ಶಾಕಿಂಗ್! 5 ಗಂಟೆಗಳ ನಂತರ ಹೆಣ(ಶವ) ಎದ್ದು ಮಾತನಾಡಿತು. ‘ಶಿವಶಿವಾ ನನಗೆ ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಿರಾ?’

ಶಾಕಿಂಗ್! 5 ಗಂಟೆಗಳ ನಂತರ ಹೆಣ(ಶವ) ಎದ್ದು ಮಾತನಾಡಿತು. 'ಶಿವಶಿವಾ ನನಗೆ ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಿರಾ?'

 

ದೊರೆತ ಮಾಹಿತಿಗಳ ಪ್ರಕಾರ ಮಧ್ಯಪ್ರದೇಶದ ಭೋಪಾಲನ ನಿವಾಸಿಯಾದ ಮೊಟುಮಲ ವಾಸವಾನಿ(76) 200 ಸಂಸ್ಥೆಗಳಲ್ಲಿ ನಾನಾವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ವಾಸವಾನಿಯವರಿಗೆ ಸೆಪ್ಟೆಂಬರ್ 6 ರಂದು ಹೃದಯಾಘಾತವಾಗಿತ್ತು. ಆದಕಾರಣ ಅವರಿಗೆ ಉಪಚಾರದ ಸಲುವಾಗಿ ಭೋಪಾಲ್ ನಲ್ಲಿಯ ಚಿರಾಯು ಆಸ್ಪತ್ರೆಯಲ್ಲಿ ಭರ್ತಿ ಮಾಡಲಾಯಿತು. ಆದರೆ ಸೆಪ್ಟೆಂಬರ್ 11 ಸೋಮವಾರದಂದು ಅವರ ಆರೋಗ್ಯ ತುಂಬಾ ಹದಗೆಟ್ಟಿತು. ಆಮೇಲೆ ಅವರನ್ನು ವೆಂಟಿಲೇಟರ್ ಮೇಲೆ ಇಡಲಾಯಿತು. ಮಂಗಳವಾರ ಮುಂಜಾನೆ ಸುಮಾರು ಏಳು ಗಂಟೆಯ ಹೊತ್ತಿಗೆ ಡಾಕ್ಟರ್ ಅವರನ್ನು ಮೃತ ಎಂದು ಘೋಷಿಸಿದರು.

ಇವೆಲ್ಲ ಕ್ರಮಗಳ ನಂತರ ಕುಟುಂಬದವರು ತಮ್ಮ ಸಂಬಂಧಿಕರಲ್ಲಿ ಹಾಗೂ ಸ್ನೇಹಿಗಳಲ್ಲಿ ಮೊಟುಮಲ ವಾಸವಾನಿ ತೀರಿಹೋದ ಸುದ್ಧಿಯನ್ನು ಮುಟ್ಟಿಸಿದರು. ಮೊಟುಮಲ ವಾಸವಾನಿಯವರು ತೀರಿಕೊಂಡ ಸುದ್ಧಿಯನ್ನು ಕೇಳಿ ನೂರಾರು ಜನ ಪರಿಚಿತರು ಸಂಬಂಧಿಕರು ವಾಸವಾನಿಯವರ ಮನೆಯ ಹತ್ತಿರ ಜಮಾಯಿಸಿದರು. ಹಾಗೂ ಅಂತ್ಯಕ್ರಿಯೆಯ ಸಲುವಾಗಿ ಓಡಾಟ ಶುರುವಾಯಿತು.

ಹೊತ್ತುಕೊಂಡು ಹೋಗಲು ಅರ್ಥಿ ತಯಾರಾಯಿತು. ಸ್ಮಶಾನದಲ್ಲಿ ಕಿಚ್ಚು ಕೊಡುವ ಜಾಗದಲ್ಲಿ ಕಟ್ಟಿಗೆಗಳನ್ನು ತಂದು ಹಾಕಲಾಗಿತ್ತು. ಬರೀ ದೂರದ ಊರಿನ ಸಂಬಂಧಿಕರ ದಾರಿಯನ್ನಷ್ಟೆ ಕಾಯುವದು ನಡೆದಿತ್ತು. ಅಂತಿಮ ಸಂಸ್ಕಾರದ ವೇಳೆ 2 ಗಂಟೆ ನಿಗದಿಯಾಗಿತ್ತು. ಜನರೆಲ್ಲ ವಾಸವಾನಿಯವರ ಶವ ಆಸ್ಪತ್ರೆಯಿಂದ ಬರುವ ದಾರಿ ಕಾಯುತ್ತಿದ್ದರು. ಏತನ್ಮಧ್ಯೆ ಕುಟುಂಬದವರು ಅವಶ್ಯಕ ಪೇಪರ್ ವರ್ಕ್ ಮುಗಿಸಿ ಆಸ್ಪತ್ರೆಯಿಂದ ಶವವನ್ನು ತೆಗೆದುಕೊಂಡು ಮನೆಗೆ ತೆರಳುವ ಹೊತ್ತಿನಲ್ಲಿ ಭೈರಾಗಡದ ಚಂಚಲ ಸರ್ಕಲ್ ನಲ್ಲಿ ಬಂದದ್ದೇ ತಡ ಮೊಟುಮಲ ವಾಸವಾನಿಯವರು ಸ್ಟ್ರೆಚರ್ ಮೇಲಿಂದ ಎದ್ದು ಕೂತು “ಶಿವ ಶಿವಾ ನನಗೆ ಎಲ್ಲಿಗೆ ಕರೆದುಕೊಂಡು ಹೂಗುತ್ತಿದ್ದಿರಾ?” ಎಂದು ಸಿಂಧಿ ಭಾಷೆಯಲ್ಲಿ ಕೇಳಿದರು.

ಆಕಸ್ಮಿಕ ನಡೆದ ಘಟನೆಯಿಂದ ಕುಟುಂಬದವರು ಮೂಕವಿಸ್ಮಿತರಾದರು. ಆದಷ್ಟು ಬೇಗ ಅವರನ್ನು ಮನೆಗೆ ಒಯ್ಯಲಾಯಿತು. ಮನೆಯಲ್ಲಿಯೇ ಉಪಸ್ಥಿತರಿದ್ದ ಡಾ.ಶೀತಲ್ ಬಲಾಸಿ ಎನ್ನುವವರು ಮೊಟವಾನಿಯವರ ಚಿಕಿತ್ಸೆಯನ್ನು ಮಾಡಿ ಮತ್ತೆ ಅವರಿಗೆ L.B.S. ಆಸ್ಪತ್ರೆಗೆ ಕರೆದೊಯ್ಯಲು ಹೇಳಿದರು.

Leave a Reply

Your email address will not be published. Required fields are marked *