ರಹಸ್ಯ! ಮಂಕಿ ಗಾಡ್ ಶಾಪದಿಂದ ಒಂದೇ ಒಂದು ರಾತ್ರಿಯಲ್ಲಿ ಪಟ್ಟಣವೇ ಮಂಗಮಾಯ.

ರಹಸ್ಯ!  ಮಂಕಿ ಗಾಡ್ ಶಾಪದಿಂದ ಒಂದೇ ಒಂದು ರಾತ್ರಿಯಲ್ಲಿ ಪಟ್ಟಣವೇ ಮಂಗಮಾಯ.

 

ಜಗತ್ತಿನಲ್ಲಿ ರಹಸ್ಯಗಳಿಗೆ ಕಡಿಮೆ ಇಲ್ಲ. ಮತ್ತು ಯಾವುದಾದರು ವಸ್ತುವಿನ ಪತ್ತೆ ಹಚ್ಚಿದ ಮೇಲೆ ಅದಕ್ಕೆ ವೈಜ್ಞಾನಿಕ ದೃಷ್ಟಿಕೋನದಿಂದ ಸತ್ಯವನ್ನು ಶೋಧಿಸುವ ಕಾರ್ಯ ನಡದೇ ಇರುತ್ತದೆ. ಈಗ ನಾವು ಅಮೇರಿಕಾದಲ್ಲಿಯ ಒಂದು ಪಟ್ಟಣದ ಅಸ್ತಿತ್ವ ಒಂದೇ ರಾತ್ರಿಯಲ್ಲಿ ವಿಸ್ಮಯಕಾರಿಯಾಗಿ ಮಾಯವಾದ ಘಟನೆಯ ಬಗ್ಗೆ ಓದುವವರಿದ್ದೇವೆ. ಇದರ ಶೋಧ ತುಂಬಾ ಪರಿಶ್ರಮದಿಂದ ಹಾಗೂ ಬಹಳ ಸಮಯದ ನಂತರವಾಯಿತು. ಈ ರಿಸರ್ಚ್ ನಿಂದ ಹೊರಬಂದ ಮಾಹಿತಿ ದಿಗ್ ಭ್ರಮೆ ಉಂಟು ಮಾಡಿತು.

ಮಂಕಿ ಗಾಡ್(ಆಂಜನೇಯ ಸ್ವಾಮಿ ಎನ್ನಬಹುದೇನೋ):
ಅಮೇರಿಕಾದಲ್ಲಿ ಒಂದು ವಿಸ್ಮಯಕಾರಿ ಪಟ್ಟಣದ ಶೋಧವಾಗಿದೆ. ಈ ಪಟ್ಟಣ ಮಧ್ಯ ಅಮೇರಿಕಾದಲ್ಲಿದೆ. ಪಟ್ಟಣದ ಹೆಸರು ಹಾಂಡುರಸ. ಈ ಪಟ್ಟಣ ಸಾವಿರಾರು ವರ್ಷಗಳ ಹಿಂದೆ ಇತ್ತಂತೆ. ಅಮೇರಿಕಾದಲ್ಲಿಯ ಎಲ್ಲಕ್ಕೂ ಶ್ರೀಮಂತ ಪಟ್ಟಣವಾದ ಈ ಹಾಂಡುರಸ ನಗರ ಒಂದೇ ಒಂದು ರಾತ್ರಿಯಲ್ಲಿ ಹೇಗೆ ಮಾಯವಾಯಿತು. ಎಂಬುದರ ಕಥೆಯು ಅಷ್ಟೇ ದಿಗಿಲುಗೊಳಿಸುವಂತಹದ್ದು ಆಗಿದೆ.

ಈ ಪಟ್ಟಣದ ದೇವರ ಹೆಸರು ಮಂಕಿ ಗಾಡ್. ಒಂದು ದಿನ ಈ ಪಟ್ಟಣದ ಜನರು ಮಂಕಿ ಗಾಡ್ ದೇವರ ಅವಮಾನ ಮಾಡಿದ ಕಾರಣದಿಂದ ಮಂಕಿ ಗಾಡ್ ದೇವರು ಸಿಟ್ಟಾಗಿ ಶಾಪ ವಿಧಿಸಿದನು. ಆ ಶಾಪದ ಪರಿಣಾಮದಿಂದಾಗಿ ಇಡೀ ಪಟ್ಟಣ ಒಂದೇ ರಾತ್ರಿಯಲ್ಲಿ ಮಾಯವಾಯಿತಂತೆ. ಜೊತೆಗೆ ಈ ಪಟ್ಟಣದ ಬಗ್ಗೆ ಅನೇಕ ವರ್ಷಗಳಿಂದ ಒಂದು ಭಯ ಪ್ರಚಲಿತದಲ್ಲಿದೆ ಅದೇನೆಂದರೆ, ಯಾರೇ ಆಗಲಿ ಈ ಪಟ್ಟಣದ ಬಗ್ಗೆ ಶೋಧ ನಡೆಸಿದ್ದಾದರೆ ಅವರಿಗೆ ತ್ವಚೆಯ ರೋಗಗಳಾಗುವವು. ಮತ್ತು ಹುಳ ಕೀಟಕಗಳು ತ್ವಚೆಯಲ್ಲಿ ತುರಿಕೆ(ಕೆರೆತ) ಶುರುಮಾಡುತ್ತವೆ,ಎಂಬ ವದಂತಿಗಳು ಚಾಲ್ತಿಯಲ್ಲಿದ್ದವು. ಆದರೆ ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ ನವರು ಈ ಎಲ್ಲ ವದಂತಿಗಳಿಗೆ ಬೆಲೆ ಕೂಡದೆ ಅದನ್ನು ಸುಳ್ಳು ಮಾಡಿದರು.

ಈ ಚಾನೆಲ್ ನ ಪ್ರಮುಖರಲ್ಲಿ ಡಗ್ಲಸ್ ಪ್ರೆಸ್ಟ್ರಿನ್ ಹಾಗೂ ಅವನ ತಂಡ ಈ ಪಟ್ಟಣವನ್ನು ಶೋಧಿಸಿದರು. ಈ ಟೀಮ್ ವು ತುಂಬಾ ನಿಬಿಡವಾದ ಅರಣ್ಯದಲ್ಲಿ ಪಟ್ಟಣದ ಶೋಧ ಕಾರ್ಯದಲ್ಲಿ ತೊಡಗಿತು. ಶೋಧ ಕಾರ್ಯ ಸಂದರ್ಭದಲ್ಲಿ ದೊರೆತ ಅನೇಕ ಪುರಾತನ ವಸ್ತುಗಳು, ಮೂರ್ತಿಗಳು ಎಲ್ಲವೂ ಮಂಕಿ ಗಾಡ್ ದೇವರದ್ದೆ ಇದ್ದವು ಎಂಬುದಾಗಿ ತಿಳಿದುಬಂದಿದೆ.

Leave a Reply

Your email address will not be published. Required fields are marked *