ಸರಕಾರಿ ನೌಕರಿಯನ್ನು ತ್ಯಜಿಸಿ ಒಕ್ಕಲುತನದಿಂದ ಕೋಟ್ಯಾವಧಿ ರೂಪಾಯಿಗಳನ್ನು ಗಳಿಸುವ ತರುಣ. ಉಚ್ಚ ಶಿಕ್ಷಣವನ್ನು ಪಡೆದ ತರುಣನ ಜಾಣತನವನ್ನು ತಿಳಿದುಕೊಳ್ಳಿ.

ಸರಕಾರಿ ನೌಕರಿಯನ್ನು ತ್ಯಜಿಸಿ ಒಕ್ಕಲುತನದಿಂದ ಕೋಟ್ಯಾವಧಿ ರೂಪಾಯಿಗಳನ್ನು ಗಳಿಸುವ ತರುಣ. ಉಚ್ಚ ಶಿಕ್ಷಣವನ್ನು ಪಡೆದ ತರುಣನ ಜಾಣತನವನ್ನು ತಿಳಿದುಕೊಳ್ಳಿ.

 

ಸರಕಾರಿ ನೌಕರಿಯನ್ನು ತ್ಯಜಿಸಿ ಒಕ್ಕಲುತನದಿಂದ ಕೋಟ್ಯಾವಧಿ ರೂಪಾಯಿಗಳನ್ನು ಗಳಿಸುವ ತರುಣ.
ಉಚ್ಚ ಶಿಕ್ಷಣವನ್ನು ಪಡೆದ ತರುಣನ ಜಾಣತನವನ್ನು ತಿಳಿದುಕೊಳ್ಳಿ.

ಹೆಸರು ಹರೀಶ್ ಶಿಕ್ಷಣ ಜೈಪೂರ್ ನಲ್ಲಿ ಪಾಲಿಟೆಕ್ನಿಕ್ ಪೂರ್ಣ. ಮತ್ತು ದೆಹಲಿಯ ಮಹಾವಿದ್ಯಾಲಯದಲ್ಲಿ MBA ಪ್ರಥಮ ವರ್ಷದಲ್ಲಿರುವಾಗಲೇ ಜಾಬ್ ಸಿಕ್ಕನಂತರ MBA ವಿದ್ಯಾಭ್ಯಾಸ ಪೂರ್ಣ ಗೊಳ್ಳಲಿಲ್ಲ. ಜೈಸಲ್ ಮೇರದ ನಗರಪಾಲಿಕೆಯಲ್ಲಿ ಕನಿಷ್ಠ ಅಭಿಯಂತರು ಎಂದು ಕಾರ್ಯನಿರ್ವಹಿಸುವ ಜವಾಬ್ದಾರಿ ಸಿಕ್ಕಿತು. ತದನಂತರ ಬರೀ ಎರಡು ತಿಂಗಳುಗಳಲ್ಲಿಯೇ ನೌಕರಿಯಲ್ಲಿಯ ರುಚಿ ಕಡಿಮೆಯಾಗಿ ಬೇರೆ ಏನಾದರೂ ವ್ಯವಸಾಯ ಮಾಡಬೇಕೆಂಬುದರ ಬಗ್ಗೆ ಮನದಲ್ಲಿ ಶೋಧ ನಡೆಯಿತು.

