ಟೀಂ ಇಂಡಿಯಾದಲ್ಲಿ ಮುಸ್ಲಿಮ್ ಆಟಗಾರರು ಇದ್ದಾರಾ?

ಟೀಂ ಇಂಡಿಯಾದಲ್ಲಿ ಮುಸ್ಲಿಮ್ ಆಟಗಾರರು ಇದ್ದಾರಾ?

ಟೀಂ ಇಂಡಿಯಾದಲ್ಲಿ ಮುಸ್ಲಿಮ್ ಆಟಗಾರರು ಇದ್ದಾರಾ?

ಭಾರತೀಯ ಕ್ರಿಕೆಟ್ ಸಂಘದಲ್ಲಿ ಮುಸ್ಲಿಮ್ ಆಟಗಾರರು ಇದ್ದಾರಾ, ಎಂದು ಒಬ್ಬ ನೀಲಂಬನೆಗೊಳಗಾದ ಐಪಿಎಸ್ ಅಧಿಕಾರಿ ಪ್ರಶ್ನಿಸಿದಾಗ ಟೀಂ ಇಂಡಿಯಾದ ಸ್ಪಿನ್ನರ್ ಹರಭಜನ್ ಸಿಂಗ್ ಖಡಕ್ ಉತ್ತರ ಕೊಟ್ಟು ದಾಂಡಿ ಉರುಳಿಸಿದ್ದಾರೆ.

https://twitter.com/harbhajan_singh/status/922332390986358784

ನ್ಯೂಜಿಲ್ಯಾಂಡ್ ವಿರುದ್ಧ T-20 ಮತ್ತು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗಾಗಿ ನಿನ್ನೆ ಆಟಗಾರರನ್ನು ಆಯ್ಕೆ ಮಾಡಲಾಯಿತು. ಇದಕ್ಕೂ ಮುಂಚೆ ನೀಲಂಬನೆಗೊಳಗಾದ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರು ಟ್ವಿಟ್ ಮಾಡಿ ಈಗಿನ ಭಾರತೀಯ ಕ್ರಿಕೆಟ್ ಸಂಘದಲ್ಲಿ ಒಬ್ಬರಾದರೂ ಮುಸ್ಲಿಮ್ ಆಟಗಾರರು ಇದ್ದಾರಾ? ಎಂದು ಪ್ರಶ್ನೆ ಕೇಳಿದ್ದಾರೆ. ಸ್ವಾತಂತ್ರ್ಯ ಸಿಕ್ಕಾಗಿನಿಂದ ಈಗಿನ ವರೆಗೆ ಈ ತರ ಎಷ್ಟು ಬಾರಿಯಾಗಿದೆ? ಮುಸ್ಲಿಮರು ಕ್ರಿಕೆಟ್ ಆಡುವುದನ್ನು ಬಿಟ್ಟಿದ್ದಾರಾ? ಅಥವಾ ಸಂಘ ಆಯ್ಕೆ ಮಾಡುವವರು ಬೇರೆ ಆಟದ ನಿಯಮಗಳು ಪಾಲಿಸುತ್ತಿದ್ದಾರೆಯೇ? ಹೀಗೆ ಅನೇಕ ಪ್ರಶ್ನೆಗಳನ್ನು ಭಟ್ ಅವರು ಟ್ವಿಟ್ ಮಾಡಿ ಮತ್ತು ಫೇಸ್ಬುಕ್ ಪೋಸ್ಟ್ ಮುಖಾಂತರ ಕೇಳಿದ್ದಾರೆ.

ಅವರಿಗೆ ಸ್ಪಿನ್ನರ್ ಬೌಲರ್ ಹರಭಜನ್ ಸಿಂಗ್ ಟ್ವಿಟ್ಟರ್ ಮುಖಾಂತರವೇ ತಕ್ಕ ಉತ್ತರ ಕೊಟ್ಟಿದ್ದಾರೆ. “ಹಿಂದೂ – ಮುಸ್ಲಿಮ್- ಸಿಖ್ – ಇಸಾಯಿ ಆಪಸ್ ಮೇ ಹೈ ” ಎಂದು ಟ್ವಿಟ್ ಮಾಡಿದ್ದಾರೆ. ಟೀಂ ಇಂಡಿಯಾದಲ್ಲಿ ಆಟ ಆಡುವ ಪ್ರತಿಯೊಬ್ಬ ಆಟಗಾರ ಹಿಂದೂಸ್ತಾನಿಯಾಗಿದ್ದಾನೆ. ಅವನ ಜಾತಿ ಹಾಗೂ ವರ್ಣದ ಬಗ್ಗೆ ಮಾತನಾಡಬಾರದು. ಜಯ್ ಭಾರತ! ಹೀಗೆ ಟ್ವಿಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *