ಬೈಕ್ ಖರೀದಿಸಲು 57000 ₹ ಗಳ ಬರೀ ನಾಣ್ಯಗಳ ಚಿಲ್ಲರೆ ಹಣ ನೋಡಿ ಕಂಗೆಟ್ಟ ಡೀಲರ್ ನ ನಕಾರ! ಮುಂದೆನಾಯ್ತು ? ನೋಡಿ

ಬೈಕ್ ಖರೀದಿಸಲು 57000 ₹ ಗಳ ಬರೀ ನಾಣ್ಯಗಳ ಚಿಲ್ಲರೆ ಹಣ ನೋಡಿ ಕಂಗೆಟ್ಟ ಡೀಲರ್ ನ ನಕಾರ! ಮುಂದೆನಾಯ್ತು ? ನೋಡಿ

 

 

ಘಟನೆ ಮಧ್ಯಪ್ರದೇಶದಲ್ಲಿಯದು. ಎರಡು ಚಿಕ್ಕ ಮಕ್ಕಳು ಬೈಕ್ ಖರೀದಿಸಲು 57000 ರೂಪಾಯಿಗಳ ಬರೀ ಚಿಲ್ಲರೆ ಹಣವನ್ನು ತೆಗೆದುಕೊಂಡು ಶೋ ರೂಮ್ ಗೆ ತನ್ನ ಸೋದರ ಮಾವನನ್ನು ಕರೆದುಕೊಂಡು ಹೋಗಿದ್ದಾರೆ.

ಬೈಕ್ ಶೋ ರೂಮ್ ನ ಮಾಲೀಕ ಇವರು ತಂದಿರುವ 57000 ₹ ಗಳ ಬರೀ ನಾಣ್ಯಗಳನ್ನೆ ನೋಡಿ ತಬ್ಬಿಬ್ಬಾಗಿ ಮೊದಲು ಗಾಡಿಯ ವ್ಯವಹಾರವನ್ನು ಸ್ಪಷ್ಟವಾಗಿ ನಿರಾಕರಿಸಿದನಂತೆ. ನಂತರ ಮಕ್ಕಳು ಮಾಡಿದ ವಿನಂತಿಯ ಮೇರೆಗೆ ಹಾಗೂ ಅವರು ಉಳಿತಾಯ ಮಾಡಿದ ಕಾರಣವನ್ನು ಕೇಳಿದನಂತರ ಮನಸ್ಸನ್ನು ಬದಲಾಯಿಸಿ ತನ್ನ ಇಡೀ ಸ್ಟಾಫನ್ನೆ ನಾಣ್ಯಗಳ ಎಣಿಕೆಗೆ ಕೂಡಿಸಿದನಂತೆ. ಹೀಗೆ ಒಟ್ಟು ನಾಣ್ಯಗಳ ಏಣಿಕೆಗೆ ಮೂರು ಗಂಟೆಗಳ ಸಮಯ ತಾಗಿತು.

ಇದರ ಹಿಂದಿನ ಪೂರ್ತಿ ಕಥೆ ಏನೆಂದರೆ, ಮಧ್ಯಪ್ರದೇಶದ ರಾಯಿಸಿನ ನಗರದಲ್ಲಿ ಹಸೀಬ್ ಹಿಂದುಸ್ತಾನಿ ಹೆಸರಿನ ವ್ಯಕ್ತಿ ಒಂದು ದಿನಸಿ ಅಂಗಡಿಯನ್ನು ನಡೆಸುತ್ತಿದ್ದಾನೆ. ಈತನ ಮಕ್ಕಳು ಹಿಂದಿನ ಮೂರು ವರ್ಷಗಳಿಂದ ಮನೆಯಲ್ಲಿಯ ಇತರ ಸದಸ್ಯರ ಸಹಾಯದಿಂದ ತಮ್ಮ ತಂದೆಗೆ ಬೈಕ್ ಗಿಫ್ಟ್ ಕೊಡುವ ಸಲುವಾಗಿ ನಾಣ್ಯಗಳ ಉಳಿತಾಯ ಮಾಡುತ್ತಿದ್ದಾರೆ. ಈ ಉಳಿತಾಯದ ಚಿಲ್ಲರೆ ಹಣವನ್ನೇ ತೆಗೆದುಕೊಂಡು ಶೋ ರೂಮ್ ಗೆ ಹೋದಾಗ ಈ ಮೇಲಿನ ಪ್ರಸಂಗ ನಡೆದಿದೆ.

