ಬೆಚ್ಚಗಿನ ನೀರು ಕುಡಿಯುವದರಿಂದ ಆಗುವ ಲಾಭಗಳು ಕೇಳಿದರೆ ಆಶ್ಚರ್ಯ ಪಡ್ತೀರಾ!

ಬೆಚ್ಚಗಿನ ನೀರು ಕುಡಿಯುವದರಿಂದ ಆಗುವ ಲಾಭಗಳು ಕೇಳಿದರೆ ಆಶ್ಚರ್ಯ ಪಡ್ತೀರಾ!

 

ಮುಂಜಾನೆ ಎದ್ದ ಕೂಡಲೇ ಬೆಚ್ಚಗಿನ ನೀರು ಕುಡಿಯುವದರಿಂದ ಶರೀರಕ್ಕೆ ಅನೇಕ ಪ್ರಕಾರದ ಲಾಭಗಳು ಆಗುತ್ತವೆ. ಈ ಕೃತಿಯಿಂದ ದೇಹದ ತೂಕ ಕಡಿಮೆಯಾಗುವದರ ಜೊತೆಗೆ ಶೀತದಿಂದಲೂ ಮುಕ್ತಿ ಸಿಗುವದು. ಈ ನೀರು ಕುಡಿಯಲು ಅಷ್ಟೊಂದು ರುಚಿ ಎನಿಸುವದಿಲ್ಲ ಆದರೆ ಶರೀರಕ್ಕಾಗುವ ಲಾಭಗಳನ್ನು ಗಮನಿಸಿದರೆ ನೀವು ಸಹಿತ ಬೆಚ್ಚಗಿನ ನೀರನ್ನು ಕುಡಿಯಲು ಪ್ರಾರಂಭಿಸುವಿರಿ. ಸಾಮಾನ್ಯವಾಗಿ ದಿವಸಕ್ಕೆ 8 ರಿಂದ 10 ಗ್ಲಾಸುಗಳವರೆಗೆ ಅಥವಾ 3 ರಿಂದ 4 ಲೀಟರ್ ನೀರು ದೇಹಕ್ಕೆ ಅವಶ್ಯಕತೆ ಇದೆ. ಇನ್ನೂ ಬೆಚ್ಚನೆಯ ನೀರಿನ ಸೇವನೆಯಿಂದ ಆಗುವ 10 ಲಾಭಗಳು ಈ ಕೆಳಗಿನಂತಿವೆ.

1) ದೇಹದ ತೂಕ ಕಡಿಮೆ ಮಾಡಲು:-


ಶರೀರದ ತೂಕದಲ್ಲಿ ನಿಯಮಿತವಾಗಿ ಏರಿಕೆ ಕಂಡು ಬರುತ್ತಿದ್ದರೆ ಹಾಗೂ ತೂಕ ಇಳಿಸುವ ಸಲುವಾಗಿ ನೀವು ಮಾಡುತ್ತಿರುವ ಅನೇಕ ಪ್ರಯತ್ನಗಳಿಗೆ ಯಶಸ್ಸು ಲಭಿಸುತ್ತಿಲ್ಲವಾದರೆ ಬೆಚ್ಚಗಿನ ನೀರಿನಲ್ಲಿ ಜೇನುತುಪ್ಪ ಮತ್ತು ನಿಂಬೆಯ ರಸ ಮಿಶ್ರಣಮಾಡಿ ನಿಯಮಿತವಾಗಿ ಮೂರು ತಿಂಗಳವರೆಗೆ ನೀವು ಕುಡಿದದ್ದೇ ಆದಲ್ಲಿ ಯೋಗ್ಯ ಬದಲಾವಣೆ ಕಂಡು ಬರುವದು ನಿಶ್ಚಿತ. ಒಂದು ವೇಳೆ ಇದಿಷ್ಟು ನಿಮ್ಮ ಕೈಯಿಂದ ಆಗದಿದ್ದರೆ ಊಟದ ನಂತರ ಒಂದು ಕಪ್ ಬಿಸಿ ನೀರನ್ನು ಕುಡಿಯಲು ಪ್ರಾರಂಭಿಸಿ.

