ಮೂರನೆಯ ಕ್ಲಾಸಿನ ವರೆಗೆ ಕಲಿತು ಮುಂಬಯಿಯಲ್ಲಿ ಸಮೋಸಾ ಮಾರುವವನ ಆದಾಯ ಕೇಳಿ ಬೆಚ್ಚಿ ಬಿದ್ದ ಟೆಕ್ಕಿ.

ಮೂರನೆಯ ಕ್ಲಾಸಿನ ವರೆಗೆ ಕಲಿತು ಮುಂಬಯಿಯಲ್ಲಿ ಸಮೋಸಾ ಮಾರುವವನ ಆದಾಯ ಕೇಳಿ ಬೆಚ್ಚಿ ಬಿದ್ದ  ಟೆಕ್ಕಿ.

 

 

ಒಬ್ಬ ಟೆಕ್ಕಿ ದಿನಾಲು ಕೆಲಸದಿಂದ ಮನೆಗೆ ಹೋಗುವಾಗ ಸಾಯಂಕಾಲ ತನ್ನ ನಿಗದಿತ ವೇಳೆಯ 6:50 ರ ಚರ್ಚ್ ಗೇಟ್ ಲೋಕಲ್ (ಮುಂಬಯಿಯ ಲೈಫ್ ಲೈನ್ ಎಂದೇ ಪ್ರಸಿದ್ಧ) ಹಿಡಿದು ನಡೆದಿದ್ದ. ಮಾರ್ಗ ಮಧ್ಯ ಬರುವ ಮರೀನ್ ಲೈನ್ ಸ್ಟೇಷನ್ ನಲ್ಲಿ ಒಬ್ಬ ಸಮೋಸಾ ಮಾರುವವನು ತನ್ನ ಖಾಲಿಯಾದ ಬುಟ್ಟಿಯೊಂದಿಗೆ ಟೆಕ್ಕಿಯ ಎದುರಿನ ಸೀಟಿನಲ್ಲಿ ಬಂದು ಕುಳಿತನು. ಟೆಕ್ಕಿ ಇಳಿದುಕೊಳ್ಳುವ ಸ್ಟೇಷನ್ ದೂರ ಇರುವದರಿಂದ ಹಾಗೆ ಇನ್ನೊಬ್ಬರ ಬಗ್ಗೆ ಏನಾದರೂ ಕೇಳಿ ತಿಳಿದುಕೊಳ್ಳುವ ಹವ್ಯಾಸದಿಂದ ಆತನೊಡನೆ ಮಾತಿಗೆ ಪ್ರಾರಂಭಿಸಿದನು. ಟೆಕ್ಕಿ :ಏನು ಎಲ್ಲ ಸಮೋಸಾಗಳನ್ನು ಮಾರಿ ಆಯ್ತಾ?

ಸಮೋಸಾ ಮಾರುವಾತ ಹಸನ್ಮುಖಿಯಾಗಿ ಹೇಳಿದ, “ದೇವರ ದಯೆ ಎಲ್ಲ ಸಮೋಸಾಗಳು ಬಿಕರಿಯಾದವು ಸರ್”

ಅದಕ್ಕೆ ಟೆಕ್ಕಿ:- ದಯವಿಟ್ಟು ಕ್ಷಮಿಸಿ ನನಗೆ ನಿಜವಾಗಿಯೂ ನಿಮ್ಮಂತಹ ಜನಗಳ ಬಗ್ಗೆ ಕಾಳಜಿ ಎನಿಸುತ್ತದೆ. ದಿನಪೂರ್ತಿ ಕೆಲಸ ಮಾಡಿ ದಣಿವಾಗುವದಿಲ್ಲವೆ?

ವ್ಯಾಪಾರಿ:- ಏನ್ಮಾಡೊಕಾಗುತ್ತೆ ಸರ್? ನಿಮ್ಮ ಹಾಗೆ ನಾವು ಶಾಲೆ ಕಲೆತಿಲ್ಲ ದಿನವಿಡಿ ಬರೀ ಸಮೋಸಾಗಳನ್ನೆ ಮಾರ್ತೀವಿ. ನಾವು ಒಂದು ಸಮೋಸಾ ಮಾರಿದಾಗ ನಮಗೆ 1 ರೂಪಾಯಿ ಕಮಿಶನ್ ಸಿಗುತ್ತೆ .

