ಇನ್ ಸ್ಟಾಗ್ರಾಮ್ ನಲ್ಲಿ ಕಾಲುಬೆರಳುಗಳಿಂದ ಸಾವಿರಾರು ಪೌಂಡ ಹಣಗಳಿಸುವ ಮಹಿಳೆ ಗೊತ್ತಾ?

ಇನ್ ಸ್ಟಾಗ್ರಾಮ್ ನಲ್ಲಿ ಕಾಲುಬೆರಳುಗಳಿಂದ ಸಾವಿರಾರು ಪೌಂಡ ಹಣಗಳಿಸುವ ಮಹಿಳೆ ಗೊತ್ತಾ?

 

ಈ ಯುಗದಲ್ಲಿ ಯಾರು ಹೇಗೆ ಹಣ ಗಳಿಸುವರು ಹಾಗೂ ಯಾರಿಗೆ ಏನು ನೋಡಲು ಅಭಿರುಚಿ ಇರುವದು ಹೇಳಲೂ ಸಾಧ್ಯವಿಲ್ಲ.

ಕೆನಡಾದ ಮಾಡೆಲ್ ಜೆಸಿಕಾ ಗೋಲ್ಡ್(32) ಇವಳು ತನ್ನ ಕಾಲುಬೆರಳಿನ ಚಿತ್ರವಿಚಿತ್ರ ಛಾಯಾಚಿತ್ರಗಳನ್ನು ಇನ್ ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿ ವರ್ಷಕ್ಕೆ 55 ಸಾವಿರ ಪೌಂಡಗಳ ಆದಾಯ ಪಡೆಯುತ್ತಿದ್ದಾಳೆ. ಸದ್ಯಕ್ಕೆ ಇನ್ ಸ್ಟಾ ಗ್ರಾಮ್ ನಲ್ಲಿ ಇವಳಿಗೆ 10000 ಫಾಲೋಅರ್ಸ್ ಗಳಿದ್ದಾರೆ. ಇವಳು ಮಾಡುವದಿಷ್ಟೆ ತನ್ನ ಕಾಲ ಬೆರಳಿನ ವಿವಿಧ ಪ್ರಕಾರದ ಛಾಯಾಚಿತ್ರಗಳನ್ನು ತೆಗೆದು ಇನ್ ಸ್ಟಾಗ್ರಾಮ್ನಲ್ಲಿ ಅಪ್ ಲೋಡ್ ಮಾಡುವದು. ಇದರ ಮುಖಾಂತರ ಸಾವಿರಾರು ಪೌಂಡ ಹಣಗಳಿಸುವ ಹೊಸ ಮಾರ್ಗವನ್ನು ಶೋಧಿಸಿದ್ದಾರೆ.

 

ಒಮ್ಮೆ ಇವಳ ಓದಿನಲ್ಲಿ ಆಕರ್ಷಕ ಕಾಲುಗಳ ಸ್ತ್ರೀ ಮಾಡೆಲ್ ಬೇಕಾಗಿದ್ದಾರೆ ಎಂದು ಜಾಹಿರಾತು ಬಂದಿತ್ತಂತೆ. ಅದರಂತೆ ಇವಳು ಮಿಸ್ ಸ್ಕಾರ್ಲೆಟ್ ವಿಕ್ಸನ್ ಈ ಹೆಸರಿನಿಂದ ಜೆಸಿಕಾ ತನ್ನ ಕಾಲುಗಳ ಫೋಟೋ ಸಂಚನ್ನು ಮೊದಲಸಲ ಅಪ್ಲೋಡ್ ಮಾಡಿದ ನಂತರ ಪುರುಷರಿಂದ ಹೊಗಳಿಕೆಯ ನೂರಾರು ಮೆಸೇಜ್ ಗಳು ಬಂದವಂತೆ, ಈ ಪುರುಷರು ‘ಫುಟ್ ಬಾಯಿಜ್’ ಈ ಹೆಸರಿನಿಂದ ಗುರುತಿಸಿಕೊಳ್ಳುತ್ತಾರೆ. ನಾನು ಕಾಲು ಮತ್ತು ಕಾಲುಬೆರಳುಗಳಿಂದ ಮತ್ತು ಇವುಗಳ ಪ್ರದರ್ಶನದಿಂದ ಹೀಗೆ ಹಣಗಳಿಸಬಹುದು ಎಂದು ಕೊಂಡಿರಲಿಲ್ಲ ಅಂತಾಳೆ ಜೆಸಿಕಾ. ಈಗ ಇವಳ ಉದರ ನಿರ್ವಾಹದ ಮೂಲ ಸಾಧನವೆ ಇದಾಗಿದೆ ಅಂತ, ಆಂಟೋರಿಯಾದಲ್ಲಿ ವಾಸವಿರುವ ಜೆಸಿಕಾ ಹೇಳುತ್ತಾಳೆ. ನನ್ನ ಕಾಲುಗಳು ಇಷ್ಟೊಂದು ಸುಂದರವಾಗಿವೆ, ಆಕರ್ಷಕವಾಗಿವೆ,ಎಂದು ನಾನು ಕನಸು ಮನಸಿನಲ್ಲಿಯೂ ವಿಚಾರ ಮಾಡಿಲ್ಲ ಹಾಗೂ ಇವುಗಳಿಂದ ನಾನು ಇಷ್ಟೊಂದು ಹಣ ಗಳಿಸುತ್ತೇನೆಂದು ಕನಸಿನಲ್ಲಿಯೂ ಅಂದು ಕೊಂಡಿರಲಿಲ್ಲವೆಂದು ಹೇಳುತ್ತಾಳೆ.

Leave a Reply

Your email address will not be published. Required fields are marked *