ಭರ್ಜರಿ ಚಿತ್ರದ ವಾರಾಂತ್ಯದ ನಿಜವಾದ ಕಲೆಕ್ಷನ್ ಎಷ್ಟು ಗೊತ್ತಾ?

ಭರ್ಜರಿ ಚಿತ್ರದ ವಾರಾಂತ್ಯದ ನಿಜವಾದ ಕಲೆಕ್ಷನ್ ಎಷ್ಟು ಗೊತ್ತಾ?

 

ಶುಕ್ರವಾರ ಬಿಡುಗಡೆಯಾದ ದ್ರುವ ಸರ್ಜಾ ಅವರ ಭರ್ಜರಿ ಸಿನಿಮಾ ನಿಜವಾಗಿಯೂ ಭರ್ಜರಿಯಾಗಿ ಹಣ ಗಳಿಸಿದೆ ಎಂದು ಕಂಡುಬಂದಿದೆ. ಇಲ್ಲಿಯ ವರೆಗೆ ಮೀಡಿಯಾದವರು ಹೇಳಿದ ಕಲೆಕ್ಷನ್ ಎಷ್ಟು ಅಂತ ಎಲ್ಲ ಬೇರೆ ಬೇರೆ ಯಾಗಿಯೇ ಹೇಳಿದ್ದಾರೆ.

ವಾರದ ಕಲೆಕ್ಷನ್ ಎಷ್ಟು ಅಂತ ವಾರದ ಗಳಿಕೆಯ ಪೋಸ್ಟರ್ ವನ್ನೇ ಚಿತ್ರ ತಂಡದಿಂದ ಬಿಡುಗಡೆ ಮಾಡಿದ್ದಾರೆ. ಆ ಪೋಸ್ಟರ್ ಮೇಲೆಯೇ 25 ಕೋಟಿ ರೂಪಾಯಿಗಳ ಗಳಿಕೆ ಎಂದು ಉಲ್ಲೇಖಿಸಿದ್ದಾರೆ. ಒಂದು ದೊಡ್ಡ ಬ್ರೆಕ್ ನಂತರ ಸಖತ್ತಾಗಿ ಎಂಟ್ರಿ ಕೊಟ್ಟ ದ್ರುವ ಸರ್ಜಾ ಅವರು ಮುಂಬರುವ ಚಿತ್ರಗಳಲ್ಲಿ ತುಂಬಾ ಬೇಡಿಕೆಯ ನಟನಾಗುವ ಸಂಕೇತವನ್ನು ಕೊಟ್ಟಿದ್ದಾರೆ. ತಮ್ಮ ಮೂರನೇಯ ಚಿತ್ರದಲ್ಲಿಯ ಇಂತಹ ಒಂದು ಎಫೋರ್ಟ್ ನ್ನು ಕೊಟ್ಟಿದ್ದಾರೆ. ನಿಜಕ್ಕೂ ತುಂಬಾ ಮೆಚ್ಚುವಂತದ್ದು. ಸಿನಿಮಾ ಬಿಡುಗಡೆಗಿಂತಲೂ ಮುಂಚಿನಿಂದ ಸದ್ದು ಮಾಡುತ್ತಲೇ ಇತ್ತು. ಆದರೆ ಬಿಡುಗಡೆಯಾದ ನಂತರ ಚಿತ್ರದ ಹೆಸರಿನ ಹಾಗೆಯೇ ಭರ್ಜರಿ ಓಪನಿಂಗ್ ಕಂಡು ಕೊಂಡಿದೆ ಎಂದು ಹೇಳಬಹುದು.

ವಾರಾಂತ್ಯದಲ್ಲಿಯೇ 25 ಕೋಟಿ ಗಳಿಕೆಯ ಸಂತಸವನ್ನು ಚಿತ್ರತಂಡವು ಹೊಸ ಪೋಸ್ಟರ್ ಜೊತೆಗೆ ಹಂಚಿಕೊಂಡು ಮತ್ತಷ್ಟು ಅಭಿಮಾನಿ ಬಳಗವನ್ನು ಚಿತ್ರ ಮಂದಿರದ ಕಡೆಗೆ ಸೆಳೆಯುವ ಪ್ರಯತ್ನ ವನ್ನೂ ಸಹ ಮಾಡಿದ್ದಾರೆ. ಅಂತೂ ಇಂತೂ ಕನ್ನಡದಲ್ಲಿ ಮಗದೊಬ್ಬ್ ಉನ್ನತ ಮಟ್ಟದ ನಟನ ಎಂಟ್ರಿ ಭರ್ಜರಿಯಾಗಿ ಆಗಿದೆ ಎಂದು ಹೇಳಬಹುದು.

Leave a Reply

Your email address will not be published. Required fields are marked *