕಾದಿತ್ತು. ದೇವಸ್ಥಾನದ ಮೆಟ್ಟಿಲು ಹತ್ತುವಾಗ ರಾಜಶ್ರೀ ಕಣ್ಣು ಅಲ್ಲಿ ಸಾಲಾಗಿ ಕುಳಿತ ಭಿಕ್ಷುಕರ ಸಾಲಿನಲ್ಲಿಯ ಒಬ್ಬ ಭಿಕ್ಷುಕನ ಮೇಲೆ ನೆಟ್ಟಿತು. ಥಟ್ಟನೆ ಆತನೇ ತನ್ನ ಗಂಡ ಕೃಷ್ಣ ಎಂದು ಗುರುತು ಹಿಡಿದು ಓಡಿ ಹೋಗಿ ಅವನನ್ನು ತಬ್ಬಿಕೊಂಡು ಮುತ್ತಿನ ಮಳೆಗೆರೆದಳು.ಅಲ್ಲಿದ್ದ ಇತರ ಭಿಕ್ಷುಕರಿಗೆ ಶಾಕ್! ಹೂಡೆದಂತಯಾಯಿತು. ನೆರೆದಿದ್ದ ನೂರಾರು ಜನರನ್ನು ಲೆಕ್ಕಿಸದೆ ರಾಜಶ್ರೀಯು ತನ್ನ ಗಂಡನ ಬಾಹುಗಳಲ್ಲಿ ಬಂಧಿಸಿ ಕೊಂಡಿದ್ದಳು. ಅಷ್ಟೇ ಅಲ್ಲ, ನೀವು ನನ್ನ ಜೊತೆಗೆ ಇದ್ದಾಗ ನನಗೆ ನಿಮ್ಮ ಮಹತ್ವ ತಿಳಿಯಲಿಲ್ಲ, ನೀವಿಲ್ಲದ ಬಾಳು ಎಷ್ಟೊಂದು ಕಠಿಣವಿದೆ ಎನ್ನುವದನ್ನು ನಾನು ತಿಳಿದುಕೊಂಡೆ ಇನ್ಮುಂದೆ ಎಂದಿಗೂ ನಿಮ್ಮ ಜೊತೆ ಜಗಳ ಕಾಯುವದಿಲ್ಲ , ನನ್ನನ್ನು ಕ್ಷಮಿಸಿರಿ’ ಎಂದು ಮನವಿ ಮಾಡಿ ತನ್ನ ಗಂಡನನ್ನು ಮನೆಗೆ ಕರೆದುಕೊಂಡು ಹೋದಳು.

Leave a Reply

Your email address will not be published. Required fields are marked *