ಶಂಗಚುಲ ಮಹಾದೇವ ಮಂದಿರ-ಪ್ರೇಮಿಗಳಿಗ್ಯಾಕೆ ವಿಶೇಷ ಗೊತ್ತಾ?

ಶಂಗಚುಲ ಮಹಾದೇವ ಮಂದಿರ-ಪ್ರೇಮಿಗಳಿಗ್ಯಾಕೆ ವಿಶೇಷ ಗೊತ್ತಾ?

 

 

ಹಿಮಾಚಲ ಪ್ರದೇಶವು ತನ್ನ ಪ್ರಾಕೃತಿಕ ಸೌಂದರ್ಯದಿಂದ ಎಷ್ಟು ಹೆಸರು ವಾಸಿಯಾಗಿದೆ, ಅಷ್ಟೇ ಅಲ್ಲಿಯ ವಿವಿಧ ಪರಂಪರೆಗಳಿಗೆ ಆಚರಣೆಗಳಿಗೂ ಹೆಸರು ಪಡೆದಿದೆ. ಈ ಲೇಖನದಲ್ಲಿ ನಾವು ನಿಮಗೆ ಕೊಡುತ್ತಿರುವ ಮಾಹಿತಿ ಯಾವುದೆಂದರೆ ಇಲ್ಲಿಯ ಕುಲ್ಲು ನಗರದ ಶಾಂಘಡ ಹೆಸರಿನ ಊರಿನಲ್ಲಿಯ ದೇವತೆಯಾದ ಶಂಗಚುಲ ಮಹಾದೇವ ಮಂದಿರದಲ್ಲಿ ಮನೆಯಿಂದ ಓಡಿ ಬಂದ ಪ್ರೇಮಿಗಳಿಗೆ ಆಶ್ರಯ ಸಿಗುವದು.

ಪಾಂಡವ ಕಾಲಿನ ಈ ಶಾಂಘಡ ಊರಿನಲ್ಲಿ ಅನೇಕ ಐತಿಹಾಸಿಕ ಧರೋಹರಗಳಿವೆ. ಅದರಲ್ಲಿಯೇ ಒಂದು ಈ ಶಂಗಚುಲ ಮಹಾದೇವ ಮಂದಿರ. ಈ ಶಂಗಚುಲ ಮಹಾದೇವ ಮಂದಿರದ ವ್ಯಾಪ್ತಿಯಲ್ಲಿ ಒಮ್ಮೆ ಯಾವುದೇ ಜಾತಿಯ ಪ್ರೇಮಿಗಳ ಪ್ರವೇಶವಾದರೆ ಅವರು ಆ ಮಂದಿರದ ವ್ಯಾಪ್ತಿ ಪ್ರದೇಶದಲ್ಲಿ ಇರುವವರೆಗೂ ಯಾರೂ ಏನನ್ನು ಮಾಡಲಿಕ್ಕೆ ಸಾಧ್ಯವಿಲ್ಲ.

ಅಷ್ಟೇ ಏಕೆ ಆ ಪ್ರೇಮಿಗಳ ಸಂಬಂಧಿಕರು ಸಹ ಅವರಿಗೆ ಏನನ್ನು ಕೇಳಲಿಕ್ಕೆ ಸಾಧ್ಯವಿಲ್ಲ. ಈ ಮಂದಿರದ ಒಟ್ಟು ಕ್ಷೇತ್ರ ಸುಮಾರು 25 ಎಕರೆ ಭೂಮಿಯಲ್ಲಿ ವ್ಯಾಪಿಸಿದೆ. ಈ ಕ್ಷೇತ್ರದಲ್ಲಿ ಯಾವುದೇ ಪ್ರೇಮಿಗಳು ಹೆಜ್ಜೆ ಇಟ್ಟರೆ ಅವರು ಈ ಮಹಾದೇವನ ಆಶ್ರಯದಲ್ಲಿ ಬಂದಿದ್ದಾರೆಂದು ಹಿಂದಿನಿಂದಲೂ ತಿಳಿದುಕೊಂಡು ಬಂದಿದ್ದಾರೆ.

