1500 ₹ ಯ ಜಿಯೋ ಫೋನ್ ಬಗ್ಗೆ ಸಂದೇಹ ಬೇಡ. ಲಾಭ ಗ್ಯಾರಂಟಿ ಟರ್ಮ್ಸ್ ಮತ್ತು ಕಂಡಿಶನ್ ಗಳನ್ನು ಸರಿಯಾಗಿ ಓದಿ ತಿಳಿದುಕೊಳ್ಳಿ.

1500 ₹ ಯ ಜಿಯೋ ಫೋನ್ ಬಗ್ಗೆ ಸಂದೇಹ ಬೇಡ. ಲಾಭ ಗ್ಯಾರಂಟಿ  ಟರ್ಮ್ಸ್ ಮತ್ತು ಕಂಡಿಶನ್ ಗಳನ್ನು  ಸರಿಯಾಗಿ ಓದಿ ತಿಳಿದುಕೊಳ್ಳಿ.

 

ಹಿಂದಿನ ಕೆಲವು ದಿನಗಳಿಂದ ಜಿಯೋ ಫೋನ್ ಬಗ್ಗೆ ತರ ತರದ ಮಾತುಗಳು ಕೇಳಿ ಬರ್ತಾ ಇವೆ. ಅದರಲ್ಲಿ ಜಿಯೋ ಫೋನ್ ಬಗ್ಗೆ ಅವಿಶ್ವಾಸದ ಬಗ್ಗೆನೇ ಹೆಚ್ಚಾಗಿ ಬರುತ್ತಿವೆ. ಜಿಯೋದವರು ಜನರನ್ನು ವಂಚಿಸುತ್ತಿದ್ದಾರೆ. ಅವರು ವಿಶ್ವಾಸಕ್ಕೆ ಪಾತ್ರವಿಲ್ಲ. ಕೊನೆಗೆ ಅವರು ತಮ್ಮ ಗುಣವನ್ನು ತೋರಿಸಿಯೇ ಬಿಟ್ಟರು. ಜನರಿಗೆ ಲೂಟಿ ಮಾಡಿದರು. ಇವರಷ್ಟು ಫ್ರಾಡ್ ಬೇರೊಬ್ಬರಿಲ್ಲ. ಅಂತ ಅನೇಕಾನೇಕ ತರ್ಕ ವಿತರ್ಕಗಳನ್ನು ಮಂಡಿಸಿ ವಾಟ್ಸಾಪ್ ನಲ್ಲಿ , ಫೆಸ್ಬೂಕ್ ನಲ್ಲಿ ಮೆಸೇಜ್ ಗಳನ್ನು ಹರಿದು ಬಿಡುತ್ತಿದ್ದಾರೆ.

ಆದರೆ ನಿಜವಾದ ಟರ್ಮ್ಸ್ ಮತ್ತು ಕಂಡಿಶನ್ ಗಳು ಏನಿವೆ?

