ತಾಮ್ರದ ತಂಬಿಗೆಯಲ್ಲಿಯ ನೀರು ಕುಡಿಯುವದರಿಂದ ದೇಹಕ್ಕೆ ಆಗುವ ಲಾಭಗಳು.

ತಾಮ್ರದ ತಂಬಿಗೆಯಲ್ಲಿಯ ನೀರು ಕುಡಿಯುವದರಿಂದ ದೇಹಕ್ಕೆ ಆಗುವ ಲಾಭಗಳು.

 

1.ಕಾಂತಿಯುಕ್ತ ತ್ವಚೆ:
ಪ್ರತಿದಿನ ರಾತ್ರಿ ತಾಮ್ರದ ತಂಬಿಗೆಯಲ್ಲಿ ತುಂಬಿಟ್ಟ ನೀರು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸುವದರಿಂದ ತ್ವಚೆಗೆ ಸಂಬಂಧಿಸಿದ ಸರ್ವ ಸಮಸ್ಯೆಗಳಿಂದ ಮುಕ್ತಿ,ಜೊತೆಗೆ ತ್ವಚೆ ಕಾಂತಿಯುಕ್ತವಾಗಿ ಹೊಳೆಯುವದು.

2.ಕೀಲು ನೋವಿನಿಂದ ಪರಿಹಾರ:
ದಿನಂಪ್ರತಿ ಮುಂಜಾನೆ ಮತ್ತು ಸಾಯಂಕಾಲ ತಾಮ್ರದ ಪಾತ್ರೆಯಲ್ಲಿಯ ನೀರು ಕುಡಿಯುವದರಿಂದ ಕೀಲು ನೋವಿಗೆ ಪರಿಹಾರ ಸಿಗುವದು.

3.ದೇಹದ ತೂಕ ಇಳಿಸಲು ಸಹಾಯ:-
ದಿನಂಪ್ರತಿ ಮುಂಜಾನೆ ಹಾಗೂ ಸಾಯಂಕಾಲ ತಾಮ್ರದ ತಂಬಿಗೆಯಲ್ಲಿ ತುಂಬಿಟ್ಟ ನೀರು ಕುಡಿಯುವದರಿಂದ ಶರೀರದಲ್ಲಿಯ ಬೇಡವಾದ ಬೊಜ್ಜು ಕಡಿಮೆಯಾಗುವದು. ಇದರಿಂದ ದೇಹದ ತೂಕ ಹತೋಟಿಯಲ್ಲಿರುವದು.

4.ಬ್ಯಾಕ್ಟೇರಿಯಾಗಳು ನಾಶವಾಗುತ್ತವೆ:- ಈ ತಂಬಿಗೆಯಲ್ಲಿ ಆಂಟಿ ಬ್ಯಾಕ್ಟೇರಿಯಾ ಗುಣಗಳಿರುತ್ತವೆ. ಆದ್ದರಿಂದ ಇದರಲ್ಲಿ ನೀರು ತುಂಬಿ ಇಡುವದರಿಂದ ಬ್ಯಾಕ್ಟೇರಿಯಾಗಳು ನಶಿಸಿ ಹೋಗುತ್ತವೆ, ಇದರಿಂದ ಡಾಯರಿಯಾ,ಅತಿಸಾರ ಮತ್ತು ಕಾಮಾಲೆಯಂಥ ರೋಗಗಳಾಗುವ ಭಯ ಎಳ್ಳಷ್ಟೂ ಇರುವದಿಲ್ಲ.

5. ಕ್ಯಾನ್ಸರ್ ವಾಗುವ ಭೀತಿ ಇರುವದಿಲ್ಲ:- ತಾಮ್ರದ ಬಿಂದಿಗೆಯಲ್ಲಿಯ ನೀರಿನಲ್ಲಿ ಆಂಟಿ ಆಕ್ಸಿಡೆಂಟ್ ಸಾಕಷ್ಟು ಪ್ರಮಾಣದಲ್ಲಿ ಇರುತ್ತದೆ,ಇದರಿಂದ ಕ್ಯಾನ್ಸರ್ ನೊಡನೆ ಹೋರಾಡಲು ಸಹಾಯವಾಗುತ್ತೆ.

6. ಗಾಯ ಬೇಗನೆ ಮಾಯವಾಗುವದು:- ಈ ತಂಬಿಗೆಯಲ್ಲಿ ಆಂಟಿ ಬ್ಯಾಕ್ಟೇರಿಯಾ ಗುಣ ಹೊಂದಿರುವದರಿಂದ ಗಾಯ ಬೇಗನೆ ಮಾಸಲು ಕಾರಣವಾಗುವದು. ಏನಾದರೂ ಗಾಯವಾದರೆ ದಿನಾಲು ತಾಮ್ರದ ತಂಬಿಗೆಯಲ್ಲಿಯ ನೀರನ್ನು ಕುಡಿಯಬೇಕು.

7. ಥಾಯ್ ರಾಯ್ಡ ವಾಗುವ ಸಾಧ್ಯತೆಗಳು ತುಂಬಾ ಕಡಿಮೆ:-
ಈ ತಂಬಿಗೆಯಲ್ಲಿನ ಕಾಪರ್ ಥ್ಯಾರೋಕ್ಸಿನ್ ಹಾರ್ಮೋನ್ ವನ್ನು ಸಂತುಲಿತವಾಗಿಡುವದರಿಂದ ಥಾಯ್ ರಾಯ್ಡ ವಾಗುವ ಸಾಧ್ಯತೆಗಳಿರುವದಿಲ್ಲ.

 

8. ಹೃದಯ ಕ್ರಿಯೆ ಚೆನ್ನಾಗಿರುತ್ತದೆ:- ತಾಮ್ರದ ಪಾತ್ರೆಯಲ್ಲಿ 8 ರಿಂದ 10 ಗಂಟೆಗಳ ವರೆಗೆ ಇಟ್ಟ ನೀರು ಕುಡಿಯುವದರಿಂದ, ಕೊಲೆಸ್ಟ್ರಾಲ್ ಲೇವಲ್ ನಿಯಂತ್ರಣದಲ್ಲಿರುವದು. ಹೃದಯ ಕ್ರಿಯೆ ಸಾಮಾನ್ಯವಾಗಿರುವದು.

9. ಆಸಿಡಿಟಿ ನಷ್ಟ ವಾಗುವದು:-
ಈ ಪಾತ್ರೆಯಲ್ಲಿ ಕಡಿಮೆ ಎಂದರೆ 8 ರಿಂದ 10 ಗಂಟೆಗಳವರೆಗೆ ಶೇಖರಿಸಿಟ್ಟ ನೀರು ಕುಡಿಯುವದರಿಂದ ಶರೀರದಲ್ಲಿಯ ಆಸಿಡಿಟಿ ಮತ್ತು ಗ್ಯಾಸ್ ದೂರವಾಗಿ ಪಚನಕ್ರಿಯೆ ಸುಲಭವಾಗುವದು.

10. ರಕ್ತ ವೃದ್ಧಿಗೆ ಸಹಾಯ:-
ಈ ಪಾತ್ರೆಯಲ್ಲಿಯ ನೀರು ನಿಯಮಿತವಾಗಿ ಕುಡಿದರೆ ಪಾತ್ರೆಯಲ್ಲಿಯ ಕಾಪರ್ ರಕ್ತಹೀನತೆಯನ್ನು ದೂರ ಮಾಡುವದು.ಇದು ಅನಿಮಿಯಾದಿಂದ ಉಳಿಸುವದು.

Leave a Reply

Your email address will not be published. Required fields are marked *