ಇದೇ ಸಂದರ್ಭದಲ್ಲಿ ಬಿಕಾನೆರ್ ಅಗ್ರಿಕಲ್ಚರ್ ವಿಶ್ವ ವಿದ್ಯಾಲಯದ ಒಂದು ವ್ಯಕ್ತಿಯ ಜೊತೆಗೆ ಭೇಟಿಯಾಯಿತು. ಹರೀಶನಿಗೆ ಜೋಳ ಮತ್ತು ಸಜ್ಜೆಯ ಬದಲಾಗಿ ಕೃಷಿಯಲ್ಲಿ ಬೇರೆ ಪರ್ಯಾಯ ವ್ಯವಸ್ಥೆ ಬೇಕಾಗಿತ್ತು. ಚರ್ಚೆಯಲ್ಲಿ ವಿದ್ಯಾಲಯದ ವ್ಯಕ್ತಿ ಲೋಳಸರ(ಅಲೋವಿರಾ)ದ ಕೃಷಿ ಮಾಡುವ ಬಗ್ಗೆ ಅದನ್ನು ತಿಳಿದುಕೊಳ್ಳುವ ಸಲುವಾಗಿ ದೆಹಲಿಗೆ ಒಂದು ಪ್ರದರ್ಶನಕ್ಕೆ ಕರೆದುಕೊಂಡು ಹೋದರು. ಅಲ್ಲಿ ಒಕ್ಕಲುತನದ ಹೊಸ ಹೊಸ ತಂತ್ರಜ್ಞಾನಗಳ ಜೊತೆಗೆ ನವನವೀನ ಯೋಚನೆಗಳು ಹೂಳೆದವು. ಅಲ್ಲಿ ಲೋಳಸರ(elovera) ವ್ಯವಸಾಯ ಬಗ್ಗೆ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿ ದಿಲ್ಲಿಯಿಂದ ವಾಪಸ್ ಬರುವಾಗ ನೇರ ಬಿಕಾನೇರಗೆ ಹೋಗಿ ಲೋಳಸರ ಸಸಿಗಳನ್ನು ಖರೀದಿಸಿ ಜೈಸಲ್ ಮೆರ್ ಗೆ ಬಂದರು. ಹರೀಶರವರು ಈ ವ್ಯವಸಾಯ ಪ್ರಾರಂಭಿಸಿದ ನಂತರ ಅನೇಕ ಜನರು ಆತನಿಗೆ ಲೋಳಸರ ವ್ಯವಸಾಯ ನಾನೂ ಮಾಡಿದ್ದೇನೆ ಆದರೆ ಇದರಲ್ಲಿ ಯಶಸ್ಸು ಸಿಗಲಿಲ್ಲ ಎಂದು ಹೇಳುತ್ತಿದ್ದರು. ಇಂತಹ ಮಾತುಗಳಿಂದ ಹರೀಶರಿಗೆ ಚಿಂತೆಯಾಗುತ್ತಿತ್ತು. ಕೆಲವೊಂದು ಸಲ ಏನು ಮಾಡಬೇಕೆಂಬುದೇ ತೋಚುತ್ತಿರಲಿಲ್ಲ ಅವರಿಗೆ ಯಶಸ್ಸು ಯಾಕೆ ಸಿಗಲಿಲ್ಲ, ಎನ್ನುವ ಬಗ್ಗೆ ವಿಚಾರ ಮಾಡಿದರು. ಕೊನೆಗೆ ಗೊತ್ತಾಯಿತು, ಈ ಒಕ್ಕಲಿಗರು ಲೋಳಸರ ಕೃಷಿ ಮಾಡಿದರು,ಆದರೆ ಖರೀದಿ ಮಾಡುವವರ ಸಂಪರ್ಕದಲ್ಲಿ ಇರಲಿಲ್ಲ ಇದೇ ಕಾರಣದಿಂದ ಇವರ ಉತ್ಪಾದನೆಗೆ ಮಾರ್ಕೆಟ್ ಸಿಗಲಿಲ್ಲ. ಮಾರ್ಕೆಟಿಂಗ್ ಇಲ್ಲದೆ ಇದರಲ್ಲಿ ಯಶಸ್ಸು ಇಲ್ಲ ಎಂಬುದನ್ನು ಹರೀಶ್ ಅವರು ತಿಳಿದುಕೊಂಡರು. ಮೊದ ಮೊದಲು ಹರೀಶ್ ರ ಅನುಭವ ಇದರಲ್ಲಿ ಕಡಿಮೆ ಇತ್ತು ಆದರೆ ಏನಾದರೂ ಹೊಸದನ್ನು ಸಾಧಿಸುವ ಉದ್ದೇಶದಿಂದ ಪ್ರೇರಿತರಾಗಿದ್ದರು.

ವ್ಯವಸಾಯದ ಪ್ರಾರಂಭದಲ್ಲಿ ಜಯಪುರದಲ್ಲಿಯ ಕೆಲವು ಏಜೆನ್ಸಿಗಳ ಕಡೆಗೆ ಸಂಪರ್ಕಿಸಿ ಈ ಎಲೆಗಳ ಮಾರಾಟ ಮಾಡಿದರು. ಇದರ ನಂತರ ಈ ವ್ಯವಸಾಯದ ವಿಸ್ತಾರವನ್ನು ಹೇಗೆ ಮಾಡಬೇಕೆಂಬುದರ ಬಗ್ಗೆ ಮಿತ್ರರ ಜೊತೆಗೆ ಚರ್ಚಿಸಿದರು. ಇದನ್ನೂ ಮಾಡುತ್ತ ಮಾಡುತ್ತ ಎಲೆಯ ಒಳಗಿನ ಲೋಳೆಯನ್ನು ಹೊರಗೆ ತಗೆದು ಸ್ವತಃ ತಾವೇ ಮಾರಾಟ ಮಾಡಲು ಪ್ರಾರಂಭಿಸಿದರು. ಇದನ್ನು ಮಾರಾಟ ಮಾಡಲು, ಗ್ರಾಹಕರನ್ನು ಇಂಟರನೆಟ್ ಮೇಲೆ ಶೋಧಿಸುವಾಗ ಶೋಧದ ಅಂತ್ಯ ಯೋಗ ಗುರು ರಾಮದೇವ ಬಾಬಾರ ಪತಂಜಲಿ ಕಂಪನಿ ಮುಂದೆ ಬಂದು ನಿಂತಿತು. ಹರೀಶ ಅವರಿಗೆ ಭಾರತದಲ್ಲಿಯ ಎಲ್ಲಕ್ಕೂ ದೊಡ್ಡ ಗ್ರಾಹಕವರ್ಗ ಸಿಕ್ಕಿತು. ಹರೀಶ್ ರ ಪ್ರಕಾರ ಅವರಿಗೆ ಒಂದು ಮೇಲ್ ಮಾಡಿ ನನ್ನ ಕೆಲಸದ ಬಗ್ಗೆ ತಿಳಿಸಿ ಹೇಳಿದ ನಂತರ ಅವರಿಂದ ಒಳ್ಳೆಯ ಪ್ರತಿಕ್ರಿಯೆ ಲಭಿಸಿತು. ಇದು ನನ್ನ ವ್ಯವಸಾಯಕ್ಕೆ , ನನ್ನ ಜೀವನಕ್ಕೆ ಸಿಕ್ಕ ಮಹತ್ವದ ತಿರಿವು ಆಗಿತ್ತು. ಯಾಕೆಂದರೆ ಈ ಒಂದು ವ್ಯವಹಾರದಿಂದ ಅನೇಕ ಪ್ರಶ್ನೆಗಳಿಗೆ ಉತ್ತರ ದೊರೆತು ಹಣ ಗಳಿಸುವ ಮಾರ್ಗ ದೊರೆತಂತಾಯಿತು ಎಂದು ಒಪ್ಪುತ್ತಾರೆ.

