ಫಲಾಪೇಕ್ಷೆ ಇಲ್ಲದೆ ಮಾಡಿದ ಸಹಾಯಕ್ಕೇ ಎಂದಾದರೂ ಪ್ರತಿಫಲ ಚೆನ್ನಾಗಿಯೇ ಸಿಗುತ್ತದೆ. ಡಾ. ಹೋವರ್ಡ್ ಕೆಲಿ(ನೈಜ ಕಥೆ)

ಫಲಾಪೇಕ್ಷೆ ಇಲ್ಲದೆ ಮಾಡಿದ ಸಹಾಯಕ್ಕೇ ಎಂದಾದರೂ ಪ್ರತಿಫಲ ಚೆನ್ನಾಗಿಯೇ ಸಿಗುತ್ತದೆ. ಡಾ. ಹೋವರ್ಡ್ ಕೆಲಿ(ನೈಜ ಕಥೆ)

 

 

ಕಡುಬಡತನದಲ್ಲಿ ಜನಿಸಿದ ಹುಡುಗ. ಆತನ ಶಾಲೆಗೆ ಫೀ ಕೊಟ್ಟು ಕಲಿಸುವ ಶಕ್ತಿಯು ಇಲ್ಲದ ತಂದೆ. ಆದರೆ ಮಗನ ಮನಸ್ಸಿನಲ್ಲಿ ಶಾಲೆ ಕಲಿಯುವ ಅದಮ್ಯ ಆಸೆ. ಇದೇ ಕಾರಣಕ್ಕಾಗಿ ಹುಡುಗ ಏನಾದರೂ ಮಾಡಬೇಕು ಶಾಲೆ ಕಲಿಯಲೇಬೇಕು ಎಂಬ ಛಲದಿಂದ ಒಂದು ಅಂಗಡಿಯ ಮಾಲಿಕನೋಂದಿಗೆ ಸಂಪರ್ಕ ಮಾಡಿ ಮನೆ ಮನೆಗೆ ಹೋಗಿ ಅಂಗಡಿಯಲ್ಲಿಯ ವಸ್ತುಗಳನ್ನು ಮಾರ ತೊಡಗಿದನು.

ಒಂದು ಸಲ ಪರೀಕ್ಷೆಯ ಸಮಯದಲ್ಲಿ ಶಾಲೆಗೆ ಫೀ ತುಂಬುವ ಅವಶ್ಯಕತೆ ಇತ್ತು. ಅದಕ್ಕಾಗಿ ಆ ಹುಡುಗನಿಗೆ ಹೆಚ್ಚುವರಿ ಹಣ ಬೇಕಾಗಿತ್ತು. ಆದ್ದರಿಂದ ದಿನಪೂರ್ತಿ ಸಾಮಾನುಗಳನ್ನು ಮಾರುವದಕ್ಕಾಗಿ ಮನೆಯಿಂದ ಮನೆಗೆ ತಿರುಗಾಡುತ್ತಿದ್ದ ಆದರೆ ಅಂದು ವಸ್ತುಗಳ ಮಾರಾಟವಾಗಲಿಲ್ಲ.

