ಹೋಟೆಲ್ ಮಾಲೀಕರು ಈ ನಟಿಗೇಕೆ ರೂಮು ಕೊಡುತ್ತಿಲ್ಲ ಗೊತ್ತಾ?

ಹೋಟೆಲ್ ಮಾಲೀಕರು ಈ ನಟಿಗೇಕೆ ರೂಮು ಕೊಡುತ್ತಿಲ್ಲ ಗೊತ್ತಾ?

 

ಸ್ಟಾರ್ ಗಳ ಲೆವಲ್ಲೆ ಹಾಗೇ ಎಲ್ಲಿ ಹೆಜ್ಜೆ ಇಟ್ಟರೂ ಅಲ್ಲೆಲ್ಲ ಸೂಪರ್ ಆಗಿ ಇರಬೇಕು ಅಂದರೇನೇ ಅವರಿಗೆ ಬೆಲೆ. ಎಲ್ಲವೂ ಐಶಾರಾಮಿ ಇರಬೇಕು ಅಂದರೇನೆ ಇಷ್ಟ ಇಲ್ಲಾಂದ್ರೆ ನಡೆಯಲ್ಲ. ಎಲ್ಲರೂ ಹಾಗಲ್ಲ ಆದರೆ ಕೆಲವರು ಸ್ಟಾರ್ ಆದಮೇಲೆ ಸ್ಟಾರ್ ಗಿರಿ ತೋರಿಸಲು ಇಷ್ಟ ಪಡುತ್ತಾರೆ.

ಹೋಟೆಲ್ ಬಿಜನೆಸ್ ನವರು ಇಂತಹ ದೊಡ್ಡ ಕಲಾವಿದರು ತಮ್ಮ ಹೋಟೆಲ್ಲಿಗೆ ಬರಬೇಕು , ಇಲ್ಲಿ ತಂಗ ಬೇಕು ಎಂಬ ಆಸೆ ಇರುತ್ತದೆ. ಇದರಿಂದ ಹೋಟೆಲುಗಳಿಗೆ ಆರಾಮಾಗಿ ಪಬ್ಲಿಸಿಟಿ ಸಿಗುತ್ತದೆ ಎಂಬ ವಿಚಾರವು ಇರುತ್ತದೆ. ಆದರಿಲ್ಲಿ ನಯನತಾರಾ ಅವರ ವಿಚಿತ್ರ ಸ್ವಭಾವಕ್ಕೆ ಮತ್ತು ಅವರ ಮುಂಗೊಪಿತನಕ್ಕೆ ಸಾಕಾಗಿ ಸಿಟ್ಟಿನ ಭರದಲ್ಲಿ ಅವರು ಮಾಡುವ ಕೃತ್ಯಗಳಿಂದ ಹೈದರಾಬಾದ್ ನಲ್ಲಿರುವ ಹೋಟೆಲ್ ಮಾಲೀಕರು ಈ ದಕ್ಷಿಣ ಭಾರತದ ಟಾಪ್ ಕಲಾವಿದೆಗೆ ಯಾರು ಹೋಟೆಲಿನಲ್ಲಿ ರೂಮ್ ಕೊಡಲಿಕ್ಕೆ ಸಾಧ್ಯವಿಲ್ಲ ವೆನ್ನುತ್ತಿದ್ದಾರೆ.

ಏಕೆಂದರೆ, ಹೋಟೆಲ್ ವ್ಯವಸ್ಥಾಪನೆಯಲ್ಲಿ ಏನಾದರೂ ಎಡವಟ್ಟು ಆಯ್ತೋ ಮುಗಿತು. ರೂಮಿನಲ್ಲಿರೋ ಅಮೂಲ್ಯವಾದ ವಸ್ತುಗಳು ನಮ್ಮ ಕನಸುಗಾರ ರವಿಚಂದ್ರನ್ ಡೈಲಾಗ್ ನಂತೆ ‘ಪೀಸ್ ಪೀಸ್’ ಆಗಿ ಬಿಡುತ್ತಾವಂತೆ. ಆ ವಸ್ತುಗಳ ಬೆಲೆ ವಾಪಸ್ ಪಡೆದರೂ ಹೋಟೆಲಿನವರಿಗೆ ಮತ್ತೆ ಅವುಗಳನ್ನು ತರುವದು ಹಾಗೂ ಸೆಟ್ ಮಾಡುವುದು ಕೆಲಸ ಬೇಡವಾಗಿದೆಯಂತೆ. ಆದ್ದರಿಂದ ಬೇಸತ್ತು ಹೋಟೆಲಿನವರು ನಾಯನತಾರಾಗೆ ರೂಮ್ ಕೊಡಲ್ಲ ಅಂತಾ ಖಡಾ ಖಂಡಿತವಾಗಿ ಹೆಳ್ತಿದ್ದಾರಂತೆ.

ಇಷ್ಟೊಂದು ಖ್ಯಾತಿ ಗಳಿಸಿರುವ ಈ ನಟಿ ರೂಮ್ ಬಿಟ್ಟು ಹೋದ ನಂತರ ರೂಮ್ ನ್ನು ಮೊದಲಿನ ಸ್ಥಿತಿಗೆ ತರಲು ಮೂರರಿಂದ ನಾಲ್ಕು ದಿನಗಳು ಸಾಕಾಗಲ್ವಂತೆ.

ನಯನತಾರಾ ಅವರ ಈ ಕೆಲವು ಸರಿ ಎನಿಸದ ಕೃತ್ಯಗಳಿಂದ ಎಷ್ಟೋ ಸಲ ರೂಮ್ ಸಿಗದೇ ಇದ್ದಾಗ ಶೂಟಿಂಗ್ ನಿಂದ ನೇರ ಚೆನ್ನೈಗೆ ಹೋಗಿದ್ದು ಉಂಟು.

ಆದಕಾರಣ ಇವಳಿಗೆ ರೂಮನ್ನೆ ಕೊಡದಿದ್ದರೆ ಈ ಎಲ್ಲ ಸಮಸ್ಯೆಗಳಿಗೆ ತಾನೇ ಪರಿಹಾರ ಸಿಗುವದು ಎನ್ನುವ ವಿಚಾರ ಹೋಟೆಲ್ ಮಾಲಿಕರದು.

Leave a Reply

Your email address will not be published. Required fields are marked *