ಯಾರು ಹೇಳ್ತಾರೆ ಸುತ್ತಾಡೋಕೆ ಹಣ ಬೇಕಾಗುತ್ತೆ ಅಂತ? ಈ ವ್ಯಕ್ತಿ 1 ₹ ಖರ್ಚು ಮಾಡದೆ 8 ತಿಂಗಳುಗಳಲ್ಲಿ 24 ರಾಜ್ಯಗಳನ್ನು ಸುತ್ತಿ ಬಂದಿದ್ದಾರೆ, ಹೇಗೆ ಗೊತ್ತಾ?

ಯಾರು ಹೇಳ್ತಾರೆ ಸುತ್ತಾಡೋಕೆ ಹಣ ಬೇಕಾಗುತ್ತೆ ಅಂತ? ಈ ವ್ಯಕ್ತಿ 1 ₹ ಖರ್ಚು ಮಾಡದೆ 8 ತಿಂಗಳುಗಳಲ್ಲಿ 24 ರಾಜ್ಯಗಳನ್ನು ಸುತ್ತಿ ಬಂದಿದ್ದಾರೆ, ಹೇಗೆ ಗೊತ್ತಾ?

ನೀವು ನಿಜವಾಗಿಯೂ ಪ್ರವಾಸ ಮಾಡಬೇಕೆಂದು ಬಯಸುತ್ತೀರಿ, ಜಗತ್ತಿನ, ದೇಶದ ಅಥವಾ ರಾಜ್ಯದ ಮೂಲೆ ಮೂಲೆ ತಿರುಗಾಡಬೇಕು ಎಂದೆನ್ನುತ್ತೀರಿ, ಆದರೆ ಪ್ರತಿ ಸಲ ಹಣದ ಸಮಸ್ಯೆಯಿಂದ ಅಥವಾ ಹಣದ ನೆಪದಿಂದ ಪ್ರವಾಸವನ್ನು ಕೈ ಬಿಡುತ್ತಿದ್ದರೆ, ಇಲ್ಲ ಆಫೀಸಿನ ಕಾರಣದಿಂದ ಕೆಲಸಗಳು ಜಾಸ್ತಿ ಇವೆ, ಮತ್ತೆ ನೋಡೋಣ ಎಂದು ಹಣವಿಲ್ಲದ್ದಕ್ಕೆ ನೂರು ಕಾರಣಗಳನ್ನು ಹೇಳುವದನ್ನು ಬಿಟ್ಟು ಬಿಡಿ ಯಾಕೆಂದರೆ ಯಾರಿಗೆ ನಿಜವಾಗಿ ಪ್ರವಾಸದ , ತಿರುಗಾಡುವ, ಹವ್ಯಾಸ ಇರುತ್ತದೆ ಅವರು 1 ₹ ಯ ಖರ್ಚು ಇಲ್ಲದೆ ಜಗತ್ತೇ ತಿರುಗಾಡಬಹುದು. ಇದರಲ್ಲಿ ಟ್ರಾವೆಲ್ ಮತ್ತು ಊಟ ತಿಂಡಿ ಸಹಿತ ಫ್ರೀಯಾಗಿಯೇ ಏನಂತೀರಿ ಫ್ರೆಂಡ್ಸ್?

ಓದಿರಿ ಈ ಹವ್ಯಾಸಿ ಪ್ರವಾಸಿಗನ ಕಥೆ

ಹೆಸರು ಅಂಶ ಮಿಶ್ರಾ. ವಯಸ್ಸು 28. ಈತನ ವಿಶೇಷತೆ ನೋಡಿ. 1 ₹ ಇಲ್ಲದೆ 8 ತಿಂಗಳುಗಳಲ್ಲಿ ದೇಶದ 24 ರಾಜ್ಯ ಹಾಗೂ 4 ಕೆಂದ್ರಶಾಸಿತ ಪ್ರದೇಶಗಳಲ್ಲಿ ತಿರುಗಾಡಿ ಬಂದಿದ್ದಾನೆ. ಶಿಕ್ಷಣ ಅಲಹಾಬಾದ್ ಟೆಕ್ನಿಕಲ್ ಕಾಲೇಜ್ ನಲ್ಲಿ ಎಂ.ಬಿ.ಎ. ಮಾಡಿದ್ದಾರೆ.

