ಈ ಕ್ರಿಕೆಟ್ ಆಟಗಾರ 1200 ಓವರ್ ಗಳಲ್ಲಿ ಒಂದು ನೊಬಾಲ್ ನ್ನೂ ಎಸೆದಿಲ್ಲ ಯಾರು ಗೊತ್ತಾ?

ಈ ಕ್ರಿಕೆಟ್ ಆಟಗಾರ 1200 ಓವರ್ ಗಳಲ್ಲಿ ಒಂದು ನೊಬಾಲ್ ನ್ನೂ ಎಸೆದಿಲ್ಲ ಯಾರು ಗೊತ್ತಾ?

 

ಕ್ರಿಕೆಟ್ ಆಟದಲ್ಲಿ ಬಾಲರ್ ನೊಬಾಲ್ ನ್ನು ಎಸೆಯುವದು ಸಾಮಾನ್ಯ. ಎಷ್ಟೋ ಸಲ ಮ್ಯಾಚ್ ನ ಮಹತ್ವದ ತಿರುವಿನಲ್ಲಿ ನೊಬಾಲ್ ಕಾರಣದಿಂದ ಬ್ಯಾಟ್ಸಮನ್ ಔಟಾಗದೆ ಎದುರಿನ ತಂಡ ಮ್ಯಾಚ್ ಗೆದ್ದದ್ದನ್ನು ನೋಡಿದ್ದೇವೆ. ಪಂದ್ಯದ ಗೆಲುವಿಗೆ ಮತ್ತು ಸೋಲಿಗೆ ಅನೇಕ ಬಾರಿ ನೊಬಾಲ್ ಎಸೆದಿದ್ದು ಮಹತ್ವದ ಆಘಾತವನ್ನು ಉಂಟು ಮಾಡುತ್ತದೆ.

ಹೀಗಿರುವಾಗ ಈ ಅಂತರಾಷ್ಟ್ರೀಯ ತಂಡದ ಆಟಗಾರ ತನ್ನ ಏಕದಿನ ಕ್ರಿಕೆಟ್ ಕರಿಯರ್ ನಲ್ಲಿ ಪಾದಾರ್ಪಣೆಯಿಂದ ಹಿಡಿದು ಇಲ್ಲಿಯವರೆಗೆ ಒಂದು ಬಾಲ್ ನ್ನು ನೊಬಾಲ್  ಎಸೆದಿಲ್ಲ. ಈತನ ಹೆಸರು ಮೊಹಮ್ಮದ್ ಹಾಫಿಜ್.

 

ಪಾಕಿಸ್ತಾನ ತಂಡದ ಆಟಗಾರನಾದ ಮೊಹಮ್ಮದ್ ಹಾಫೀಜ್. ಏಪ್ರಿಲ್ 2003 ರಲ್ಲಿ ಜಿಂಬಾಬ್ವೆ ವಿರುದ್ಧ ಕ್ರಿಕೆಟ್ ನಲ್ಲಿ ಪಾದಾರ್ಪಣೆ ಮಾಡಿದ್ದರು. ಇಲ್ಲಿಯವರೆಗೆ 192 ಏಕದಿನ ಪಂದ್ಯಗಳಲ್ಲಿ 160 ಇನ್ನಿಂಗ್ಸಗಳಲ್ಲಿ ಒಟ್ಟು 7202 ಬಾಲ್ ಗಳನ್ನು ಎಸೆದಿದ್ದಾರೆ. ಅದರಲ್ಲಿ 4950 ರನ್ನಗಳನ್ನು ಕೊಟ್ಟಿದ್ದಾರೆ. ಅದರಲ್ಲಿ ಒಂದು ಸಹ ನೊಬಾಲ್ ನ್ನು ಹಾಕಿಲ್ಲ ಇದು ವಿಶೇಷ.

160 ಇನ್ನಿಂಗ್ಸಗಳಲ್ಲಿ 135 ವಿಕೆಟ್ ಗಳನ್ನೂ ಕಲೆಹಾಕಿದ ಹಾಫೀಜ್ ಅವರು ಎದುರಿನ ಸಂಘಕ್ಕೆ ಈಜಿಯಾಗಿ ರನ್ ಬಿಟ್ಟು ಕೊಡಲಾರದ ಬಾಲರ್ ಎಂದೇ ಪರಿಚಿತರಾಗಿದ್ದಾರೆ.

Leave a Reply

Your email address will not be published. Required fields are marked *