ಮಾನಸಿಕ ಒತ್ತಡದಿಂದ ಮುಕ್ತಿ ಹಾಗೂ ಕಾಂತಿಯುಕ್ತ ತ್ವಚೆಗೆ ಈ ನಾಲ್ಕು ಟಿಪ್ಸ್!

ಮಾನಸಿಕ ಒತ್ತಡದಿಂದ ಮುಕ್ತಿ ಹಾಗೂ ಕಾಂತಿಯುಕ್ತ ತ್ವಚೆಗೆ ಈ ನಾಲ್ಕು ಟಿಪ್ಸ್!

 

ಜೀವನದಲ್ಲಿ ಯಶಸ್ಸು ಕಾಣಲು ಮತ್ತು ಜೀವನ ಸುಖಕರವಾಗಿ ಜೀವಿಸುವ ಸಲುವಾಗಿ ಪ್ರತಿಯೊಬ್ಬರೂ ಪ್ರಯತ್ನದ ಹಾದಿಯಲ್ಲಿ ಸಾಗುತ್ತಿದ್ದಾರೆ. ಶಿಕ್ಷಣ ಪಡೆಯುವ ವಿದ್ಯಾರ್ಥಿ, ಉದ್ಯೋಗಿ ಮತ್ತು ಸೇವೆಯಲ್ಲಿರುವ ವ್ಯಕ್ತಿ ಪ್ರತಯೊಬ್ಬರಿಗೆ ಈ ದಾರಿಯಲ್ಲಿ ಮುನ್ನುಗ್ಗಬೇಕೆಂಬ ಛಲವಿರುತ್ತದೆ. ಕಾರಣಾಂತರವಾಗಿ ಈ ದಾರಿಯಲ್ಲಿ ಸಾಗುತ್ತಿರುವಾಗ ನಾವು ಮಾನಸಿಕ ಮತ್ತು ಶಾರೀರಿಕ ಒತ್ತಡಕ್ಕೆ ಸಿಲುಕುತ್ತೆವೆ. ಆಗ ನಮ್ಮಲ್ಲಿ ಶಾರೀರಿಕ ಮತ್ತು ಮಾನಸಿಕ ಬದಲಾವಣೆಗಳು ಕಂಡು ಬರಲು ಪ್ರಾರಂಭವಾಗುತ್ತದೆ. ನಮ್ಮ ಜೀವನ ನಮಗೆ ಬೇಜಾರು ಎನ್ನೋ ಮಟ್ಟಕ್ಕೆ ನಮ್ಮ ವಿಚಾರ ಬೆಳೆದಿರುತ್ತದೆ. ಆಗ ನಾವು ತುಂಬಾ ವಿಚಾರ ಮಾಡಲು ಪ್ರಾರಂಭ ಮಾಡುತ್ತೇವೆ. ಇಂತಹ ಸಮಯದಲ್ಲಿ ನಮ್ಮ ಮೆದುಳಿಗೆ ಬಿಡುವು ದೊರೆಯುವದಿಲ್ಲ. ಆದ್ದರಿಂದ ಅದು ತನ್ನ ಕಾರ್ಯಮಾಡುವ ಕ್ಷಮತೆ ಕಳೆದುಕೊಳ್ಳುತ್ತದೆ. ಇದರಿಂದ ನಮಗೆ ಮಾನಸಿಕ ಒತ್ತಡ ಪ್ರಾರಂಭವಾಗುವದು.

ನೀವು ಮಾನಸಿಕ ಒತ್ತಡದಲ್ಲಿ ಸಿಲುಕುತ್ತಿರುವದು ನಿಮಗೆ ಯೋಗ್ಯ ವೇಳೆಯಲ್ಲಿ ಗೊತ್ತಾದರೆ ಅದರಿಂದ ಬೇಗನೆ ಹೊರಬೀಳಲು ಸರಳವಾಗುತ್ತದೆ. ಇದರಿಂದ ನಿಮ್ಮ ಮಾನಸಿಕ ಆರೋಗ್ಯದ ಜೊತೆಗೆ ನಿಮ್ಮ ತ್ವಚೆಯೂ ಸಹಿತ ಆರೋಗ್ಯದಿಂದರಲು ಸಹಾಯ ಮಾಡುತ್ತದೆ.