ಟೆಕ್ಕಿ:- ಓ ಹಾಗಾ, ಹಾಗಾದರೆ ದಿನವೊಂದಕ್ಕೆ ಸರಾಸರಿ ಎಷ್ಟು ಸಮೋಸಾ ಗಳನ್ನು ನೀವು ಮಾರುತ್ತೀರಿ?

ವ್ಯಾಪಾರಿ:- ಕೆಲಸದ ದಿನಗಳಲ್ಲಿ (Duty Days) 4000 ರಿಂದ 5000 ಸಮೋಸಾಗಳವರೆಗೆ ಮಾರಾಟ ಮಾಡ್ತೀವಿ ಸರಾಸರಿ ದಿವಸಕ್ಕೆ 3000 ಕ್ಕಿಂತ ಹೆಚ್ಚಗೇನೆ ಆಗ್ತದೆ.

ಟೆಕ್ಕಿ ಕೆಲವು ಕ್ಷಣ ಸ್ತಬ್ಧ.
ವ್ಯಾಪಾರಿ ಹೇಳಿದ ಪ್ರಕಾರ ಪ್ರತಿ ದಿವಸ 3 ಸಾವಿರ ಮೇಲ್ಪಟ್ಟು ಸಮೋಸಾಗಳ ಮಾರಾಟ, 1 ₹ ಕಮಿಶನ್ ಅಂದ್ರೆ ಒಂದು ದಿನದ ಗಳಿಕೆ 3000 ₹ ಹಾಗಾದರೆ ತಿಂಗಳ ಆದಾಯ 90,000 ₹! OMG

ಟೆಕ್ಕಿ ಸಮಯ ವ್ಯರ್ಥ ಮಾಡದೆ ಮುಂದಿನ ಪ್ರಶ್ನೆಯನ್ನು ಕೇಳಿದ.

ಟೆಕ್ಕಿ:- ಈ ಸಮೋಸಾಗಳನ್ನು ನೀನೇ ಸ್ವಂತ ತಯಾರಿಸಿ ಮಾರಾಟ ಮಾಡ್ತೀಯಾ?

ವ್ಯಾಪಾರಿ:- ಇಲ್ಲ ಸರ್ ಸಮೋಸಾ ತಯಾರು ಮಾಡುವವರ ಕಡೆಯಿಂದ ಸಮೋಸಾಗಳನ್ನು ತೆಗೆದುಕೊಂಡು ಮಾರಿದ ನಂತರ ಅವರಿಗೆ ಹಣ ವಾಪಸ್ ಕೊಡುತ್ತೇವೆ ಅದರಲ್ಲಿಂದ ಆತ ನಮಗೆ ತಿರುಗಿ ಒಂದು ಸಮೋಸಾಕ್ಕೆ 1 ₹ ಕಮಿಶನ್ ಪ್ರಕಾರ ಹಣ ಕೊಡುತ್ತಾನೆ.

ಟೆಕ್ಕಿ ಬರೀ ಆತನ ಮಾತುಗಳನ್ನು ಕೇಳುವದರಲ್ಲಿಯೇ ತಲ್ಲೀನನಾಗಿದ್ದ, ವ್ಯಾಪಾರಿ ಮಾತು ಮುಂದುವರೆದಿತ್ತು.
ನಮ್ಮ ಹಣ ಮುಂಬಯಿಯಲ್ಲಿ ವಾಸ ಮಾಡುವದಕ್ಕಾಗಿ ಹೆಚ್ಚಿಗೆ ವಿನಿಯೋಗ ವಾಗುತ್ತದೆ.ಬೇರೆ ಯಾವುದಕ್ಕೂ ಹೆಚ್ಚಿಗೆ ಖರ್ಚು ಆಗುವದಿಲ್ಲ. ಉಳಿದ ಹಣವನ್ನು ನಾವು ಬಿಜನೆಸ್ ನಲ್ಲಿ ಉಪಯೋಗಿಸುತ್ತೇವೆ.

