ಕನ್ನಡದ ಈ ನಟರು ಎಷ್ಟು ಓದಿದ್ದಾರೆ ಗೊತ್ತಾ?

ಕನ್ನಡದ ಈ ನಟರು ಎಷ್ಟು ಓದಿದ್ದಾರೆ ಗೊತ್ತಾ?

 

ಕನ್ನಡದ ಸ್ಟಾರ್ ನಟರು ಸಿನೆ ಕ್ಷೇತ್ರದಲ್ಲಿ ತಮ್ಮ ಕಲೆಯ ಮುಖಾಂತರ ಸೈ ಎನ್ನಿಸಿಕೊಂಡಿದ್ದಾರೆ. ಆದರೆ ಇವರು ಶಾಲೆಯ ಶಿಕ್ಷಣ ಎಲ್ಲಿಯ ವರೆಗೆ ಮಾಡಿದ್ದಾರೆ, ಎನ್ನುವ ಕುತೂಹಲ ಅಭಿಮಾನಿಗಳಿಗೆ ಇದ್ದೇ ಇರುತ್ತದೆ. ಆದ್ದರಿಂದ ನಿಮ್ಮ ನೆಚ್ಚಿನ ಕಲಾವಿದರ ಶಿಕ್ಷಣ ಮತ್ತು ಕಾಲೇಜ್ ನ ಮಾಹಿತಿ ಪಡೆದುಕೊಳ್ಳಿ.

ಗೋಲ್ಡನ್ ಸ್ಟಾರ್ ಗಣೇಶ್

ಇವರು ನೆಲಮಂಗಲದಲ್ಲಿ ಕಲಿತಿದ್ದು ಇವರು ಎಲೆಕ್ಟ್ರಾನಿಕ್ ನಲ್ಲಿ ಡಿಪ್ಲೋಮಾ ಮಾಡಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ

ಇವರು  ಕಾಮರ್ಸ್ ವಿಭಾಗದಲ್ಲಿ ಗ್ರ್ಯಾಜ್ಯುಯೆಟ್ ಮಾಡಿದ್ದಾರೆ. ಕಾಲೇಜಿನ ಹೆಸರು ಎ. ಪಿ. ಎಸ್ ಕಾಲೇಜ್ ಬೆಂಗಳೂರು.

ದಿಗಂತ್

ಇವರು ಭಗವಾನ್ ಮಹಾವೀರ್ ಕಾಲೇಜ್ ನಲ್ಲಿ ವ್ಯಾಸಂಗ ಮಾಡಿದ್ದು ಕಾಮರ್ಸ್ ನಲ್ಲಿ ಡಿಗ್ರಿ ಮುಗಿಸಿದ್ದಾರೆ.

ಕಿಚ್ಚ ಸುದೀಪ

ಇವರು ಬೆಂಗಳೂರಿನಲ್ಲಿಯೇ ದಯಾನಂದ ಸಾಗರ ಕಾಲೇಜ್ ನಲ್ಲಿ ಇಂಡಸ್ಟ್ರಿಯಲ್ ಮತ್ತು ಪ್ರೊಡಕ್ಷನ್ ವಿಭಾಗದಲ್ಲಿ ಇಂಜಿನೀಯರ್ ಮುಗಿಸಿದ್ದಾರೆ.

ಯಶ್

ಇವರ ಶಿಕ್ಷಣ ಮೈಸೂರಿನ ಮಹಾಜನ ಹಾಯ್ ಸ್ಕೂಲ್ ನಲ್ಲಿ ಆಗಿದೆ. ಮುಂದೆ ಇವರು ನಟನೆಯ ಕಡೆಗೆ ಹೆಚ್ಚು ಗಮನ ಹರಿಸಿದರು.

ಪ್ರಜ್ವಲ್ ದೇವರಾಜ್

ಅವರು ಬೆಂಗಳೂರಿನ ಭಗವಾನ ಮಹಾವೀರ ಜೈನ್ ಕಾಲೇಜ್ ನಲ್ಲಿ ಮ್ಯಾನೇಜ್ ಮೆಂಟ್ ಸ್ಟಡಿಯಲ್ಲಿ ಬ್ಯಾಚುಲರ್ ಡಿಗ್ರಿ ಮುಗಿಸಿದ್ದಾರೆ.

ರಮೇಶ ಅರವಿಂದ 

 

ಇವರು ಸಹಿತ ತಮ್ಮ ಇಂಜಿನೀಯರಿಂಗ್ ಶಿಕ್ಷಣವನ್ನು ವಿಶ್ವೇಶ್ವರಯ್ಯಾ ಕಾಲೇಜ್ ಆಫ್ ಇಂಜಿನೀಯರಿಂಗ್ ನಲ್ಲಿ ಮುಗಿಸಿದ್ದಾರೆ.

ಶಿವರಾಜ್ ಕುಮಾರ

ಇವರು ದ ನಿವ್ ಕಾಲೇಜ್ ಯೂನಿವರ್ಸಿಟಿ ಆಫ್ ಮದ್ರಾಸ್( ಈಗಿನ ಚೆನ್ನೈ) ಮತ್ತು MGR ಗವರ್ನ್ ಮೆಂಟ್ ಫಿಲಂ ಟೆಲಿವ್ಹಿಜನ್ ಟ್ರೇನಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ತಮ್ಮ ಶಿಕ್ಷಣ ಮುಗಿಸಿದ್ದಾರೆ.

ರಾಜರತ್ನ ಪುನೀತ್ ರಾಜಕುಮಾರ

ಅವರು ಕಂಪ್ಯೂಟರ್ ಸಾಯನ್ಸ್ ನಲ್ಲಿ ಡಿಪ್ಲೊಮಾ ಮಾಡಿದ್ದಾರೆ.

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

ಇವರು ಎನ್. ಎಮ್. ಎ. ಎಮ್. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲೋಜಿಯಲ್ಲಿ ಎಲೆಕ್ಟ್ರಾನಿಕ್ ಮತ್ತು ಕಮ್ಯೂನಿಕೆಶನ್ ನಲ್ಲಿ ಡಿಗ್ರಿ ಪಡೆದಿದ್ದಾರೆ. ಚಿತ್ರರಂಗಕ್ಕೆ ಬರುವದಕ್ಕೂ ಮುನ್ನ ಎರಡು ವರ್ಷ ಸಾಫ್ಟ್ ವೆಯರ್ ಇಂಜಿನೀಯರ್ ಆಗಿ ಕೆಲಸ ಮಾಡಿದ್ದಾರೆ.

ನೀನಾಸಂ ಸತೀಶ್

ಇವರು ಆಕ್ಟಿಂಗ್ ನಲ್ಲಿ ಎರಡು ವರ್ಷದ ಡಿಪ್ಲೋಮಾ ಕೋರ್ಸ್ ಮುಗಿಸಿದ್ದಾರೆ.

ದರ್ಶನ

ಯಶಸ್ಸಿನ ಮುಗಿಲು ಮುಟ್ಟಿದ ದರ್ಶನ್ ಅವರು ಓದಿನಲ್ಲಿ ಹೆಚ್ಚು ಗಮನ ಹರಿಸಿಲ್ಲ ಮತ್ತು ಓದು ಅವರ ಯಶಸ್ಸಿಗೆ ಅಡ್ಡಿಯೂ ಬಂದಿಲ್ಲ. ಇವರ ಶಿಕ್ಷಣ P. U.C ವರೆಗೆ ಮಾತ್ರ ಆಗಿದೆ.

Leave a Reply

Your email address will not be published. Required fields are marked *