ಒಂದು ತೃತೀಯ ಪಂಥಿ ನ್ಯಾಯಾಲಯದ ಜಜ್ ಹೇಗಾದಳು? ಗೊತ್ತಾ!

ಒಂದು ತೃತೀಯ ಪಂಥಿ ನ್ಯಾಯಾಲಯದ ಜಜ್ ಹೇಗಾದಳು? ಗೊತ್ತಾ!

 

●ಜಜ್ ಆಗುವವರೆಗಿನ ಹೋರಾಟದ ಪ್ರವಾಸ, ಸಂಘರ್ಷ, ಸಮಾಜದಿಂದ ನಿರ್ಲಕ್ಷ್ಯಕೊಳಗಾದ ತೃತೀಯ ಪಂಥೀಯ ಯಶಸ್ಸು ಇಷ್ಟೊಂದು ಸರಳವಾಗಿಲ್ಲ. ಜೀವನೋಪಾಯದ ಸಲುವಾಗಿ ಭಿಕ್ಷೆ ಬೇಡುವದರಿಂದ ಹಿಡಿದು ಸೋಷಲ್ ವರ್ಕರ್ ಆಗಿ ಕೆಲಸ ಮಾಡುತ್ತ ನಂತರ ಲೋಕ ನ್ಯಾಯಾಲಯದ ನ್ಯಾಯಾಧೀಶರಾಗುವ ತನಕ ಅನೇಕ ಸಮಸ್ಯೆಗಳಿಗೆ ಎದುರಾಗ ಬೇಕಾಯಿತು.

ಒಂದು ಸಮಯದಲ್ಲಿ ಈ ತೃತೀಯ ಪಂಥಿ ಜೊಯಿತಾ ಮಂಡಲ್ BPO ನಲ್ಲಿ ನೌಕರಿ ಮಾಡುತ್ತಿದ್ದಳು. ಅಲ್ಲಿ ಜನರ ಟೀಕೆಗೆ ಗುರಿಯಾಗಬೇಕಾಗುತ್ತಿತ್ತು. ಲಿಂಗಭೇದದ ಟೀಕೆಗಳಿಗೆ ಬೇಸರಿಸಿ 2011 ರಲ್ಲಿ ನೌಕರಿ ಬಿಟ್ಟ ನಂತರ ಬಸ್ ಸ್ಟ್ಯಾಂಡಿನಲ್ಲಿ ಜೀವನೋಪಾಯಕ್ಕಾಗಿ ಭಿಕ್ಷೆ ಬೇಡಲು ಶುರು ಮಾಡಿದಳು. ಕೆಲವು ದಿವಸಗಳ ನಂತರ ಜೊಯಿತಾ ತೃತೀಯಪಂಥೀಯರ ಸಲುವಾಗಿ ಹಾಗೂ ತಮ್ಮ ಜನರ ಸಲುವಾಗಿ ಸಮಾಜ ಕಾರ್ಯ ಮಾಡಲು ಶುರು ಮಾಡಿದಳು. ಅದರ ಸಲುವಾಗಿ ಒಂದು ಸಂಸ್ಥೆಯನ್ನು ಪ್ರಾರಂಭಿಸಿ ಅದಕ್ಕೆ ಮಂಶಾ ಬಂಗಲಾ ಎಂದು ಹೆಸರಿಸಿದಳು.

ನಿಧಾನವಾಗಿ ಸಮಾಜ ಸೇವೆಯ ಮಾಧ್ಯಮದಿಂದ ಒಂದೊಂದೇ ಹೆಜ್ಜೆ ಇಡುತ್ತ ದಿನಾಜಪೂರ ನೂತನ ಆಲೊ ಸೊಸೈಟಿ(DNAS) ಹೆಸರಿನ ಸಂಸ್ಥೆಯನ್ನು ಪ್ರಾರಂಭಿಸಿದಳು.

ಈ ಸೊಸೈಟಿ ತೃತೀಯ ಪಂಥಿಯರ ಸಲುವಾಗಿ ಹಾಗೂ ತಮ್ಮದೇ ಆದ ಜನರ ಸಲುವಾಗಿ ಕೆಲಸ ನಿರ್ವಹಿಸುತ್ತಿತ್ತು. ಜೊತೆಗೆ ಒಂದು ವೃದ್ಧಾಶ್ರಮವನ್ನು ತೆರೆದಳು. ಅದರಲ್ಲಿ ಹೆಚ್ಚಾಗಿ ಮೊದಲು ಸೆಕ್ಸ್ ವರ್ಕರ್ ಆಗಿದ್ದವರೂ ಇದ್ದರು. ಇವರೆಲ್ಲರ ಜೀವನ ಸುಧಾರಿಸುವ ದೃಷ್ಟಿಯಿಂದ ಪ್ರಯತ್ನ ಪಟ್ಟಳು.

ಜೊಯಿತಾಳ ಜನ್ಮ ಕೊಲಕತ್ತಾದಲ್ಲಿ ಆಗಿದೆ. ಶಿಕ್ಷಣ ಬರೀ 2 ನೇ ಕ್ಲಾಸು. ಇವಳ ಮೊದಲ ಹೆಸರು ಜಯಂತ ಮಂಡಲ ಇತ್ತು. ಭಿಕ್ಷೆ ಬೇಡುವದರಿಂದ ಹಿಡಿದು ಲೋಕ ನ್ಯಾಯಾಲಯದ (ಲೋಕ್ ಅದಾಲತ್) ಜಜ್ ಆಗುವತನಕ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇವತ್ತು ಜೊಯಿತಾಳ ಜೀವನ ಒಂದು ದೊಡ್ಡ ಪ್ರೇರಣೆ ಯಾಗಿದೆ.

Leave a Reply

Your email address will not be published. Required fields are marked *