ಟೆಕ್ಕಿ:- ಬಿಜನೆಸ್? ಮತ್ಯಾವ ಬಿಜನೆಸ್ ?
ವ್ಯಾಪಾರಿ:- ಪ್ರಾಪರ್ಟಿ ಸರ್. ಲ್ಯಾಂಡ್ ಬಿಜನೆಸ್. ನಾನು 2007 ರಲ್ಲಿ 1.5 ಎಕರೆ ಭೂಮಿಯನ್ನು ಮುಂಬಯಿ ಸಮೀಪದ ಪಾಲಘರ್ ನಲ್ಲಿ ಬರೀ 10 ಲಕ್ಷ ₹ ಗಳಿಗೆ ಖರೀದಿಸಿದ್ದೆ. ಈಗ ಕೆಲವೇ ತಿಂಗಳುಗಳ ಹಿಂದೆ ಅದನ್ನು 80 ಲಕ್ಷ ₹ ಗಳಿಗೆ ಮಾರಾಟ ಮಾಡಿದ್ದೇನೆ. ಸದ್ಯಕ್ಕೆ ಉಮರೋಲಿ ಹೆಸರಿನ ಊರಿನಲ್ಲಿ ಮತ್ತೆ 40 ಲಕ್ಷ ₹ ಗಳಿಗೆ ಜಮೀನು ಖರೀದಿಸಿದ್ದೇನೆ.

ಟೆಕ್ಕಿ:- ಉಳಿದ 40 ಲಕ್ಷ ₹ ಗಳಿಂದ ಏನು ಮಾಡಿದೆ?
ವ್ಯಾಪಾರಿ:- ಆ ಹಣದಿಂದ ಮಗಳ ಮದುವೆಗೆ 20 ಲಕ್ಷ ₹ ಗಳನ್ನು ಖರ್ಚು ಮಾಡಿದೆ. ಉಳಿದ 20 ಲಕ್ಷ ₹ ಗಳನ್ನು ಬ್ಯಾಂಕ್ , ಪೋಸ್ಟ್ ಆಫೀಸ್ ಹಾಗೂ ಮ್ಯುಚುಅಲ್ ಫಂಡ್ , ಬಂಗಾರ ಮತ್ತು ಕ್ಯಾಶ್ ಬ್ಯಾಕ್ ಇನ್ಸೂರನ್ಸ್ ಗಳಲ್ಲಿ ತೊಡಗಿಸಿದ್ದೆನೆ.

ಟೆಕ್ಕಿ ಮೂಕವಿಸ್ಮಿತನಾಗಿದ್ದ. ನಿಧಾನವಾಗಿ ನೀನು ಎಲ್ಲಿಯವರೆಗೆ ಶಾಲೆ ಕಲಿತಿರುವೆ? ಎಂದು ಕೇಳಿದನು.

ವ್ಯಾಪಾರಿ:- ಸರ್ ನಾನು ಮೂರನೆಯ ವರೆಗೆ ಕಲಿತಿದ್ದೇನೆ, ಆದರೆ ಓದಲು ಬರೆಯಲು ಬರುತ್ತದೆ. ಸರ್ ನಿಮ್ಮಂತಹ ಜನರನ್ನು ನಾನು ನೋಡುತ್ತೇನೆ. ಅವರ ಉಡುಪು ಸುಂದರವಾಗಿರುತ್ತವೆ. ಕೊರಳಲ್ಲಿ ಟಾಯ್ ಧರಿಸುತ್ತಾರೆ. ಕಾಲಲ್ಲಿ ಶೂಜ್ ಧರಿಸಿರುವರು. ಇಂಗ್ಲಿಷ್ ಚೆನ್ನಾಗಿ ಮಾತನಾಡುತ್ತಾರೆ ಮತ್ತು ಕೆಲಸ ಏರ್ ಕಂಡಿಶನ್ ರೂಮ್ ಗಳಲ್ಲಿ ಮಾಡುತ್ತಾರೆ. ನಾವು ಶಾಲೆ ಕಲಿತರೆ ನಿಮ್ಮ ಹಾಗೆ ಇರ್ತಿದ್ದೀವಿ. ಆದರೆ ನಾವೆಲ್ಲ ಇದರ ಬಗ್ಗೆ ತಲೆ ಕೆಡಿಸಿಕೊಂಡು ಉಪಯೋಗ ಇಲ್ಲ . ಸಮೋಸಾಗಳನ್ನು ಮಾರುವದರಲ್ಲಿ ನಮ್ಮ ಬಟ್ಟೆ ಗಲಿಜಾಗಿರುತ್ತವೆ. ಎಂದು ಹೇಳುತ್ತಿರುವಾಗಲೇ ಆತ ಇಳಿದು ಕೊಳ್ಳುವ ಸ್ಟೇಷನ್ ಬಂದನಂತರ ಆಯ್ತು ಸರ್ ಮತ್ತೆ ಭೆಟ್ಟಿಯಾಗೋಣ ಅಂತ ಹೇಳಿ ಮರೆಯಾದ.

