ವಿರಾಟ್ ಕೊಹ್ಲಿ ಅವರ ಒಂದು ದಿವಸದ ಗಳಿಕೆ ಎಷ್ಟು ಗೊತ್ತೇ?

ವಿರಾಟ್ ಕೊಹ್ಲಿ ಅವರ ಒಂದು ದಿವಸದ ಗಳಿಕೆ ಎಷ್ಟು ಗೊತ್ತೇ?

 

ವಿರಾಟ್ ಕೊಹ್ಲಿ ಈ ಹೆಸರು ಯಾರಿಗೂ ಪರಿಚಯ ಮಾಡಿ ಕೊಡುವ ಅಗತ್ಯವಿಲ್ಲ. ಯಾಕೆಂದರೆ ಸದ್ಯಕ್ಕೆ ಕ್ರಿಕೆಟ್ ಆಟದಲ್ಲಿ ಮುಂಚೂಣಿಯಲ್ಲಿರುವ ಪ್ರತಿಭಾನ್ವಿತ ಆಟಗಾರ.

ಸದಾ ಟ್ರೆಂಡ್ ನಲ್ಲಿ ಇರುವ ಒಬ್ಬ ಜಿದ್ದಿ ಕ್ರಿಕೆಟಿಗ ಎಂದೇ ವರ್ಣಿಸಬಹುದು. ಇವರು ತಮ್ಮ ಆಟದ ಬಗೆಗಿನ ಕಾಳಜಿ, ಶಿಸ್ತು, ಸಮರ್ಪಣೆ ಹಾಗೂ ಬ್ಯಾಟಿಂಗ್ ನಲ್ಲಿ ಸತತವಾದ ಯಶಸ್ಸು , ಆಟಗಾರನಿಂದ ಹಿಡಿದು ಈಗಿನವರೆಗೆ ಅಂದರೆ ತಂಡದ ನಾಯಕನಾದರೂ ಯಾವುದೇ ಒತ್ತಡಕ್ಕೆ ಸಿಲುಕದೆ ರನ್ ಗಳಿಸುವ ಪದ್ಧತಿ, ಇವೆಲ್ಲವುಗಳಿಂದ ವಿರಾಟ್ ಹೆಸರು ವಿರಾಟವಾಗಿದೆ. ಇಷ್ಟೆಲ್ಲ ಒಳ್ಳೆಯ ಗುಣಗಳು ಕೊಹ್ಲಿ ಯವರಲ್ಲಿ ಚೀಲ ಚೀಲ ತುಂಬಿದಷ್ಟು ಇದ್ದಾಗ ದೊಡ್ಡ ದೊಡ್ಡ ಕಂಪನಿಗಳು ಮಾರ್ಕೆಟಿಂಗ್ ಸಲುವಾಗಿ ವಿರಾಟ್ ಅವರ ಹಿಂದೆ ಸುತ್ತದೇ ಇರ್ತಾರಾ?

 

 

ತಮ್ಮ ಕಂಪನಿಯ ವಸ್ತುಗಳನ್ನು ಮಾರುಕಟ್ಟೆಯಲ್ಲಿ ವಿತರಿಸಲು ವಿರಾಟ್ ರಂತಹ ವ್ಯಕ್ತಿ ಬೇರೊಬ್ಬರಿಲ್ಲ, ಎಂಬುದು ಕಂಪನಿಯವರಿಗೆ ತಿಳಿದ ವಿಷಯವೆ. ಇಂತಹವುಗಳಿಂದ ವಿರಾಟ್ ಅವರು ಈಗ ದೊಡ್ಡ ಆದಾಯವನ್ನು ಆಟದ ಜೊತೆಗೆ ಪಡೆಯುತ್ತಿದ್ದಾರೆ. ಮೊದಲು ಆಟಗಾರ ನಂತರ ನಾಯಕನಾದಾಗಿನಿಂದ ಮತ್ತಷ್ಟು ಅವರ ವ್ಯಾಲ್ಯೂ ಹೆಚ್ಚಾಗಿದೆ.

ಒಂದು ಕಾಲದಲ್ಲಿ ವರ್ಷಕ್ಕೆ ಹತ್ತು ಕೋಟಿ ₹ ಸಂಪಾದನೆ ಪಡೆಯುತ್ತಿದ್ದ ವಿರಾಟ್ ಈಗ ಶತಕಗಳ ಮೇಲೆ ಶತಕಗಳನ್ನು ಬಾರಿಸಿ (ಏಕದಿನ ಪಂದ್ಯದಲ್ಲಿ) ವಿಶ್ವದ ಎರಡನೆಯ ಅತೀ ಹೆಚ್ಚಿನ ಶತಕಗಳನ್ನು ಬಾರಿಸಿದ ಪಟ್ಟಿಯಲ್ಲಿ ಹೆಸರು ಗಳಿಸಿಕೊಂಡಿದ್ದಾರೆ. ಸದ್ಯಕ್ಕೆ ವಿರಾಟ್ ಅವರು 20 ಕ್ಕೂ ಹೆಚ್ಚು ಕಂಪನಿಗಳ ರಾಯಭಾರಿಯಾಗಿದ್ದಾರೆ. ಒಂದು ಕಾಲದಲ್ಲಿ ಸಚಿನ್, ಧೋನಿ, ಅವರ ವೃತ್ತಿ ಜೀವನವಿದ್ದಂತೆ ಇದೀಗ ಕೊಹ್ಲಿ ಯವರ ಜೀವನ ಮಹತ್ವ ಪಡೆದಿದೆ.

 

ಅಂದ ಹಾಗೆ ಭಾರತ ತಂಡದ ಹಾಗೂ RCB ತಂಡದ ನಾಯಕರಾದ ವಿರಾಟ್ ಕೊಹ್ಲಿ ಅವರ ಒಂದು ದಿವಸದ ಗಳಿಕೆ ಬರೋಬ್ಬರಿ 5 ಕೋಟಿ ₹.

Leave a Reply

Your email address will not be published. Required fields are marked *