ಸ್ವಂತದ ಮನೆಯ ಕನಸು ನನಸಾಗಿಸಲು ಕೇಂದ್ರದ ನೆರವಿನಲ್ಲಿ ಮತ್ತಷ್ಟು ಹೆಚ್ಚಳ! ಇಲ್ಲಿದೆ ಸಂಪೂರ್ಣ ವಿವರ.

ಸ್ವಂತದ ಮನೆಯ ಕನಸು ನನಸಾಗಿಸಲು ಕೇಂದ್ರದ ನೆರವಿನಲ್ಲಿ ಮತ್ತಷ್ಟು ಹೆಚ್ಚಳ! ಇಲ್ಲಿದೆ ಸಂಪೂರ್ಣ ವಿವರ.

 

ಕೇಂದ್ರವು 2022 ನೇ ಸಾಲಿನ ವರೆಗೆ ಪ್ರತಿಯೊಬ್ಬರಿಗೂ ಸ್ವಂತದ್ದೆ ಆದ ಮನೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಯೋಗ್ಯ ಬಜೆಟ್ ನಲ್ಲಿ ಲೋಕೋಪಯೋಗಿ ಹಾಗೂ ಖಾಸಗಿ ಭೂಭಾಗಗಳ ಸರಿಯಾದ ಉಪಯೋಗವನ್ನು ಮಾಡಿ ಕಡಿಮೆ ಬಂಡವಾಳದಲ್ಲಿ ಮನೆ ತಯಾರಿಸಲು ಜೊತೆಗೆ ಖಾಸಗಿ ಬಂಡವಾಳಕ್ಕೆ ಪ್ರೋತ್ಸಾಹನ ನೀಡುವ ನಿಟ್ಟಿನಲ್ಲಿ ಕೇಂದ್ರ ಒಂದು ಒಳ್ಳೆಯ ನಿರ್ಧಾರವನ್ನು ತೆಗೆದುಕೊಂಡಿದೆ.

ಮಹಾನಗರಗಳಲ್ಲಿಯ ಭೂಭಾಗಗಳ ಬೆಲೆ ಗಗನಕ್ಕೆ ಮುಟ್ಟುತ್ತಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬನಿಗೂ ತನ್ನದೇ ಆದ ಹಕ್ಕಿನ ಮನೆ ಬೇಕೇ ಬೇಕು. ಇಂತಹದರಲ್ಲಿ ಮನೆಗಳ ಬೆಲೆ ಇಳಿಸುವಲ್ಲಿ ಸರಕಾರ ಯಶಸ್ವಿಯಾದರೆ ಅದೇ ಮಾಡೆಲ್ ನ್ನು ಉಪಯೋಗಿಸಿ ದೇಶದ ವಿವಿಧ ರಾಜ್ಯಗಳಲ್ಲೂ ಇದರ ಉಪಯೋಗ ಮಾಡಬಹುದಾಗಿದೆ.

ಬಜೆಟ್ ಹೋಮ್ಸ್ ಗಳಿಗೆ ಚಾಲನೆ ಕೊಡುವ ಸರಕಾರ ಹಾಗೂ ಖಾಸಗಿ ಜಂಟಿ ತತ್ವದ ಮೇಲೆ ಬಿಲ್ಡರ್ ಕಡೆಯಿಂದ ಕಟ್ಟಲಾಗುವ ಪ್ರತಿ ಮನೆಗೆ ಸದ್ಯಕ್ಕೆ ಕೇಂದ್ರದಿಂದ ದೊರಕುವ ಒಂದೂವರೆ ಲಕ್ಷದ ಬದಲಾಗಿ ಎರಡೂವರೆ ಲಕ್ಷ ರೂಪಾಯಿಗಳ ಅರ್ಥಸಹಾಯ ಲಭಿಸುವ ಬಗ್ಗೆ ನಿರ್ಣಯವಾಗಿದೆ.

ಕೇಂದ್ರದ ಗೃಹ ನಿರ್ಮಾಣ ಮತ್ತು ನಗರ ವಿಕಾಸ ರಾಜ್ಯಸಚಿವ ಹರದೀಪಸಿಂಗ್ ಪುರಿಯವರು ಗುರುವಾರದಂದು (21/9/2017) ಮುಂಬಯಿಯಲ್ಲಿ ‘ NAREDCO(National Real Estate Development Council)’ ಕಟ್ಟಡ ನಿರ್ಮಾಣಗಾರರ ಪರಿಷತ್ತಿನಲ್ಲಿ ಈ ನಿಲುವನ್ನು ಜಾಹೀರು ಪಡಿಸಿದರು.

ಇಲ್ಲಿಯವರೆಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಒಂದೂವರೆ ಲಕ್ಷ ರೂಪಾಯಿ ನಿಧಿ ಸಿಗುತ್ತಿತ್ತು. ಈಗ ಕೇಂದ್ರ PPP(Public Private Partnership) ತತ್ವದ ಮೇಲೆ ತಯಾರಾಗುವ ಮನೆಗಳಿಗೂ ಸಹ ಒಂದು ಲಕ್ಷ ಹೆಚ್ಚಿನ ಅರ್ಥಸಹಾಯ ಜಾಹೀರು ಪಡಿಸಿದೆ. ಹೀಗೆ ಒಂದೂವರೆ ಲಕ್ಷ ರೂಪಾಯಿಗಳ ಬದಲಾಗಿ PMAY (Pradhan Mantri Awas Yojana) ಯೋಜನೆಯ ಅಡಿಯಲ್ಲಿ ಶ್ರೀಸಾಮಾನ್ಯರಿಗೆ ಎರಡೂವರೆ ಲಕ್ಷ ರೂಪಾಯಿಗಳ ನಿಧಿ ಜಾರಿ ಮಾಡಿದ್ದಾರೆ.

ಹೀಗಾಗಿ 2017 ರಿಂದ 2022 ರ ವರೆಗೆ ಬಿಲ್ಡರ್ ಜೊತೆಗೆ ಮನೆ ಖರೀದಿಸುವವರಿಗೂ ತುಂಬಾನೇ ಬಂಪರ್ ಅವಕಾಶ ಕಲ್ಪಿಸಲಾಗಿದೆ ಎಂಬುವ ಪ್ರತಿಕ್ರಿಯೆ ‘ NAREDCO(National Real Estate Development Council)’ ದ ಅಧ್ಯಕ್ಷ ಡಾ.ನಿರಂಜನ ಹಿರಾನಂದಾನಿಯವರು ವ್ಯಕ್ತ ಪಡಿಸಿದ್ದಾರೆ.

 

Leave a Reply

Your email address will not be published. Required fields are marked *