1)ವ್ಯಾಯಾಮ ಮಾಡುವದು:-


ವ್ಯಾಯಾಮ ನಿಮ್ಮ ಆರೋಗ್ಯದ ಜೊತೆಗೆ ಮುಖದ ಸಲುವಾಗಿಯೂ ಉಪಯುಕ್ತ ವಾಗಿದೆ. ಇದರಿಂದ ನೀವು ಒತ್ತಡದಿಂದ ದೂರವಿದ್ದಲ್ಲಿ ನಿಮ್ಮ ಮುಖಕ್ಕೆ ಕಾಂತಿ ಲಭಿಸುವದು.

2) ಮಿತ್ರರ ಜೊತೆಗೆ ಹರಟೆ ಹೂಡೆಯುವದು:-


ಯಾವುದೇ ಒಂದು ವಿಷಯದ ಸಂದರ್ಭದಲ್ಲಿ ನೀವು ಅತೀ ಚಿಂತೆಗಿಡಾಗಿದ್ದಾರೆ ಆ ಕಾರಣದಿಂದಲೇ ನಿಮ್ಮ ಮುಖದ ಮೇಲೆ ನಿರಿಗೆಗಳು ಕಂಡು ಬರುತ್ತವೆ. ಇದನ್ನು ಹೋಗಲಾಡಿಸುವ ಒಳ್ಳೆಯ ಉಪಾಯವೇನೆಂದರೆ ಮಿತ್ರರ ಜೊತೆಗೆ ಮನಬಿಚ್ಚಿ ಹರಟೆ ಹೂಡೆಯುವದು, ಹಾಗೂ ಮನಸ್ಸಿನಲ್ಲಿರತಕ್ಕಂತಹ ದುಗುಡ-ದುಮ್ಮಾನಗಳನ್ನು ಗೆಳೆಯರ ಜೊತೆ ಶೇರ್ ಮಾಡುವದರಿಂದ ಮನಸ್ಸಿನ ಮೇಲಿನ ಒತ್ತಡ ಕಡಿಮೆ ಯಾಗುವದು.

3) ಸಾಕು ಪ್ರಾಣಿಗಳ ಜೊತೆಗೆ ಸಮಯ ಕಳೆಯುವದು:-


ಸಾಕು ಪ್ರಾಣಿಗಳ ಜೊತೆಗೆ ದಿನದಲ್ಲಿ ಒಂದಷ್ಟು ವೇಳೆಯನ್ನು ಖರ್ಚುಮಾಡುವದರಿಂದ ಮಾನಸಿಕ ಒತ್ತಡ ಕಡಿಮೆ ಯಾಗಲು ಸಹಾಯವಾಗುವದು. ಇದರಿಂದಲೂ ಸಹ ನಿಮ್ಮ ಮುಖ ನಗುಮೊಗದಿಂದ ಅರಳುವದು.

4) ಲೇಖನ:-


ಲೇಖನದ ಮಾಧ್ಯಮದಿಂದಲೂ ಸಹ ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಇದರ ಸಲುವಾಗಿ ನಿಮಗೆ ಬೇರೆಯವರ ಆಧಾರ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಆದ್ದರಿಂದ ಈ ಲೇಖನದ ಮಾಧ್ಯಮದಿಂದ ನಿಮ್ಮ ಮುಖ ಹಸನ್ಮುಖವಾಗಿ ಕಾಣುವದರಲ್ಲಿ ಸಂದೇಹವಿಲ್ಲ.

Leave a Reply

Your email address will not be published. Required fields are marked *