ಮೊದಲು ನಾವು ಇದನ್ನು ತಿಳಿದುಕೊಳ್ಳುವದು ಅತ್ಯಾವಶ್ಯಕವಾಗಿದೆ. ಏನೆಂದರೆ, ಜಿಯೋ ಕಮ್ಯುನಿಕೆಶನ್ ಇದು ಒಂದು ಬಿಜನೆಸ್ ಕಂಪನಿ ಇದೆ. ಜೀವನಪೂರ್ತಿ ಪುಗಸೆಟ್ಟೆಯಾಗಿ ಡೇಟಾ ಪ್ಲ್ಯಾನ ಮತ್ತು ಕಾಲ್ ಪ್ಲ್ಯಾನ್ ಕೊಡುವ ಯಾವುದೇ ಜವಾಬ್ದಾರಿ ಜಿಯೋ ಹೂತ್ತಿಲ್ಲ. ಅವರು ತಮ್ಮ ಬಿಜನೆಸ್ ಅಂಗವಾಗಿಯೇ ಮೊದ ಮೊದಲು ಎಲ್ಲವನ್ನೂ ಕನಿಷ್ಠ ಪಕ್ಷ 1 ವರ್ಷದ ವರೆಗೆ ಫ್ರೀ ಯಾಗಿ ಜನರಿಗೆ ಸೇವೆ ನೀಡಿದ್ದಾರೆ.(ಇಲ್ಲಿಯವರೆಗೆ ಯಾವ ಕಂಪನಿಯೂ ಒಂದು ದಿವಸ ಸಹ ಫ್ರೀ ಕೊಟ್ಟಿಲ್ಲ) ತದನಂತರವೂ ಜಿಯೋ ಅತೀ ಕಡಿಮೆ ಅಂದರೆ ಅಗ್ಗದ ದರದಲ್ಲಿ ಈಗಲೂ ಹೊಸ ಪ್ಲ್ಯಾನ್ ಗಳನ್ನು ಕೊಟ್ಟೆ ಕೊಡುತ್ತಿದ್ದಾರೆ. ಹಾಗೆಯೇ ಇವರಿಂದಲೇ ಇತರ ಕಂಪನಿಗಳು ಜನರನ್ನು ಲೂಟಿ ಮಾಡುವದನ್ನು ನಿಲ್ಲಿಸಿದರು. ಗ್ರಾಹಕರ ಆಸೆಗೆ ಮಿತಿ ಇರುವದಿಲ್ಲ. ಆದರೆ ಜಿಯೋ ದವರಿಗೂ ಸಹ ಕಂಪನಿಯ ಜೊತೆಗೆ ಸಿಬ್ಬಂದಿ ವರ್ಗಕ್ಕೆ ಪೆಮೆಂಟ್ ಮಾಡುವದರೊಟ್ಟಿಗೆ ಹತ್ತಾರು ಖರ್ಚುಗಳು ಇರುತ್ತವೆ.

ಈಗ ಫೋನ್ ಬಗ್ಗೆ ಮತ್ತು ಅದರ ಪ್ರಾಯಿಸ್ ಬಗ್ಗೆ ತಿಳಿಯುವಾ. ಇದರ ಪ್ರೈಜ್ 1500 ₹ ಹಾಗೆ ನೋಡಿದರೆ ಇದು ಪ್ರೈಜ್ ಅಲ್ಲ ಇದಕ್ಕೆ ಸೆಕ್ಯೂರಿಟಿ ಡಿಪಾಜಿಟ್ ಎನ್ನ ಬಹುದು. ಯಾಕೆಂದರೆ ಈ ಫೋನ್ ನ್ನು ಮೂರೂ ವರ್ಷಗಳ ವರೆಗೆ ಸರಿಯಾಗಿ ಯೂಜ ಮಾಡಿದ್ದಲ್ಲಿ ಈಗ ಪಾವತಿಸಿದ ಹಣ ತಿರುಗಿ ನಮಗೆ ದೊರೆಯುವದು. ಈಗ ಇಲ್ಲಿ, ಸರಿಯಾಗಿ ಯೂಜ ಮಾಡುವದರ ಅರ್ಥ ಅಂದರೆ ತಿಂಗಳಿನ ರೀಚಾರ್ಜ್ 153₹ ಇದೆ.ಈ 153 ₹ಗಳಲ್ಲಿ ನಿಮಗೆ ಅನ್ ಲಿಮಿಟೆಡ್ ಕಾಲ್ ಭಾರತದ ಯಾವುದೇ ಕಂಪನಿಯ ಯಾವುದೇ ನೆಟವರ್ಕ್ ಗೆ ಎಷ್ಟು ಬೇಕಾದರೂ ಮಾತನಾಡಬಹುದು. ಜೊತೆಗೆ ಹಾಯ್ ಸ್ಪೀಡ್ ಡೇಟಾ 500 MB ಬೇರೆ ಸಿಗಲಿದೆ. ಇಷ್ಟೆಲ್ಲ ತಿಂಗಳಿಗೆ 153 ₹ ಗಳ ಖರ್ಚಿನಲ್ಲಿ ಸಂಭವವಿದೆ. ನಂತರ ಮೂರು ವರ್ಷದ ಮೇಲೆ ಗ್ರಾಹಕರು ವಾಪಸ ಕೊಡುವ ಮನಸ್ಸು ಮಾಡಿದ್ದಲ್ಲಿ ತಾವು ತುಂಬಿದ 1500 ₹ ಮರಳಿ ಪಡೆಯಬಹುದು.

