ತಾರಕ್ ಚಿತ್ರದ ಒಂದು ದಿವಸದ ನಿಜವಾದ ಕಲೆಕ್ಷನ್ ಎಷ್ಟು ಗೊತ್ತಾ?

ತಾರಕ್ ಚಿತ್ರದ ಒಂದು ದಿವಸದ ನಿಜವಾದ ಕಲೆಕ್ಷನ್ ಎಷ್ಟು ಗೊತ್ತಾ?

 

ಅಂತೂ ಹಬ್ಬದ ಮುಹೂರ್ತ ಮುಂದಿಟ್ಟುಕೊಂಡು ಆಯುಧ ಪೂಜೆಯ ದಿವಸ ದರ್ಶನ್ ಅವರ ಬಹುನಿರೀಕ್ಷಿತ ಚಿತ್ರ ತಾರಕ್ ಸಿನೆಮಾ ರೀಲಿಜ್ ಆಯ್ತು. ದರ್ಶನ ಅವರ ಮತ್ತೊಂದು ಚಿತ್ರ ಗಳಿಕೆಯಲ್ಲಿ ಧೂಳೆಬ್ಬಿಸಲು ಶುರುವಾಯ್ತು ಅಂದರೆ ತಪ್ಪಿಲ್ಲ. ಕನ್ನಡದ ಸಿನೆ ರಂಗದಲ್ಲಿ ಅಪಾರ ಕಲಾಭಿಮಾನಿಗಳ ಬಳಗ ಹೊಂದಿರುವ ದರ್ಶನ ಅವರ ಚಿತ್ರ ಬಿಡುಗಡೆಯಾದದರೆ ಸಾಕು ಪ್ರತಿ ಬಾರಿಯೂ ಏನಾದರೂ ರೆಕಾರ್ಡ್ ಆಗೇ ಆಗ್ತದೆ.

ಈ ಬಾರಿ ಚಿತ್ರದಲ್ಲಿ ಡೈನಾಮಿಕ್ ಸ್ಟಾರ್ ನ ಮೂಮ್ಮಗನಾಗಿ ಕಾಣಿಸಿಕೊಂಡ ತಾರಕ್(ದರ್ಶನ್) ಒಂದು ಒಳ್ಳೆಯ ಸಮಾಜಮುಖಿ ಕೌಟುಂಬಿಕ ಚಿತ್ರ ತೆಗೆದುಕೊಂಡು ಪ್ರೇಕ್ಷಕರ ಎದುರಿಗೆ ಬಂದಿದ್ದಾರೆ. ಕರ್ನಾಟಕದ ಎಲ್ಲೆಡೆ 300 ಚಿತ್ರ ಮಂದಿರಗಳಲ್ಲಿ ಬಿಡುಗಡೆಗೊಂಡು ಮೊದಲು ಎರಡು ಶೋ ಗಳಿಗೆ 4 ಕೋಟಿ ₹ ಗಳನ್ನೂ ಜಮಾಯಿಸಿದೆ.ಇಲ್ಲಿಯವರೆಗೆ ಎರಡೇ ಶೋ ಗಳಲ್ಲಿ ಇಷ್ಟೋಂದು ಹಣ ಬೇರೆ ಯಾವ ಸಿನೆಮಾ ಗಳಿಸಿಲ್ಲ. ಎಂದು ಸುದ್ದಿ ಮೂಲಗಳಿಂದ ಕೇಳಿ ಬರುತ್ತಿವೆ. ಬಹು ದಿನಗಳ ನಂತರ ದರ್ಶನ ಅವರ ಫ್ಯಾಮಿಲಿ ಮನರಂಜನೆಯ ಬಗ್ಗೆ ಎಲ್ಲರೂ ಮನೆಯವರು ಕುಳಿತು ನೋಡುವಂತಹ ಚಲನಚಿತ್ರ ಮೂಡಿ ಬಂದಿದೆ ಎನ್ನಬಹುದು. ಚಿತ್ರದಲ್ಲಿ ಕಥೆ ಮನಮುಟ್ಟುವ ಹಾಗೆ ಇದೆ. ದೇವರಾಜ್ & ದರ್ಶನ ಅವರ ಅಜ್ಜ ಮೊಮ್ಮಗನ ಪಾತ್ರ ಹೃದಯಕ್ಕೇ ತಟ್ಟುವಂಥದ್ದು.

ಈ ಎಲ್ಲ ಕಾರಣಗಳಿಂದ ಚಿತ್ರ ಪ್ರೇಕ್ಷಕರ ಮೆಚ್ಚುಗೆ ಗಳಿಸುವಲ್ಲಿ ಸಫಲವಾಗಿದೆ. ಇನ್ನು ಚಿತ್ರ ಎರಡು ಶೋಗಳಲ್ಲಿ 4 ಕೋಟಿ ₹ ಗಳನ್ನು ಗಳಿಸುವಲ್ಲಿ ಯಶಸ್ವೀಯಾಗಿದೆ. ರಜೆಯ ದಿನಗಳಾಗಿದ್ದರಿಂದ ಕೆಲವು ಕಡೆ ಮುಂಜಾನೆ ಚಿತ್ರ ರೀಲಿಜ್ ಮಾಡಲಾಗಿದೆ. ಹೀಗಾಗಿ ಚಿತ್ರವು ಒಂದು ದಿನದ ಗಳಿಕೆಯಲ್ಲಿ 8 ಕೋಟಿಗೂ ಮೀರಿ ಗಳಿಸಿದೆ ಎಂಬ ವಿಶ್ವಾಸ ತಾರಕ್ ಚಿತ್ರತಂಡ ವ್ಯಕ್ತ ಪಡಿಸಿದೆ.

Leave a Reply

Your email address will not be published. Required fields are marked *