‘ಗಾಡ್ ಆಫ್ ಕ್ರಿಕೆಟ್’ ನಿಂದ ಸೆಹವಾಗ್ ಗೆ 1 ಕೋಟಿ 14 ಲಕ್ಷ ರೂಪಾಯಿಗಳ ಸ್ಪೆಷಲ್ ಗಿಫ್ಟ್! ಏನದು?

'ಗಾಡ್ ಆಫ್ ಕ್ರಿಕೆಟ್' ನಿಂದ ಸೆಹವಾಗ್ ಗೆ 1 ಕೋಟಿ 14 ಲಕ್ಷ ರೂಪಾಯಿಗಳ ಸ್ಪೆಷಲ್ ಗಿಫ್ಟ್! ಏನದು?

 

ಕ್ರಿಕೆಟ್ ಜಗತ್ತಿನಲ್ಲಿ ವಿರೂ ಎಂದೇ ಪ್ರಸಿದ್ಧರಾದ ವಿರೇಂದ್ರ ಸೆಹವಾಗ್ ಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಒಂದು ದೊಡ್ಡ ಗಿಫ್ಟ್ ಕೊಟ್ಟಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ವಿರೇಂದ್ರ ಸೆಹವಾಗ್ ಜೋಡಿ ಅಚ್ಚಳಿಯದ ಪುಟಗಳನ್ನು ನಿರ್ಮಿಸಿದೆ. ಇಬ್ಬರ ಜೋಡಿ ಬ್ಯಾಟಿಂಗ್ ಗೆ ಇಳಿದಾಗ ಎದುರಿನ ಬೌಲರಗಳಿಗೆ ಬೆವರು ಹರಿಯುತ್ತಿತ್ತು. ಇವರಿಬ್ಬರು ಬರೀ ಬ್ಯಾಟಿಂಗ್ ಪಾರ್ಟನರ್ ಅಷ್ಟೇ ಅಲ್ಲ ,ಜೊತೆಗೆ ಒಳ್ಳೆಯ ಮಿತ್ರರು ಹೌದು. ಆದ್ದರಿಂದಲೇ ಆಟದ ಮೈದಾನದಿಂದ ನಿವೃತ್ತರಾಗಿದ್ದರೂ ಸಹ ಈಗಲೂ ಇಬ್ಬರ ಒಳ್ಳೆಯ ಬಾಂಧವ್ಯ ಮುಂದು ವರೆದಿದೆ.

ಆ ಕಾರಣದಿಂದಲೇ ಏನೋ ಸಚಿನ್ ಅವರು ತಮ್ಮ ಬ್ಯಾಟಿಂಗ್ ಪಾರ್ಟನರ್ ಗೆ ಒಂದು ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ. ಅದು 1.14 ಕೋಟಿ ರೂಪಾಯಿಗಳ BMW 7 ಸಿರಿಜಿನ ಕಾರು. ಈ ಗಾಡಿಯ ಅನೇಕ ವಿಶೇತೆಗಳಲ್ಲಿ ಒಂದು ವಿಶೇಷವೆನೆಂದರೆ ಇದರ ವೇಗ ಪ್ರತಿ ಗಂಟೆಗೆ 250 ಕಿ.ಮೀ ಇದೆ.

ಇದರ ಬಗ್ಗೆ ಸ್ವತಃ ವಿರೇಂದ್ರ ಸೆಹವಾಗ್ ಅವರು ಟ್ವಿಟರ್ ನಲ್ಲಿ ಖುಷಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಸಚಿನ್ ತೆಂಡೂಲ್ಕರ್ ಮತ್ತು BMW ಇಂಡಿಯಾದವರಿಗೆ ಧನ್ಯವಾದಗಳು ಅರ್ಪಿಸಿದ್ದಾರೆ.

Leave a Reply

Your email address will not be published. Required fields are marked *