 

ಮೇಲೆ ನಡೆದ ಸಂಭಾಷಣೆಯಿಂದ ಟೆಕ್ಕಿ ತುಂಬ ವಿಚಾರಕೊಳಗಾಗಿದ್ದ. ಈತನ ಭೆಟ್ಟಿ ಭಾರತದ ನಿಜವಾದ ಕೋಟ್ಯಾಧೀಶ್ವರನ ಜೊತೆ ಆಗಿತ್ತು.

ಹೊಸ ಪ್ರಶ್ನೆಗಳು ಮಾತ್ರ ಟೆಕ್ಕಿಯ ತಲೆಯಲ್ಲಿ ಜನ್ಮ ತಾಳಿದ್ದವು.

 

1) ಸಮೋಸಾಗಳನ್ನು ಮಾರಾಟ ಮಾಡಲು ಕೊಡುವವನು GST ತುಂಬುತ್ತಾನೆಯೇ?

2) ಇಂತಹ ಹತ್ತಾರು ಸಮೋಸಾ ವ್ಯಾಪಾರಿಗಳು ಲೋಕಲ್ ನಲ್ಲಿ ಇದ್ದರು. ಹಾಗಾದರೆ ಪೂರ್ತಿ ಮುಂಬಯಿಯಲ್ಲಿ ಎಷ್ಟು ಜನ ವ್ಯಾಪಾರಿಗಳು ಏನೇನು ಮಾರಾಟ ಮಾಡುತ್ತಿದ್ದಾರೆ?

3) ಈ ತರ ಹಣ ಗಳಿಸುವವರು ತಮ್ಮ ಇನ್ ಕಮ್ ಟ್ಯಾಕ್ಸ್ ತುಂಬುತ್ತಾರೆಯೇ? ಇಲ್ಲ.

4) ಆದರೆ ನಾನು (ಟೆಕ್ಕಿ) ನಿಜವಾಗಿಯೂ ಶತಮೂರ್ಖ ಯಾಕೆಂದರೆ, ನನ್ನ ಆಧಾರ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಅಕೌಂಟ್ ಎಲ್ಲವನ್ನು ಲಿಂಕ್ ಮಾಡಿ ಇನ್ ಕಮ್ ಟ್ಯಾಕ್ಸ್ ತುಂಬುತ್ತಾ ಇದ್ದೇನೆ. ಅಷ್ಟೇ ಅಲ್ಲ ನಾನು ಖರೀದಿಸಿದ ಕಾರು, ಮನೆ, ಬೈಕು, TV, ಫೋನು ಎಲ್ಲದಕ್ಕೂ EMI. ಒಂದು ವೇಳೆ ಈ ಸಮೋಸಾ ವ್ಯಾಪಾರಿಗೆ ಹೋಲಿಸಿದರೆ ನಾನು ಕಲಿತ ಶಿಕ್ಷಣಕ್ಕೆ ಯಾವುದೇ ಬೆಲೆ ಇಲ್ಲವೇ?

Leave a Reply

Your email address will not be published. Required fields are marked *