ಈಗ ಹಿಂದಿನ ಎರಡು ವರ್ಷಗಳಿಂದ ಸತತವಾಗಿ ಹರೀಶ್ ಅವರು ತಮ್ಮ ಉತ್ಪಾದನೆಯನ್ನು ಪತಂಜಲಿಗೆ ಕಳಿಸುತ್ತಿದ್ದಾರೆ.

ನಿರ್ಮಾಣವಾದ ಸಂಶಯ, ಚಿಂತೆಗಳಿಗೆ ಸೋಲದೇ ಅದರ ಮೇಲೆ ಉಪಾಯಗಳನ್ನು ಹುಡುಕಿ ತನ್ನ ವ್ಯವಸಾಯ ಹೇಗೆ ವಿಸ್ತಾರ ಮಾಡಲು ಬರುವುದು ಎಂಬುದನ್ನು ಅನುಭವದಿಂದ ಹಾಗೂ ಸತತ ಪ್ರಯತ್ನದಿಂದ ನಾನು ಕಲಿತೆ ಎಂದು ಹರೀಶ್ ಹೇಳುತ್ತಾರೆ.

ಹರೀಶ್ ಅವರ ಕಂಪನಿ ‘ನ್ಯಾಚುರಲ್ ಅಗ್ರೋ’ ಇಂದು ಸಾಕಷ್ಟು ಆದಾಯ ಗಳಿಸುವ ಕಂಪನಿಯಾಗಿದೆ. ಈ ಕಂಪನಿಯಲ್ಲಿ ಕೆಲಸ ಮಾಡುವವರಿಗೂ ಚೆನ್ನಾಗಿ ಸಂಬಳ ದೊರೆಯುತ್ತದೆ.

ಹರೀಶ್ ಅವರ ಪ್ರಕಾರ ತಯಾರಿಸಿದ ಉತ್ಪಾದನೆಯನ್ನು ಗುಣಮಟ್ಟವನ್ನು ಕಾಯ್ದು ಕೊಳ್ಳುವದು ಬಹಳ ಮಹತ್ವದ್ದಾಗಿದೆ. ಇದರ ಸಂಬಂಧವಾಗಿ ಯಾವುದೇ ತಕರಾರುಗಳು ಇಲ್ಲಿ ವರೆಗೆ ಬಂದಿಲ್ಲ. ಉತ್ಪಾದನೆಯ ಪ್ರತಿಯೊಂದು ಪ್ರಕ್ರಿಯೆಯಲ್ಲಿ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳುತ್ತೆವೆಂದು ಹೇಳುತ್ತಾರೆ.

12 Comments


 1. Sir im also intrested to grow alovera plantation .. Sir plzz help me and give the suggetion and plzz guide me

  Reply

 2. 9686101140 this is my number

  Reply

 3. Please give me details and cantact number for Harish sir

  Reply

  1. Hello sir,
   Your thinking is awesome.
   Please need your contact for.appointment

   Reply

  2. Hi sir am also want to do oliver business…Plz help me sir…Dis s my no 9902246666 Manoj am from Hubli…Cal me sir

   Reply

 4. Very very Good Work Harish Sir .All The Best Sir…… Plz Your Mobile No Send Me…… My Mobile No:9632761796

  Reply

 5. Please share your contact number Mr Harish
  My wats app no is 9663759791

  Reply

 6. Please give me details and cantact number for Harish sir

  Reply

Leave a Reply

Your email address will not be published. Required fields are marked *