2) ಶೀತ ಮತ್ತು ಕೆಮ್ಮಿನಿಂದ ಮುಕ್ತಿ:-


ಯಾವುದೇ ಋತುವಿನಲ್ಲಿ ನಿಮಗೆ ಎದೆಯಲ್ಲಿ ನೋವು, ಕೆಮ್ಮು ಹಾಗೂ ಸತತವಾದ ಶೀತವಿದ್ದರೆ ಅದರ ಮೇಲೆ ಈ ನೀರಿನ ಸೇವನೆ ರಾಮಬಾಣ ಉಪಾಯವಿದ್ದಂತೆ. ಬೆಚ್ಚಗಿನ ನೀರಿನಿಂದ ಗಂಟಲಿಗೆ ಆರಾಮ ಸಿಗುವದು.

3) ಋತುಚಕ್ರ ಸರಳವಾಗುವದು:-


ಋತುಚಕ್ರದ ಸಂದರ್ಭದಲ್ಲಿ ಮಹಿಳೆಯರಿಗೆ ಪ್ರತಿಯೊಂದು ಕೆಲಸದಲ್ಲಿ ಉದಾಸೀನತೆ, ಹೊಟ್ಟೆನೋವಿನಂತಹ ಅನೇಕ ಸಮಸ್ಯೆಗಳಿಗೆ ಬೆಚ್ಚನೆಯ ನೀರಿನ ಸೇವನೆಯು ತುಂಬಾ ಉಪಯೋಗವಾಗುವದು. ಈ ನೀರು ನೋವಿನಿಂದ ಮುಕ್ತಮಾಡುವ ಕೆಲಸ ಮಾಡುತ್ತದೆ.

4) ಶರೀರವನ್ನು ಶುದ್ದಗೊಳಿಸುವದು:-


ಈ ನೀರಿನ ಸೇವನೆಯಿಂದ ಶರೀರದಲ್ಲಿ ಇರತಕ್ಕಂತಹ ಅಶುದ್ಧ ಪದಾರ್ಥ ಸಹಜವಾಗಿ ಹೊರ ಹೋಗುವದು. ಬಿಸಿನೀರು ಕುಡಿಯುವ ಕಾರಣದಿಂದ ಶರೀರದ ಉಷ್ಣತೆಯಲ್ಲಿ ಹೆಚ್ಚಳವಾಗಿ ಶರೀರ ಬೆವರುವದು. ಇದರಿಂದ ದೇಹದಲ್ಲಿಯ ಎಲ್ಲ ಅಶುದ್ಧ ಘಟಕಗಳು ಬೆವರಿನ ಮುಖಾಂತರ ಹೊರಬೀಳುವವು.

5) ತ್ವಚೆಗೆ ಕಾಂತಿ ಲಭಿಸುವದು:-


ವಯಸ್ಸಿನ ಕಾರಣದಿಂದ ಮುಖದ ಮೇಲೆ ಕಂಡು ಬರುವ ನಿರಿಗೆಗಳನ್ನು ಹೋಗಲಾಡಿಸಲು ಇದು ಒಂದು ಒಳ್ಳೆಯ ಉಪಾಯ. ಈ ನೀರನ್ನು ಕುಡಿಯುವದರಿಂದ ಕೆಲವೇ ತಿಂಗಳುಗಳಲ್ಲಿ ತ್ವಚೆಯಲ್ಲಿ ವಿನೂತನ ಬದಲಾವಣೆ ಕಂಡುಬರುತ್ತದೆ. ಹಾಗೂ ತ್ವಚೆ ಕಾಂತಿಯುಕ್ತವಾಗಿ ಗೋಚರಿಸುವದು.

6) ತಲೆಗೂದಲಿಗೆ ಲಾಭ:-


ನಿಯಮಿತವಾಗಿ ಈ ನೀರಿನ ಸೇವನೆ ಮಾಡುವದರಿಂದ ತ್ವಚೆಯ ಜೊತೆಗೆ ಕೂದಲಿಗೂ ಸಹ ಲಾಭವಾಗುವದು. ಇದರಿಂದ ಕೂದಲು ಕಾಂತಿಯುಕ್ತವಾಗಿ ಹೂಳೆಯುವದಲ್ಲದೆ ಅವುಗಳ ಬೆಳವಣಿಗೆ ಚೆನ್ನಾಗಿ ಆಗುವದು.

