ಮದುವೆಯ ದಿನ 2 ಮೈಲಿ ಉದ್ದದ ಸೀರೆ ತೊಟ್ಟು ಸೋಷಿಯಲ್ ಸೈಟುಗಳಲ್ಲಿ ಚರ್ಚೆಯನ್ನು ಗಿಟ್ಟಿಸಿಕೊಂಡ ಮದುಮಗಳಿಗೆ 10 ವರ್ಷ ಜೈಲುವಾಸ ವಾಗುವ ಸಾಧ್ಯತೆ.

ಮದುವೆಯ ದಿನ 2 ಮೈಲಿ ಉದ್ದದ ಸೀರೆ ತೊಟ್ಟು ಸೋಷಿಯಲ್ ಸೈಟುಗಳಲ್ಲಿ ಚರ್ಚೆಯನ್ನು ಗಿಟ್ಟಿಸಿಕೊಂಡ ಮದುಮಗಳಿಗೆ 10 ವರ್ಷ ಜೈಲುವಾಸ ವಾಗುವ ಸಾಧ್ಯತೆ.

 

 

ಏನಿದು ಕಥೆ? ಓದಿ.….
ಯಾರ ಯಾರ ಹವ್ಯಾಸಗಳು ಏನಿರುತ್ತೊ? ಮತ್ತು ಅವುಗಳಿಗೆ ಯಾವ ರೂಪ ಕೊಟ್ಟು ಹೆಸರು ಗಿಟ್ಟಿಸುತ್ತಾರೊ ಹೇಳೋದಕ್ಕೆ ಸಾಧ್ಯವಿಲ್ಲ. ಶ್ರೀಲಂಕಾ ದಲ್ಲಿ ನಡೆದ ಒಂದು ಘಟನೆಯ ವಿವರ ಇಲ್ಲಿದೆ. ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ನವದಂಪತಿಗಳ ಫೋಟೋ ವೈರಲ್ ಆಗುತ್ತಿದೆ. ಫೋಟೋ ದಲ್ಲಿ ಏನಿದೆ ಅಂದರೆ ಮದುಮಗಳು ತೊಟ್ಟು ಕೊಂಡ ಸೀರೆಯ ಉದ್ದಳತೆ ಸುಮಾರು ಎರಡು ಮೈಲಿಗಳಷ್ಟು! ಶ್ರೀಲಂಕಾದಲ್ಲಿ ಇಲ್ಲಿಯವರೆಗೆ ಯಾವ ಮಹಿಳೆಯೂ ಇಷ್ಟು ಉದ್ದದ ಸೀರೆ ತೊಟ್ಟಿರಲಿಲ್ಲ. ಯಾವ ಸೀರೆ ಯಿಂದ ಇಷ್ಟು ಹೆಸರು ಪಡೆದಳೊ ಅದೇ ಸೀರೆಯ ಕಾರಣದಿಂದ ಈಗ ಅವಳು ಜೈಲಿಗೂ ಹೋಗುವ ಸಾಧ್ಯತೆಗಳು ದಟ್ಟವಾಗಿವೆ.

ಕಾರಣ ಏನು ತಿಳಿದುಕೊಳ್ಳಿ….
ತನ್ನ ಎರಡು ಮೈಲಿ ಉದ್ದದ ಸೀರೆಯನ್ನು ಹಿಡಿಯಲು ಅವಳು ಶಾಲೆಯ 250 ಮಕ್ಕಳನ್ನು ಕರೆಸಿದ್ದಳು. ಇವಳ ಈ ಉಪದ್ವ್ಯಾಪದಿಂದ ಕೋಪಗೊಂಡ ಶ್ರೀಲಂಕಾದ ‘ದ ನ್ಯಾಷನಲ್ ಚೈಲ್ಡ್ ಪ್ರೊಟೆಕ್ಷನ್ ಅಥಾರಿಟಿ’ ಯವರ ಪ್ರಕಾರ ಶಾಲೆಯ ಅಧ್ಯಯನದ ವೇಳೆಯಲ್ಲಿ ಮಕ್ಕಳನ್ನು ತಮ್ಮ ಖಾಸಗಿ ಕೆಲಸಕ್ಕೆ ತೆಗೆದುಕೊಂಡು ಹೋಗುವದು ಕಾನೂನು ಬಾಹೀರ ಎಂದು ಪರಿಗಣಿಸಿದ್ದಾರೆ ಮತ್ತು ಇದಕ್ಕೆ ಕಾನೂನಿನ ಪ್ರಕಾರ 10 ವರ್ಷಗಳ ವರೆಗೆ ಜೈಲು ವಾಸವು ಆಗಬಹುದು.

ಮಕ್ಕಳ ಹಕ್ಕು ಉಲ್ಲಂಘನೆ:-
ಈ ಮಕ್ಕಳನ್ನು ಶ್ರೀಲಂಕಾದಲ್ಲಿಯ ಎರಡು ಶಾಲೆಗಳಿಂದ ಕರೆತರಲಾಗಿತ್ತು. NCPA ಯ ಅಧ್ಯಕ್ಷರಾದ ಮರೀನಿ ದಿ ಲಿವೇರಾ ಅವರ ಪ್ರಕಾರ ಅಪರಾಧಿಗಳಿಗೆ ಬಲು ಬೇಗ ಶಾಸ್ತಿ ಮಾಡಲಾಗುವುದು. ಯಾಕೆಂದರೆ ಮುಂದೆ ಇದೇ ಟ್ರೆಂಡ್ ರೂಢಿ ಆಗಬಾರದು. ಮತ್ತು ಮಕ್ಕಳ ಅಧ್ಯಯನಕ್ಕೆ ಅಡ್ಡಿ ಪಡಿಸುವವರು ಕ್ರಿಮಿನಲ್ ಇದ್ದಾರೆ. ಅವರಿಗೆ ಯೋಗ್ಯ ಸಜೆ ಆಗಲೇಬೇಕು ಎಂದು ನುಡಿದಿದ್ದಾರೆ.

Leave a Reply

Your email address will not be published. Required fields are marked *