ಬಿಸಿಲು ತಲೆಯ ಮೇಲೆರಿ ಸೂರ್ಯ ಬಾಗಿದನು. ಹೊಟ್ಟೆ ಹಸಿವಿನಿಂದ ಬಡಿದುಕೊಳ್ಳುತ್ತಿತ್ತು ತಿನ್ನಲು ಏನು ಸಿಗದ ಕಾರಣ ಯಾವುದಾದರೂ ಮನೆಯಿಂದ ಏನಾದರೂ ತಿನ್ನಲಿಕ್ಕೆ ಬೇಡಿಯೇ ಬಿಡುವೆ, ಎಂದು ನಿಶ್ಚಯಿಸಿ ಒಂದು ಬಾಗಿಲು ಬಡೆದನು. ತಕ್ಷಣ ಒಂದು ಹುಡುಗಿ ಬಾಗಿಲು ತೆರೆದ ನಂತರ ಸಂಕೋಚದಿಂದ ತಿನ್ನಲಿಕ್ಕೆ ಹೇಗೆ ಬೇಡುವದು? ಎಂದು ನಾಚಿಕೆಯಾಗಿ ಕುಡಿಯಲು ಒಂದು ಗ್ಲಾಸ್ ನೀರು ಕೇಳಿದನು. ಹುಡುಗಿ ಹುಡುಗನ ಬಸವಳಿದ ಮುಖವನ್ನು ಕಂಡು ಈತನಿಗೆ ಹಸಿವಾಗಿರಬೇಕು ಎಂದು ಊಹಿಸಿ ತುಂಬು ಗ್ಲಾಸು ಹಾಲನ್ನು ತಂದು ಕೊಟ್ಟಳು. ಹುಡುಗ ಮನದಲ್ಲಿಯೇ ಆನಂದಿಸಿ ಸಾವಕಾಶವಾಗಿ ಹಾಲನ್ನು ಕುಡಿದನು.

ಆಮೇಲೆ ಗ್ಲಾಸ್ಸನ್ನು ಮರಳಿ ಕೊಡುವಾಗ ನಾನು ಎಷ್ಟು ಹಣವನ್ನು ಕೊಡಬೇಕು? ಎಂದು ಹುಡುಗ ಹುಡುಗಿಗೆ ಕೇಳಿದನು. ಅದಕ್ಕೆ ಬದಲಾಗಿ ಹುಡುಗಿ ಯಾವುದಕ್ಕಾಗಿ ಹಣ ಕೊಡಬೇಕು? ನನ್ನ ಅಮ್ಮ ನನಗೆ ಕಲಿಸಿದ್ದಾಳೆ ನೀನು ಯಾರಿಗಾದರೂ ಸಹಾಯ ಮಾಡಿದರೆ ಬದಲಿಗೆ ಹಣವನ್ನು ತೆಗೆದುಕೊಳ್ಳಬೇಡ ಎಂದು.

ಹಾಗಾದರೆ ನಾನು ನಿನಗೆ ತುಂಬು ಹೃದಯದಿಂದ ಧನ್ಯವಾದವನ್ನು ಹೇಳುತ್ತೇನೆ. ಎಂದು ಹುಡುಗಿಯ ಪರಿಚಯ ಮಾಡಿಕೊಂಡು ಅಲ್ಲಿಂದ ನಿರ್ಗಮಿಸಿದನು.

ಕೆಲವು ವರ್ಷಗಳ ನಂತರ ಆ ಹುಡುಗಿಗೇ ತುಂಬಾ ಅನಾರೋಗ್ಯದ ಸಮಸ್ಯೆ ಎದುರಾಯಿತು. ಉಪಚಾರದ ಸಲುವಾಗಿ ಲೋಕಲ್ ಡಾಕ್ಟರ್ ಗಳು ಪಟ್ಟಣದ ಆಸ್ಪತ್ರೆಗೆ ಕಳುಹಿಸಿದರು. ಅಲ್ಲಿ ಅವಳ ಟ್ರಿಟಮೆಂಟ್ ಸಲುವಾಗಿ ಸ್ಪೆಷಲ್ ಡಾಕ್ಟರ್ ಹೋವರ್ಡ್ ಕೆಲಿ ಅವರನ್ನು ಕರೆಸಲಾಯಿತು. ಯಾವಾಗ ಅವರು ಹುಡಿಗಿಯ ಊರಿನ ಹೆಸರು ಕೇಳಿದರು, ತಕ್ಷಣವೇ ತಮ್ಮ ಚೇರ್ ನಿಂದ ಎದ್ದು ಅವಳ ಕೋಣೆಯಲ್ಲಿ ಹೋದರು. ಅವರು ಅವಳನ್ನು ನೋಡಿದ ತಕ್ಷಣವೇ ಗುರುತಿಸಿದರು ಮತ್ತು ಮನದಲ್ಲಿಯೇ ಏನೇ ಕಷ್ಟ ಬಂದರೂ ಬಿಡದೆ ಇವಳನ್ನು ಉಳುಸಿಕೊಳ್ಳಬೇಕೆಂಬ ಪಣ ತೊಟ್ಟರು.

