ಸಮಾಜಕ್ಕೆ ಮಾದರಿಯಾದರು ಗಂಡಿನ ಮನೆಯವರು. ಸೊಸೆಯಾಗಿ ಬರಮಾಡಿಕೊಂಡು, ಮಗಳಂತೆ ಗಂಡನ ಮನೆಗೆ ಬೀಳ್ಕೊಟ್ಟರು.

ಸಮಾಜಕ್ಕೆ ಮಾದರಿಯಾದರು ಗಂಡಿನ ಮನೆಯವರು. ಸೊಸೆಯಾಗಿ ಬರಮಾಡಿಕೊಂಡು, ಮಗಳಂತೆ ಗಂಡನ ಮನೆಗೆ ಬೀಳ್ಕೊಟ್ಟರು.

 

 

ಹಿಮಾಚಲ ಪ್ರದೇಶದ ಒಂದು ಚಿಕ್ಕ ಹಳ್ಳಿ ಕುಲವಾಡಿ. ಸುಖದೇವ ಹೆಸರಿನ ವ್ಯಕ್ತಿ 2011 ರಲ್ಲಿ ತನ್ನ ಮಗನ ಮದುವೆ ಮಾಡಿದ್ದನು. ಮದುವೆಯಾದ 10 ತಿಂಗಳಲ್ಲಿಯೇ ಇದ್ದೊಬ್ಬ ಮಗನ ಮೃತ್ಯು ಸಂಭವಿಸಿತು. ಇಡೀ ಕುಟುಂಬದ ಮೇಲೆ ದುಃಖದ ಪರ್ವತವೇ ಬಿದ್ದ ಹಾಗಾಯಿತು. ಆದರೂ ಇಂತಹ ಪರಿಸ್ಥಿತಿಯಲ್ಲಿ ಸೂಸೆಯಾದವಳು ತನ್ನ ಕುಟುಂಬವನ್ನು ಅತೀ ಜವಾಬ್ದಾರಿಯಿಂದ ಸರಿದೂಗಿಸಿದಳು. ಅಷ್ಟೇ ಅಲ್ಲ, ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಮನೆಮಗಳಂತೆ ಹೊತ್ತಳು.

ಸುಖದೇವನ ಕುಟುಂಬಕ್ಕೆ ಸೂಸೆಯೇ ಮಗಳು, ಮಗ ಎಲ್ಲವೂ ಆಗಿದ್ದಳು. ಚಿಕ್ಕ ವಯಸ್ಸಿನಲ್ಲಿ ಹಾಗೂ ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಗಂಡ ಅಗಲಿ ಹೋದ ದುಃಖವಂತು ಇದ್ದೆ ಇತ್ತು. ಇವೆಲ್ಲವುಗಳನ್ನು ಮೀರಿ ತಾನು ತನ್ನ ಕುಟುಂಬವೆನ್ನುವ ಮಮತೆ ಈ ಕಾರಣಗಳಿಂದ ತನ್ನ ಪರಿವಾರಕ್ಕೆ ಹೊಂದಿಕೊಂಡು ಇದ್ದಳು.

ಮಗನಿಗೆ ಕಳೆದುಕೊಂಡ ಸೊಸೆಗೆ ಮಗಳೆಂದು ತಿಳಿದು ಅವಳ ಪುನರ್ವಿವಾಹ ಮಾಡಿ ಕನ್ಯಾದಾನ ಮಾಡುವ ಬಗ್ಗೆ ವಿಚಾರ ಮಾಡಿದನು. ವಿಚಾರ ಮಾಡಿದ ಹಾಗೆ ಕೆಲಸಕ್ಕೆ ಶುರು ಹಚ್ಚಿಕೊಂಡನು. ಸುತ್ತಮುತ್ತಲಿನ ಊರುಗಳಲ್ಲಿ ಒಳ್ಳೊಳ್ಳೆಯ ಸಂಬಂಧಗಳ ಶೋಧದಲ್ಲಿ ತೊಡಗಿದನು. ಅದರಲ್ಲಿಯೇ ಒಂದು ಒಳ್ಳೆಯ ಸಂಬಂಧ ಕೂಡಿಬರಲು ಮಗಳ ಹಾಗೆ ಮದುವೆ ಮಾಡಿಸಿ ತಮ್ಮ ರೂಢಿ ಪರಂಪರೆಯ ಹಾಗೆ ಸೊಸೆಯ ಕನ್ಯಾದಾನವನ್ನು ಮಾಡಿದನು. ಅವಳ ಪತಿ ಏರ್ ಫೋರ್ಸ್ ನಲ್ಲಿ ನೌಕರಿ ಮಾಡುತ್ತಿದ್ದಾನೆ.

ಊರ ಜನರು ಸೊಸೆಯ ಮರುಮದುವೆಯಿಂದ ಮತ್ತು ಸುಖದೇವನು ಇಟ್ಟ ಮಹತ್ವದ ಹೆಜ್ಜೆಯಿಂದ ಹಾಡಿ ಹೊಗಳುತ್ತಿದ್ದಾರೆ. ಸುಖದೇವನ ಈ ಕಾರ್ಯ ಒಳ್ಳೆಯ ಸಮಾಜಮುಖಿಯಾಗಿದ್ದು ಇದರಿಂದ ಜನರ ಮನಸ್ಥಿತಿ , ವಿಚಾರ ಮಾಡುವ ಪದ್ಧತಿ, ನಿಶ್ಚಿತವಾಗಿ ಬದಲಾಗುವದು. ಎಂಬ ಮಾತುಗಳು ಕೇಳಿ ಬರುತ್ತಿವೆ. ನೂತನ ಸಮಾಜದ ಪ್ರಗತಿಗೆ, ಏಳಿಗೆಗೆ ಸುಖದೇವನಂತಹವರ ವಿಚಾರಗಳು ನಿಜಕ್ಕೂ ಮಾದರಿಯಾಗಲಿವೆ. ಏಕೆಂದರೆ, ವೈವಾಹಿಕ ಜೀವನದ ಮೊದಲ ಹೆಜ್ಜೆಯಲ್ಲಿಯೆ ಅವಳಿಗಾದ ಆಘಾತದಿಂದ ನಿಧಾನವಾಗಿ ಸಾಮಾನ್ಯ ಜೀವನ ಶೈಲಿಗೆ ಹೊಂದಿಸಿ ಆನಂತರ ಅವಳನ್ನು ತಮ್ಮ ಮಗಳಂತೆ ಕಂಡು ಅವಳಿಗೆ ಭವಿಷ್ಯದ ಒಂದು ಆಧಾರವನ್ನು ಹುಡುಕಿ ಸಪ್ತಪದಿ ತುಳಿಸಿ ಕಳಿಸುವದು ಎಂದರೆ ಸುಖದೇವನಂತಹ ಮನಸುಳ್ಳವರಿಗೆ ಮಾತ್ರ ಸಾಧ್ಯ.

Leave a Reply

Your email address will not be published. Required fields are marked *