ಇನ್ನು ಮುಂದೆ ಲಿಫ್ಟ್ ತೆಗೆದುಕೊಳ್ಳೋ ಮುಂಚೆ ಯೋಚಿಸಿ ಹಾಯ್ ವೇ ನಲ್ಲಿ ಪ್ರಯಾಣಿಕರಿಗೆ ಲಕ್ಜೂರಿ ಗಾಡಿಗಳಲ್ಲಿ ಲಿಫ್ಟ, ಮುಂದೆ ಮಾಡುವ ಕೆಲಸ ತಿಳಿದರೆ ಶಾಕ್!

ಇನ್ನು ಮುಂದೆ ಲಿಫ್ಟ್ ತೆಗೆದುಕೊಳ್ಳೋ ಮುಂಚೆ ಯೋಚಿಸಿ ಹಾಯ್ ವೇ ನಲ್ಲಿ ಪ್ರಯಾಣಿಕರಿಗೆ ಲಕ್ಜೂರಿ ಗಾಡಿಗಳಲ್ಲಿ ಲಿಫ್ಟ, ಮುಂದೆ ಮಾಡುವ ಕೆಲಸ ತಿಳಿದರೆ ಶಾಕ್!

 

ದಿನಾಲು ಪ್ರಾಯಣಿಸುವ ಪ್ರಯಾಣಿಕರ ಸಂಖ್ಯೆ ನೋಡಿದರೆ ಸರಕಾರಿ ವಾಹನಗಳ ಜೊತೆಗೆ ಖಾಸಗಿ ವಾಹನಗಳು ಮತ್ತು ಕೆಲವೊಮ್ಮೆ ಸ್ವಂತದ ವಾಹನಗಳು ಸಹಿತ ಸಂಚಾರಕ್ಕೆ ಕಡಿಮೆ ಬೀಳುತ್ತಿವೆ. ಇಂತಹ ಸಂದರ್ಭಗಳನ್ನು ಸಮಾಜಘಾತಕ ಶಕ್ತಿಗಳು ನೋಡುತ್ತ ಕುಂತಿರುತ್ತಾರೆ.

ಯಾರು ?ಏನು?ಅಂತ ತಿಳಿಯದ ಮುಗ್ದ ಪ್ರಯಾಣಿಕರು ತಮ್ಮ ಜೀವವನ್ನೇ ಆತಂಕದಲ್ಲಿ ಒಡ್ಡುತ್ತಾರೆ. ಇಂತಹ ನೀಚ ಕೆಲಸ ಮಾಡುವ ಒಂದು ಗ್ಯಾಂಗನ್ನೆ ಪೊಲೀಸರು ಬಯಲು ಮಾಡಿದ್ದಾರೆ.

ಉತ್ತರ ಭಾರತದ ರಾಜಸ್ಥಾನ, ಉತ್ತರ ಪ್ರದೇಶ, ಹರಿಯಾಣ, ದೆಹಲಿ ಹಾಗೂ ಮಧ್ಯಪ್ರದೇಶ ದಲ್ಲಿ ಅನೇಕ ಲೂಟಿಗಳನ್ನು ಮಾಡಿದ ಕೇಸುಗಳು ದಾಖಲಾಗಿದೆ. ಇವರು ಮಾಡುವ ಕೆಲಸವೆಂದರೆ, ಹಾಯ್ ವೇ ಗಳಲ್ಲಿ ಪ್ರಯಾಣಿಕರಿಗೆ ಲಿಫ್ಟ್ ಕೊಡುವ ಉದ್ದೇಶದಿಂದ ಗಾಡಿಯಲ್ಲಿ ಕುಳ್ಳಿರಿಸಿ ಮುಖಕ್ಕೆ ಮತ್ತು ಬರುವ ಸ್ಪ್ರೇ ಹೊಡೆದು ಅವರನ್ನು ಲೂಟಿ ಮಾಡಿ ಮಾರ್ಗ ಮಧ್ಯ ದಲ್ಲಿಯೇ ಗಾಡಿಯಿಂದ ಎಸೆದು ಹೋಗಿಬಿಡುತ್ತಿದ್ದರು. ಇಂತಹ ಗ್ಯಾಂಗ್ ನ ನಾಲ್ಕು ಆರೋಪಿಗಳಿಗೆ ರಾಜಸ್ಥಾನದ ಭರತಪೂರ ಪೋಲಿಸ್ ಠಾಣೆ ವ್ಯಾಪ್ತಿಯ ಪೊಲೀಸರು ಜಾಲ ಬೀಸಿ ಹಿಡಿದಿದ್ದಾರೆ.

ತಮ್ಮ ಹೇಳಿಕೆಯಲ್ಲಿ ಆರೋಪಿಗಳು ಈ ಮೇಲಿನ ರಾಜ್ಯಗಳಲ್ಲಿ ಲಿಫ್ಟ್ ಕೊಡುವುದಾಗಿ ಹೇಳಿ ಅವರನ್ನು ಪ್ರಜ್ಞೆ ತಪ್ಪಿಸಿ ಅವರಿಂದ ಹಣ, ಬಂಗಾರ, ಮೊಬೈಲ್ ತತ್ಸಮ ವಸ್ತುಗಳನ್ನು ಅಪಹರಿಸಿ ಮಾರ್ಗ ಮಧ್ಯದಲ್ಲಿಯೇ ಬಿಸಾಡಿ ಹೋಗುತ್ತಿದ್ದೆವು! ಎನ್ನುವದನ್ನು ಒಪ್ಪಿಕೊಂಡಿದ್ದಾರೆ.

ಆದ್ದರಿಂದಲೇ ಮಿತ್ರರೇ ಪ್ರವಾಸದಲ್ಲಿರುವಾಗ ತುರ್ತು ಪರಿಸ್ಥಿತಿ ಎದುರಾದಾಗ ಜೊತೆಯಲ್ಲಿ ವಿಶೇಷವಾಗಿ ಮಹಿಳೆಯರು ಇದ್ದಾಗ ನಿಧಾನವಾಗಿ ಯೋಚಿಸಿ ಮುಂದಿನ ಕ್ರಮ ತೆಗೆದುಕೋಳ್ಳುವದು ಸೂಕ್ತ.

Leave a Reply

Your email address will not be published. Required fields are marked *