ಇನ್ನೂ ಒಂದು ಟರ್ಮ್ಸ್ ಹಾಗೂ ಕಂಡಿಶನ್ ಪ್ರಕಾರ ಪ್ರತಿವರ್ಷ 1500 ₹ ರೀಚಾರ್ಜ್ ಮಾಡಲೇಬೇಕು ಅಂತಿದೆ. ನಮ್ಮ ನಿಮ್ಮ ಪ್ರಕಾರ ಇಲ್ಲಿಯವರೆಗೆ ರೀಚಾರ್ಜ್ ಮಾಡದೆ ಯಾರು ಫೋನ್ ಯೂಜ್ ಮಾಡಿದ್ದಾರೆಯೆ? ಉತ್ತರ ಇಲ್ಲ. ಅಂದಾಗ 153 ₹ ಗಳಲ್ಲಿ 2G ಫೋನ್ ಕೊಡುವ ಈ ಎಲ್ಲ ಸೌಲಭ್ಯಗಳನ್ನು ಬೇರೆ ಯಾವ 2G ಫೋನ್ ನೆಟವರ್ಕ್ ದವರು ಕೊಡ್ತಾರೆ ಹೇಳಿ? ಮತ್ತೆ 50 ₹ , 100₹ ಗಳು ಹಾಗೇನೇ ಯಾರು ಬೇಕಾದರೂ ಖರ್ಚುಮಾಡುತ್ತಾರೆ. ಅದರಲ್ಲಿ 153 ₹ ಗಳಲ್ಲಿ ಫ್ರೀ ಫೋನ್ ಕಾಲ್ ಜೊತೆಗೆ ದಿನಕ್ಕೆ 500 MB ಡೆಟಾದಲ್ಲಿ ಹಾಡುಗಳನ್ನು, ಚಿತ್ರಗಳನ್ನು ನೋಡುವ ಸೌಲಭ್ಯ ಮತ್ತೆ ಸರ್ಚ್ ಮಾಡುವ ಅವಕಾಶ, ವೀಡಿಯೊ ಕಾಲ್, ಬೇರೆ ಬೇರೆ ಆಪ್ಸ್ ಗಳ ಉಪಯೋಗ ಇಷ್ಟೆಲ್ಲ ಉಪಯೋಗ ಬೇರೆ ಫೋನಿಗೆ ಹೋಲಿಸಿ ನೋಡಿ ಗೊತ್ತಾಗುವದು. ಇಷ್ಟೆಲ್ಲ ಮಾಡಲಿಕ್ಕೆ ತಿಂಗಳಿಗೆ 153 ₹ ಗಳನ್ನು ಖರ್ಚು ಮಾಡಿದರೆ ವರ್ಷಕ್ಕೆ ಆರಾಮಾಗಿ 1500 ₹ ಗಳ ರೀಚಾರ್ಜ್ ತನ್ನಂತಾನೆ ಆಗಿಯೇ ಬಿಡುತ್ತದೆ.