7) ಉದರವನ್ನು ಚೆನ್ನಾಗಿ ಇಡುವದು:-


ಈ ನೀರನ್ನು ಕುಡಿಯುವದರಿಂದ ಪಚನ ಕ್ರಿಯೆ ಚೆನ್ನಾಗಿ ನಡೆಯುವದು. ಮತ್ತು ಆಸಿಡಿಟಿಯ ಸಮಸ್ಯೆಯಿಂದ ಮುಕ್ತಿ ಸಿಗುವದು. ಊಟದ ನಂತರ ಒಂದು ಕಪ್ ಬಿಸಿನಿರನ್ನು ಕುಡಿಯುವದರಿಂದ ಊಟ ಮಾಡಿದ ಆಹಾರ ಬೇಗನೆ ಪಚನವಾಗುವದು. ಹಾಗೂ ಹೊಟ್ಟೆ ಹಗುರವಾಗಿರುವದು.

8) ರಕ್ತಾಭಿಸರಣ ಕ್ರಿಯೆಯಲ್ಲಿ ಆಮೂಲಾಗ್ರ ಸುಧಾರಣೆ:-


ಶರೀರವು ಯೋಗ್ಯವಾಗಿ ಹಾಗೂ ಕಾರ್ಯಶೀಲವಾಗಿರಬೇಕಾದರೆ ಶರೀರದಲ್ಲಿ ನಡೆಯುವ ರಕ್ತಾಭಿಸರಣ ಕ್ರಿಯೆ ಚೆನ್ನಾಗಿರುವದು ತುಂಬ ಮಹತ್ವದ್ದು. ಬೆಚ್ಚಗಿನ ನೀರಿನ ಸೇವನೆ ಈ ಕ್ರಿಯೆಯನ್ನು ಚೆನ್ನಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ.

9) ಮಂಡಿ ನೋವು ಕಡಿಮೆಯಾಗುವದು:-


ಬಿಸಿನೀರಿನ ಸೇವನೆ ಮಂಡಿ ನೋವಿನಿಂದ ಮುಕ್ತವಾಗಲು ಒಳ್ಳೆಯ ಔಷಧಿ ಇದ್ದ ಹಾಗೆ. ದೇಹದಲ್ಲಿ 80 % ಭಾಗ ನೀರು ವ್ಯಾಪಿಸಿದೆ. ಆದ್ದರಿಂದ ಈ ನೀರಿನ ಸೇವನೆಯಿಂದಲೆ ನರಮಂಡಲದಲ್ಲಿಯ ಚಿಕ್ಕ ಗಾತ್ರದ ಗಂಟುಗಳು ದೂರವಾಗಿ ರಕ್ತಾಭಿಸರಣ ಕ್ರಿಯೆ ಚೆನ್ನಾಗಿ ಆಗುವದು.

10) ಶರೀರವನ್ನು ಕಾರ್ಯ ಪ್ರವೃತ್ತವನ್ನಾಗಿರಿಸುವದು:-


ಯಾವದೇ ಸಾಫ್ಟ್ ಡ್ರಿಂಕ್ಸ್ ಗಳ ಬದಲಾಗಿ ಬಿಸಿನೀರು ಅಥವಾ ನಿಂಬೆ ಹಣ್ಣಿನ ರಸ ಮಿಶ್ರಿತ ಬಿಸಿನೀರು ಕುಡಿಯುವದರಿಂದ ಶರೀರದ ಎನರ್ಜಿ ಲೇವಲ್ ನ ಹೆಚ್ಚಳ ದೊಂದಿಗೆ ಡಾಯಿಜೆಸ್ಟಿವ್ ಸಿಸ್ಟಮ್ ಕೂಡ ಚೆನ್ನಾಗಿ ನಡೆಯುತ್ತದೆ.

Leave a Reply

Your email address will not be published. Required fields are marked *