ಅವರ ಪರಿಶ್ರಮ ಹಾಗೂ ಸಂಯಮ ರಂಗು ತಂದಿತು. ಹುಡುಗಿಯು ನಿಧಾನವಾಗಿ ಅನಾರೋಗ್ಯದಿಂದ ಮುಕ್ತಳಾದಳು. ಸ್ವತಃ ಡಾಕ್ಟರ್ ಅವರೇ ಆಸ್ಪತ್ರೆಯ ಆಫೀಸಿಗೆ ಹೋಗಿ ಹುಡುಗಿಯ ಉಪಚಾರದ ಬಿಲ್ ತೆಗೆದುಕೊಂಡು ಬಂದರು. ಬಿಲ್ಲಿನ ಮೂಲೆಯಲ್ಲಿ ಒಂದು ನೋಟ್ ಬರೆದು ಆ ಹುಡುಗಿಯ ಕಡೆಗೆ ಕಳುಹಿಸಿದರು.

ಹುಡುಗಿಯ ಕೈಗೆ ಆಸ್ಪತ್ರೆಯ ಬಿಲ್ ಬಂದಾಗ ಆತಂಕವಾಯಿತು. ಯಾಕೆಂದರೆ ನಾನು ಅನಾರೋಗ್ಯದಿಂದ ಬಚಾವಾದೆ , ಆದರೆ ಬಿಲ್ ಮಾತ್ರ ಸಾಕಷ್ಟು ಬಂದಿರಬೇಕೆಂದು ತಿಳಿದು ಅಂಜುತ್ತ ಪಾಕೆಟ್ ತೆರೆದು ನೋಡಿದಾಗ ಅವಳಿಗೆ ಆಶ್ಚರ್ಯ ಕಾದಿತ್ತು. ಏನೆಂದರೆ “ಆಸ್ಪತ್ರೆಯ ಬಿಲ್ ಒಂದು ಗ್ಲಾಸ್ ಹಾಲಿನ ಮೂಲಕ ಮೊದಲೇ ಪೆಡ್ ಮಾಡಲಾಗಿದೆ” ಎಂದು ಬರೆದು ಕೆಳಗೆ ಡಾ. ಕೆಲಿಯವರು ಸಹಿ ಮಾಡಿದ್ದರು.

ಆಶ್ಚರ್ಯ ಮತ್ತು ಆನಂದದಿಂದ ಹುಡುಗಿಯ ಗಲ್ಲದ ಮೇಲೆ ಆನಂದಾಶ್ರುಗಳು ಹರಿಯ ತೊಡಗಿದವು. ಡಾಕ್ಟರ್ ಕೆಲಿ ಯವರಿಗೆ ಅನಂತಾನಂತ ಧನ್ಯವಾದಗಳನ್ನು ಅರ್ಪಿಸಿ ಮನೆಗೆ ತೆರಳಿದಳು.

ಮಿತ್ರರೇ, ಯಾರೇ ಒಪ್ಪಲಿ ಅಥವಾ ಒಪ್ಪದೇ ಇರಲಿ ನಾವು” ಬೇರೆಯವರಿಗೆ ಒಳ್ಳೆಯದನ್ನು ಬಯಸಿದರೆ ನಮ್ಮದು ಸಹ ಒಳ್ಳೆಯದೇ ಆಗುತ್ತದೆ”. ಇದು ಸತ್ಯ.

Leave a Reply

Your email address will not be published. Required fields are marked *