ಇನ್ನು ಜಿಯೋ ಟರ್ಮ್ಸ್ ಮತ್ತು ಕಂಡಿಶನ್ ಗಳಲ್ಲಿ ಒಂದು ಬದಲಾವಣೆ ಮಾಡಿದ್ದಾರೆ. ಏನೆಂದರೆ, ಅರ್ಲಿ ರಿಟರ್ನ್ ಚಾರ್ಜ್ ಅಂದರೆ ಮೊದಲು ಮೂರು ವರ್ಷಗಳ ನಂತರ ಫೋನ್ ವಾಪಸ ಕೊಡಬಹುದಿತ್ತು. ಆದರೀಗ ಇದರಲ್ಲಿ ಗ್ರಾಹಕರಿಗೆ ಒಂದು ಆಪ್ಶನ್ ಕೊಟ್ಟಿದ್ದಾರೆ. ಏನೆಂದರೆ ಫೋನ್ ತೆಗೆದುಕೊಂಡ ನಂತರ ಇದು ನಿಮ್ಮ ಉಪಯೋಗಕ್ಕೆ ಬೇಡವಾದರೆ ನೀವು 12 ತಿಂಗಳೊಳಗಾಗಿ ವಾಪಸ್ ಮಾಡುವದಾದರೆ ಈ ನಿಯಮದಡಿಯಲ್ಲಿ ನೀವು ಪಾವತಿಸಿದ 1500₹ ಮರಳಿ ಸಿಗುವದಿಲ್ಲ. ಒಂದು ವೇಳೆ 12 ರಿಂದ 24 ತಿಂಗಳಲ್ಲಿ ತಿರುಗಿ ಕೊಡುವದಾದರೆ ನಿಮ್ಮ ಡಿಪಾಜಿಟ್ ನಿಂದ 1000 ₹ ಗಳ ಕಡಿತವಾಗಿ ನಿಮಗೆ ಬರೀ 500 ₹ ಗಳು ದೊರೆಯುವವು. ಇನ್ನು 24 ರಿಂದ 36 ತಿಂಗಳುಗಳ ಮಧ್ಯದಲ್ಲಿ ಫೋನ್ ಮರಳಿಸುವದಾದರೆ ನಿಮ್ಮ ಡಿಪಾಜಿಟ್ ನಿಂದ 500 ₹ ಗಳು ಕಡಿತವಾಗುವವು. ಹೀಗೆ ದೇಶದ ಯಾವುದೇ ಕಂಪನಿಗಳು ಸಹಿತ ಪ್ರತಿಯೊಂದು ವಸ್ತುಗಳಿಗೆ ಅರ್ಲಿ ರಿಟರ್ನ್ ಚಾರ್ಜ್ ಮಾಡೇ ಮಾಡುತ್ತಾರೆ. ಅದನ್ನು ಬಿಟ್ಟು ಇವರು ಬೇರೇನೂ ಹೊಸದಾಗಿ ಮಾಡುತ್ತಿಲ್ಲ. ಆ ಮೇಲೆ ನಾನು ನಿಮಗೆ ಇನ್ನೊಮ್ಮೆ ನೆನೆಪಿಸುತ್ತೆನೆ, ಏನೆಂದರೆ ಈ ಹಣ ಬೇರೆಯಾಗಿ ಕಟ್ಟಬೇಕಿಲ್ಲ. ನಾವು ಕಟ್ಟಿದ ಡಿಪಾಜಿಟ್ ನಿಂದ ಕಡಿತಗೊಳ್ಳುವದು. ಮತ್ತೆ ಮೂರು ವರ್ಷದ ನಂತರ ಫೋನ್ ಮರಳಿಸುವದಾದರೆ ನಿಮಗೆ ಪೂರ್ತಿ 1500 ₹ ಗಳು ದೊರೆಯುವವು. ಅಂದಾಗ ಸಂದೇಹವಿರುವ ಅವಶ್ಯಕತೆನೇ ಇಲ್ಲ. ಇಲ್ಲಿ ಕನ್ ಫ್ಯುಜ್ ಆಗುವ ಕಾರಣವೇ ಇಲ್ಲ. ಫೋನ್ ಬಳಸುವದಾದರೆ ತಗೊಳ್ಳಿ ತಿಂಗಳಿಗೆ 153 ₹ ಗಳ ರೀಚಾರ್ಜ್ ಮಾಡಿರಿ, ಎಂಜಾಯ್ ಮಾಡಿರಿ. ಯೂಜ್ ಮಾಡಿದ ನಂತರ ಫೋನ್ ಜಿಯೋಗೆ ವಾಪಸ್ ಮಾಡಿ ನಿಮ್ಮ ಹಣ ಪಡೆದುಕೊಳ್ಳಿ.(3 ವರ್ಷದ ನಂತರ)

ಈಗ ನಾವು ಸ್ವಲ್ಪ ವಿಚಾರ ಮಾಡ ಬೇಕಾಗಿದೆ. ಏಕೆಂದರೆ ಕೆಲವರ ವಿಚಾರದಂತೆ ಪ್ರತಿವರ್ಷ 1500 ₹ ಗಳ ಪ್ರಕಾರ ಮೂರು ವರ್ಷಗಳಲ್ಲಿ 4500 + 1500 ಒಟ್ಟು 6000 ₹ ಗಳಿಗೆ ಮೊಬೈಲ್ ಬೆಲೆ ನಿಮ್ಮಿಂದ ತೆಗೆದುಕೊಳ್ಳುತ್ತಾರೆ. ಅಂಬಾನಿಯವರು ಜನರಿಗೆ ಹೀಗೆಯೇ ಮೂರ್ಖನನ್ನಾಗಿಸುತ್ತಾರೆ. ಜನರನ್ನು ಮರಳು ಮಾಡುವ ಕೆಲಸ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ರೀಚಾರ್ಜ್ ಮಾಡದೆ ಬೇರೆ ಕಂಪೆನಿಯವರ ಫೋನ್ ಯೂಜ್ ಮಾಡಲಿಕ್ಕೆ ಬರುತ್ತದೆಯಾ? ಹೇಳಿ ಹಾಗೂ 2G ಫೋನಿನಂತಿರುವ ಬೇರೆ ನೆಟವರ್ಕಗಳು ಸಹ ಈ ಪ್ಲಾನ್ ನಲ್ಲಿ ಇಲ್ಲ, ಇಷ್ಟೇ ಏಕೆ ಇದಕ್ಕಿಂತ ಹೆಚ್ಚಿಗೆ ಹಣ ಸುಲಿದು ಸಹ ಇಂತಹ ವೈಶಿಷ್ಟ ಗಳನ್ನು ಕೊಡುವದಿಲ್ಲ.

ಅಂದಾಗ ಯಾಕೆ ಜಿಯೋ ಮೇಲೆ ಸಂದೇಹ ಪಡಬೇಕು? ಆಮೇಲೆ ಇಲ್ಲದ ಸಲ್ಲದ ಮೆಸೇಜ್ ಗಳ ಮೇಲೆ ಯಾಕೆ ವಿಸ್ವಾಸ ವಿಡಬೆಕು? ನಾವಿಲ್ಲಿ ಜಿಯೋ ಫೋನಿನ ಬಗ್ಗೆ ಇರುವ ಟರ್ಮ್ಸ್ ಮತ್ತು ಕಂಡಿಶನ್ ಬಗ್ಗೆ ವಿವರಣೆ ನೀಡಿದ್ದೇವೆ. ಯಾವುದೇ ಪ್ರಕಾರ ಅವರ ಜಾಹಿರಾತು ಮಾಡ್ತಿಲ್ಲ. ಫೋನ್ ನೀವು ಯೂಜ್ ಮಾಡಿ ಅಥವಾ ಬಿಡಿ. ಜಿಯೋಕ್ಕೆ ಸಂಬಂಧಪಟ್ಟ ನಿಜವಾದ ಮಾಹಿತಿಯನ್ನು ಕೊಡುವ ಪ್ರಯತ್ನ ಮಾಡಿದ್ದೇವೆ ಅಷ್ಟೇ !

Leave a Reply

Your email address will not be published. Required fields are marked *