ಇವರು 3 ಫೆಬ್ರುವರಿ 2017 ರಿಂದ ಒಂದು ರೂಪಾಯಿಯೂ ಜೊತೆಗೆ ತೆಗೆದುಕೊಳ್ಳದೆ ಪ್ರವಾಸ ಪ್ರಾರಂಭಿಸಿದರು. ಪ್ರವಾಸ ನ್ಯಾಷನಲ್ ಹಾಯ್ ವೆಯಿಂದ ಪ್ರಾರಂಭಿಸಿ ಅಲ್ಲಿಂದ ಬರೀ ಲಿಫ್ಟ್ ತೆಗೆದುಕೊಳ್ಳಲು ಪ್ರಾರಂಭಿಸಿದರಂತೆ. ಅಂಶ ಪ್ರಕಾರ 8 ತಿಂಗಳಿನ ನನ್ನ ಪೂರ್ಣ ಪ್ರವಾಸ ಜನರ ಆಸರೆಯಿಂದಲೆ ಆಯಿತು ಎಂದು ಹೇಳುತ್ತಾರೆ. ಜನರೇ ಅವರಿಗೆ ಊಟ, ತಿಂಡಿ , ಇರಲು ವ್ಯವಸ್ಥೆ ಹಾಗೂ ಮುಂದಿನ ಪ್ರವಾಸಕ್ಕಾಗಿ ಸಹಾಯ ಮಾಡುತ್ತಿದ್ದರಂತೆ. ಅವರ ಪೂರ್ಣ ಪ್ರವಾಸದ ಸಂದರ್ಭದಲ್ಲಿ 1800 ಟ್ರಕ್ ಡ್ರಾಯವರ್ ಗಳು ಅವರನ್ನು ಲಿಫ್ಟ್ ಕೊಟ್ಟಿದ್ದಾರಂತೆ. ಈ ಮಧ್ಯದಲ್ಲಿ ಎಷ್ಟೋ ಸಲ ಟ್ರಕ್ ನಲ್ಲಿಯೇ ಮಲಗಿ ರಾತ್ರಿ ಕಳೆದ್ದಿದ್ದಾರಂತೆ ಹಾಗೂ ಅವರ ಜೊತೆಯೇ ಅವರು ತಯಾರಿಸಿದ ಊಟವನ್ನೇ ಮಾಡಿದ್ದಾರಂತೆ.

ಪ್ರವಾಸ ಬರೀ ಆರಾಮವಾಗಿ ಆಗಿದೆಯಂದು ತಿಳಿಯಬೇಡಿ. ಕೆಲವೊಂದು ಅನುಭವಗಳು ತುಂಬಾ ಕಷ್ಟದ್ದು ಬಂದಿವೆ ಎಂದು ಹೇಳುತ್ತಾರೆ. ಅಂಶ ಒಂದು ಸಲ ಗುಜರಾತಿನಲ್ಲಿ ಲಿಫ್ಟಗಾಗಿ 9 ಗಂಟೆಗಳ ತನಕ ಕಾಯುವ ಸಂದರ್ಭ ಬಂದಿತ್ತಂತೆ. ಯಾಕೆಂದರೆ ಲಿಫ್ಟ್ ಬದಲಾಗಿ ಬೇರೆ ಯಾವ ಪರ್ಯಾಯವೂ ಅಂಶ ಹತ್ತಿರ ಇದ್ದಿದ್ದಿಲ್ಲ. ಇನ್ನೊಂದು ಅನುಭವದ ಪ್ರಕಾರ 26 ಗಂಟೆಗಳ ವರೆಗೆ ಉಪವಾಸವೆ ಇರಬೇಕಾದ ಸಂದರ್ಭವು ಬಂದೊದಗಿತ್ತು. ಎಂದು ಕಹಿ ಅನುಭವವನ್ನು ಹಂಚಿ ಕೊಂಡಿದ್ದಾರೆ. ಎಲ್ಲಕ್ಕೂ ಹೆಚ್ಚು ಸಂಕಷ್ಟಕ್ಕಿಡಾದ ಅನುಭವ ಅಂದರೆ ಕೇರಳ. ಇಲ್ಲಿ ಸಹಾಯಕ್ಕಾಗಿ ಯಾರು ಬರುತ್ತಿರಲಿಲ್ಲವಂತೆ.