ಇಲ್ಲಿಯ ಇನ್ನೊಂದು ವಿಶೇಷತೆ ಏನೆಂದರೆ ಈ ಊರಿನಲ್ಲಿಯ ಜನರು ಹಿಂದಿನ ರೂಢಿಪರಂಪರೆಗಳನ್ನು ಇಲ್ಲಿಯವರೆಗೂ ಪಾಲಿಸುತ್ತ ಬಂದಿದ್ದಾರೆ. ಆದಕಾರಣ ಈ ಕ್ಷೇತ್ರದಲ್ಲಿ ಪೋಲಿಸರ ಪ್ರವೇಶಕ್ಕೂ ನಿರ್ಬಂಧವಿದೆ. ಹಾಗೆ ಇಲ್ಲಿ ಸೆರೆ, ಸಿಗರೇಟ್ ಮತ್ತು ಚರ್ಮದ ಸಾಮಾನುಗಳನ್ನು ತೆಗೆದುಕೊಂಡು ಹೋಗಲು ಪ್ರತಿಬಂಧವಿದೆ. ಮತ್ತು ಇಲ್ಲಿ ಯಾವುದೇ ತರಹದ ಶಸ್ತ್ರಗಳನ್ನೂ ತೆಗೆದುಕೊಂಡು ಹೋಗುವದು ನಿಷಿದ್ಧವಿದೆ. ಮತ್ತು ಇಲ್ಲಿ ಜಗಳ ,ತಂಟೆ ತಕರಾರು, ಹಾಗೂ ಎತ್ತರದ ಧ್ವನಿಯಲ್ಲಿ ಮಾತನಾಡುವದು ಇವೆಲ್ಲವುಗಳ ಮೇಲೆ ನಿರ್ಬಂಧವಿದೆ. ಇಲ್ಲಿ ದೇವರ ನಿರ್ಣಯವೇ ಅಂಗಿಕರಿಸಲಾಗುತ್ತದೆ. ಇಲ್ಲಿ ಓಡಿಬಂದ ಪ್ರೇಮಿಗಳ ಸಮಸ್ಯೆ ಎಲ್ಲಿಯವರೆಗೆ ಬಗೆಹರಿಯುವದಿಲ್ಲವೋ ಅಲ್ಲಿಯವರೆಗೆ ಮಂದಿರದ ಪೂಜಾರಿಯೇ ಈ ಪ್ರೇಮಿಗಳ ಉಸ್ತುವಾರಿ ಮಾಡುವರು.

ಪೌರಾಣಿಕ ಹಿನ್ನಲೆಯ ಪ್ರಕಾರ ಪಾಂಡವರು ತಮ್ಮ ಅಜ್ಞಾತವಾಸದ ಸಮಯದಲ್ಲಿ ಕೆಲವು ದಿವಸಗಳ ವರೆಗೆ ಈ ಮಂದಿರದಲ್ಲಿ ತಂಗಿದ್ದರಂತೆ. ಮುಂದೆ ಕೌರವರು ಪಾಂಡವರ ಶೋಧನೆಗೆ ಬೆನ್ನಟ್ಟಿ ಇಲ್ಲಿಗೆ ಬಂದರು. ಆಗ ಈ ಶಂಗಚುಲ ಮಹಾದೇವನು ಕೌರವರನ್ನು ತಡೆದು ನಿಲ್ಲಿಸಿದ್ದನು. ಮತ್ತು ಈ ಕ್ಷೇತ್ರ ನನ್ನ ಅಧಿನದಲ್ಲಿದೆ, ಹಾಗೂ ಇಲ್ಲಿ ನನ್ನ ಆಶ್ರಯದಲ್ಲಿ ಬಂದವರನ್ನು ಯಾರೂ ಏನನ್ನು ಮಾಡಲಿಕ್ಕೆ ಸಾಧ್ಯವಿಲ್ಲ. ಎಂದಾಗ ಈ ಮಹಾದೇವನ ಭೀತಿಯಿಂದ ಕೌರವರು ತಿರುಗಿದರು.

ಅಂದಿನಿಂದ ಇಂದಿನವರೆಗೂ ಸಮಾಜದಿಂದ ಶೋಷಣೆಗೆ ಒಳಗಾದ ವ್ಯಕ್ತಿ ಅಥವಾ ಪ್ರೇಮಿಗಳು ಇಲ್ಲಿ ಆಶ್ರಯಕ್ಕಾಗಿ ಬರುತ್ತಲೇ ಇರುತ್ತಾರೆ. ಮತ್ತು ಇಲ್ಲಿಯ ಮಹಾದೇವನು ಅವರಿಗೆ ಆಶ್ರಯ ಕೊಡುತ್ತಲೇ ಇದ್ದಾನೆ.

Leave a Reply

Your email address will not be published. Required fields are marked *