ಈ ಇಬ್ಬರು ಮಕ್ಕಳು ತಮ್ಮ ತಂದೆಗೆ ಬೈಕ್ ಕೊಡಿಸೊ ಉದ್ದೇಶದಿಂದ ಹಾಗೂ ಗಿಫ್ಟನ್ನೂ ಸರಪ್ರಾಯಿಜ್ ಸ್ವರೂಪದಲ್ಲಿ ಕೊಡುವ ಕಾರಣದಿಂದ ತನ್ನ ಸೋದರ ಮಾವನಿಗೆ ಶೋ ರೂಮ್ ಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಲ್ಲರೆ ಹಣದ ಜಂಜಾಟವನ್ನು ನೋಡಿ ಶೋರೂಮ್ ಮಾಲಿಕ ಗಾಡಿ ಖರೀದಿಗೆ ಸ್ಪಷ್ಟವಾಗಿ ಬೇಡವೆಂದನಂತೆ.

ಆದರೆ ಮಕ್ಕಳು ತಮ್ಮ ಉಳಿತಾಯದ ಹಣದಿಂದ ತಂದೆಗೆ ಸರ್ ಪ್ರಾಯಿಜ್ ಗಿಫ್ಟ್ ಕೊಡುತ್ತಿರುವ ವಿಷಯ ಹೇಳಿದ ನಂತರ ಆತನೂ ಸಹ ಅವರ ಬೇಡಿಕೆಗೆ ಮನಸೋತು ಸಹಕರಿಸಿ ತನ್ನ ಇಡೀ ಸ್ಟಾಫನ್ನೆಲ್ಲ ಚಿಲ್ಲರೆ ಏಣಿಸುವ ಕೆಲಸಕ್ಕೆ ಹಚ್ಚಿ ಚಿಕ್ಕ ಮಕ್ಕಳ ಈ ದೊಡ್ಡ ಸಾಧನೆಗೆ ಹೆಮ್ಮೆ ಪಟ್ಟಿದ್ದಾನೆ.

ಒಟ್ಟು 10 ರ 322 ನಾಣ್ಯಗಳು, 5 ರ 1458 ನಾಣ್ಯಗಳು, 2 ರ 15645 ನಾಣ್ಯಗಳು ಹಾಗೂ 1 ರ 14600 ನಾಣ್ಯಗಳು ಇದ್ದಿದ್ದವೆಂದು ಡೀಲರ್ ಹೇಳಿದ್ದಾನೆ. ಅಷ್ಟೇ ಅಲ್ಲ ಈ ಎಲ್ಲ ಚಿಲ್ಲರೆ ಹಣವನ್ನು ಬ್ಯಾಂಕಿಗೆ ಜಮೆ ಮಾಡುತ್ತೇನೆ ಏಕೆಂದರೆ, ಈ ಹಣದಿಂದ ಸ್ವಲ್ಪವಾದರೂ ಚಿಲ್ಲರೆ ಹಣದ ಸಮಸ್ಯೆ ಬಗೆ ಹರಿಯಬಹುದು ಎಂಬುದು ಡೀಲರ್ ನ ವಿಚಾರ.


ಮಕ್ಕಳು ತಮ್ಮ ತಂದೆಗಾಗಿ ಮಾಡಿದ ಈ ಉಪಕ್ರಮವನ್ನು ಕೇಳಿ ನಗರವಾಸಿಗಳು ಮಕ್ಕಳಿಗೆ ಹಾಡಿ ಹೊಗಳುತ್ತಿದ್ದಾರೆ. ಮೊದಮೊದಲು ಬೈಕ್ ಖರೀದಿಗೆ ನಿರಾಕರಿಸಿದ ಡೀಲರ್ , ಮಕ್ಕಳು ಮಾಡಿದ ಈ ಉಪಕ್ರಮಕ್ಕೆ, ಕಾರ್ಯಶೈಲಿಗೆ, ಉಳಿತಾಯಕ್ಕೆ, ತಂದೆಗೆ ನೀಡುವ ಗಿಫ್ಟ್ ಗೆ ತಾನೂ ಸಹಕರಿಸಿ ಅವರ ಮನಸ್ಸಿಗೆ ಹಿಡಿಸುವ ಗಾಡಿಯನ್ನು ಕೊಟ್ಟು ಕಳಿಸಿದನಂತೆ.

Leave a Reply

Your email address will not be published. Required fields are marked *