ಪ್ರವಾಸದ ತಿರುಗಾಟದಲ್ಲಿ ಅಂಶ ಅವರು ಮಾವೋವಾದಿಗಳ ಪ್ರದೇಶದಲ್ಲಿಯೂ ಸಂಚರಿಸಿ ಬಂದಿದ್ದಾರೆ. ಛತ್ತಿಸಗಡ್ ರಾಜ್ಯದ ಬಸ್ತರ್ ಜಿಲ್ಲೆಯಲ್ಲಿ ಮಾವೋವಾದಿಗಳ ಸಂಚಲನ ತುಂಬಾ ಜೋರಾಗಿದೆ. ಹಾಗೆ ಮಾವೋವಾದಿಗಳಿಗೆ ಇದು ಸ್ವರ್ಗವಾಗಿದೆ. ಅಲ್ಲಿಯ ತಾಣಗಳಿಗೂ ಭೆಟ್ಟಿಕೊಟ್ಟು ಬಂದಿದ್ದಾರೆ. ಅಂಶರ ಅನಿಸಿಕೆಯ ಪ್ರಕಾರ ಬಸ್ತರ ಜಿಲ್ಲೆ ಇದು ಒಂದು ಸುಂದರ ತಾಣವಾಗಿದೆ. ಪ್ರವಾಸಿಗರಿಗೆ ಮುದನೀಡುವ ಮನಮೋಹಕ ಪರಿಸರವಾಗಿದೆ. ಇಲ್ಲಿಯ ಮಾವೋವಾದಿಗಳ ಸಮಸ್ಯೆ ಬಗೆ ಹರಿದರೆ ಭವಿಷ್ಯದಲ್ಲಿ ಬಸ್ಟರ್ ಜಿಲ್ಲೆ ಸುಂದರ ಪ್ರವಾಸಿ ತಾಣವಾಗುವದರಲ್ಲಿ ಸಂಶಯವಿಲ್ಲ ವೆಂದು ಹೇಳುತ್ತಾರೆ.

ಈ ತರಹದ ಪ್ರವಾಸ ಕೈಗೊಳ್ಳಲು ನನ್ನ ಕುಟುಂಬದ ಒಪ್ಪಿಗೆ ಇರಲಿಲ್ಲ. ಮತ್ತು ಬಸ್ತರ ಜಿಲ್ಲೆಗಂತೂ ಹೆಜ್ಜೆಯೂ ಇಡಬೇಡ. ಎಂದು ಹೇಳಿದ್ದರು. ಆದರೆ ನನಗೆ ತುಂಬಾ ಸಂತೋಷವಾಗಿದೆ. ನನಗೆ ಎಲ್ಲಿಯೂ ಯಾವ ರೀತಿಯ ಹಿಂಸೆಯಾಗಿಲ್ಲ ಎಂದು ಅಂಶ ಅವರು ತನ್ನ ಅನುಭವವನ್ನು ಇತರರೊಂದಿಗೆ ಹಂಚಿಕೊಂಡಿದ್ದಾರೆ.

ಹಣವಿಲ್ಲದೆ 8 ತಿಂಗಳುಗಳ ವರೆಗೆ ಇಡೀ ದೇಶವನ್ನೇ ಸುತ್ತಾಡಿ ಬಂದ ಖುಷಿ ಗೆಲವು ಅವರ ಮುಖದಲ್ಲಿ ಎದ್ದು ಕಾಣುತ್ತಿದೆ. ತಮ್ಮ ಪ್ರವಾಸದ ಕೊನೆಯನ್ನು ಅವರು ಛತ್ತಿಸಗಡ್ ದ ಜಗದಲಪೂರದಲ್ಲಿ ಮುಕ್ತಾಯ ಮಾಡಿದ್ದಾರೆ.

Leave a Reply

Your email address will not be published. Required fields are marked *