ಡಾಕ್ಟರ್ ನೀಡಿದ ಔಷಧಿಗಳ ಚೀಟಿಯ ಮೇಲೆ Rx ಅಂತ ಏಕೆ ಬರೆದಿರುತ್ತಾರೆ ಗೊತ್ತಾ?

ಡಾಕ್ಟರ್ ನೀಡಿದ ಔಷಧಿಗಳ ಚೀಟಿಯ ಮೇಲೆ Rx ಅಂತ ಏಕೆ ಬರೆದಿರುತ್ತಾರೆ ಗೊತ್ತಾ?

 

ಮನುಷ್ಯನು ಜೀವನದಲ್ಲಿ ಯಾವುದೇ ಅನಾರೋಗ್ಯದ ಕಾರಣದಿಂದ ಡಾಕ್ಟರ ಕಡೆಗೆ ಹೋಗುವ ಸಂದರ್ಭ ಬಂದೇ ಬರುತ್ತದೆ. ಆಗ ಡಾಕ್ಟರ್ ಪೆಶಂಟ್ ನ ಪರಿಪೂರ್ಣ ಚೆಕ್ ಅಪ್ ಮಾಡಿ ಔಷಧ ಗುಳಿಗೆಗನ್ನು ಬರೆದು ಕೊಡುತ್ತಾರೆ. ಎಷ್ಟೋ ಸಲ ಕೆಲವೊಂದು ಟೆಸ್ಟ್ ಗಳನ್ನು ಸಹಿತ ಬರೆದು ಕೊಡುತ್ತಾರೆ. ಆದರೆ ಔಷಧ ಗುಳಿಗೆಗಳನ್ನು ಬರೆದು ಕೊಡುವ ರಸೀದಿಯ(ಚೀಟಿಯ) ಮೇಲೆ Rx ಅಂತ ಬರೆದದ್ದು ನಾವೆಲ್ಲರೂ ನೋಡಿದ್ದೇವೆ. ಆದರೆ ಅದರ ಅರ್ಥ ಬಹಳ ಜನರಿಗೆ ಗೊತ್ತಿಲ್ಲ. ಈ Rx ಎಂದರೇನು? ಎಂಬುದು ತಿಳಿಯುವಾ.

Rx ಇದು ಮೂಲತಃ ಲ್ಯಾಟಿನ್ ಭಾಷೆಯ ಶಬ್ದವಾಗಿದೆ. ಹೀಗಾಗಿ Rx ಇದರ ಅರ್ಥ ಬಹಳ ಜನರಿಗೆ ಗೊತ್ತಿಲ್ಲ. ಅಷ್ಟೇ ಏಕೆ ಕೆಲವು ಡಾಕ್ಟರ್ ಗಳಿಗೂ ಸಹ ಇದರ ಅರ್ಥ ಗೊತ್ತಿಲ್ಲವೆಂದರೂ ಅತಿಶಯೋಕ್ತಿ ಆಗಲಾರದು. ಲ್ಯಾಟಿನ್ ಭಾಷೆಯಲ್ಲಿ Rx ತರ ಒಂದು ಚಿನ್ಹೆ ಇದೆ. ಅದರ ಅರ್ಥ Take ಎಂದಾಗುತ್ತದೆ. ಅಂದರೆ Rx ಎಂದರೆ ‘ತೆಗೆದುಕೊಳ್ಳು’ ಎಂದರ್ಥ.

Rx ಹಿಂದಿನ ಐತಿಹಾಸಿಕ ಮಹತ್ವ. ಮಾಹಿತಿಗಾಗಿ ತಿಳಿದು ಕೊಳ್ಳಬೇಕೆಂದರೆ ಆರೋಗ್ಯದ ಸಂಬಂಧವಾಗಿ ಚಿಕಿತ್ಸೆಯ ಕ್ಷೇತ್ರದಲ್ಲಿ ಯುನಾನ್ ದೇಶದ ಮಹತ್ವದ ಪಾಲು ಇದೆ. ಈ ಯುನಾನ್ ದೇವತೆಯ ಹೆಸರು ಹೊರಸ್. ಈ ಹೊರಸ್ ದೇವತೆಯ ಕಣ್ಣುಗಳು Rx ತರಹನೆ ಕಾಣಿಸುತ್ತವೆ. ದೇವರ ಕಣ್ಣುಗಳು ಆರೋಗ್ಯದ ಪ್ರತೀಕವಂತೆ. ಇದೆ ಕಾರಣಕ್ಕಾಗಿ ಡಾಕ್ಟರ್ ಕೊಡುವ ರಸೀದಿಯ ಮೇಲೆ Rx ಬರೆದಿರುತ್ತದೆ. ಮೋಜಿನ ಸಂಗತಿ ಎಂದರೆ ಎಷ್ಟೋ ಡಾಕ್ಟರ್ ಗಳಿಗೂ ಸಹ ಇದರ ಅರ್ಥ ಗೊತ್ತಿರುವದಿಲ್ಲ.

ಆದರೆ ಇನ್ನು ಮುಂದೆ ನಿಮಗೆ ಯಾರಾದರೂ ಇದರ ಬಗ್ಗೆ ಪ್ರಶ್ನೆ ಮಾಡಿದರೆ ನೀವು ಮಾತ್ರ ಉತ್ತರಿಸಲು ರೆಡಿಯಾಗಿರುತ್ತಿರಿ, ಇದು ನಿಶ್ಚಿತ.

1 Comment


  1. Please post this kind of rare unique messages to the public it is awesome job

    Reply

Leave a Reply

Your email address will not be published. Required fields are marked *