ಧಾರ್ಮಿಕ ತಥ್ಯ: ನಿ:ಸಂತಾನ ಮಹಿಳೆ ಈ ದೇಗುಲದಲ್ಲಿ ಮಲಗಿದರೆ ಮಕ್ಕಳಾಗುತ್ತವಂತೆ.

ಧಾರ್ಮಿಕ ತಥ್ಯ: ನಿ:ಸಂತಾನ ಮಹಿಳೆ ಈ ದೇಗುಲದಲ್ಲಿ ಮಲಗಿದರೆ ಮಕ್ಕಳಾಗುತ್ತವಂತೆ.

 

ಯಾವುದೇ ಸ್ತ್ರೀಗೆ ಮಾತೃತ್ವ ಪ್ರಾಪ್ತವಾದ ಮೇಲೆಯೇ ಅವಳ ಜೀವನ ಪರಿಪೂರ್ಣವಾಗುವದು. ಅನೇಕ ಮಹಿಳೆಯರಿಗೆ ಯಾವ ಯಾವದೋ ಕಾರಣದಿಂದ ಈ ಮಾತೃತ್ವದ ಭಾಗ್ಯ ಲಭಿಸುವದಿಲ್ಲವೋ ಅಂತಹವರಿಗೆ ಸಮಾಜದ ಅನೇಕ ಟೀಕೆಗಳಿಗೆ ಗುರಿಯಾಗಬೇಕಾಗುತ್ತದೆ.ಸಮಾಜ ಅವರಿಗೆ ಒಳ್ಳೆಯ ಕೆಲಸಗಳಿಗೆ ಕರೆಯುವದಿಲ್ಲ ಅಷ್ಟೇ ಅಲ್ಲ ಅವರ ಕೈಯಿಂದ ಯಾವುದೇ ಒಳ್ಳೆಯ ಕಾರ್ಯ ಸಹಿತ ಮಾಡಿಸುವದಿಲ್ಲ.

ಹಿಮಾಚಲ ಪ್ರದೇಶದಲ್ಲಿ ಒಂದು ಮಂದಿರ ನಿ:ಸಂತಾನ ಮಹಿಳೆಯರಿಗೆ ಮಕ್ಕಳಾಗುತ್ತವೆಂಬ ಕಾರಣದಿಂದ ಪ್ರಸಿದ್ಧವಿದೆ. ಈ ಮಂದಿರದಲ್ಲಿ ಮಕ್ಕಳಾಗದ ಮಹಿಳೆಯರು ನವರಾತ್ರಿಯ ಸಂದರ್ಭದಲ್ಲಿ ಮಲಗಿದರೆ ಅವರಿಗೆ ಸಂತಾನ ಪ್ರಾಪ್ತವಾಗುತ್ತದೆ ಎಂಬ ದಟ್ಟ ನಂಬಿಕೆಗೆ ಹೆಸರುವಾಸಿಯಾಗಿದೆ. ಈ ದೇಗುಲಕ್ಕೆ ಸಂತಾನ ದಾದ್ರಿ ಎಂದೂ ಕರೆಯುತ್ತಾರೆ.

ಈ ಮಂದಿರ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಲಡಬಡೋ ತಾಲೂಕಿನ ಸಿಮಸ್ ಊರಿನಲ್ಲಿದೆ. ಇಲ್ಲಿ ಸಿಮಸಾ ದೇವಿಯ ಮಂದಿರದಲ್ಲಿ ನವರಾತ್ರಿಯ ಸಂದರ್ಭದಲ್ಲಿ ನೂರಾರು ನಿ:ಸಂತಾನ ಮಹಿಳೆಯರು ಮಲಗಲು ಬರುತ್ತಾರೆ. ವಿಜ್ಞಾನ ಮಾತ್ರ ಇದನ್ನು ಎಂದಿಗೂ ನಂಬುವದಿಲ್ಲ. ಆದರೆ ಜನರ ನಂಬಿಕೆ ಮಾತ್ರ ಅಪಾರವಿದೆ. ಅಷ್ಟೇ ಅಲ್ಲ ಇಲ್ಲಿ ಮಲಗಿದಾಗ ಮಹಿಳೆಗೆ ಮುಂದೆ ಜನ್ಮಿಸುವ ಮಗುವಿನ ಲಿಂಗವನ್ನು ಸಹಿತ ಕನಸಿನಲ್ಲಿ ತಿಳಿದುಬರುತ್ತದೆ. ಹೇಗೆಂದರೆ ಮಹಿಳೆಯ ಕನಸಿನಲ್ಲಿ ಪೇರಲ ಹಣ್ಣು ಕಂಡುಬಂದರೆ ಹುಡುಗ ಹಾಗೂ ಬೆಂಡೆಕಾಯಿ ಕಂಡುಬಂದರೆ ಹುಡುಗಿ ಆಗುತ್ತದೆಂಬ ನಂಬಿಕೆಗಳು ಹಿಂದಿನಿಂದಲೂ ನಿಜವಾಗಿವೆ ಅಂತೆ

Leave a Reply

Your email address will not be published. Required fields are marked *