ಜಿಯೋ ಇನ್ನೊಂದು ಧಮಾಕಾ! ಪ್ರೈಮ್ ಮೆಂಬರಗೆ ದೊರೆಯಲಿದೆ 2599 ₹ ಗಳ ವರೆಗೆ ಕ್ಯಾಶ್ ಬ್ಯಾಕ್ ಆಫರ್. ಪ್ಲ್ಯಾನ್ ಬಗ್ಗೆ ತಿಳಿದುಕೊಳ್ಳಿ.

ಜಿಯೋ ಇನ್ನೊಂದು ಧಮಾಕಾ! ಪ್ರೈಮ್ ಮೆಂಬರಗೆ ದೊರೆಯಲಿದೆ 2599 ₹ ಗಳ ವರೆಗೆ ಕ್ಯಾಶ್ ಬ್ಯಾಕ್ ಆಫರ್. ಪ್ಲ್ಯಾನ್ ಬಗ್ಗೆ ತಿಳಿದುಕೊಳ್ಳಿ.

 

ರಿಲಾಯನ್ಸ್ ಜಿಯೋ ಇನ್ನುಳಿದ ನೆಟವರ್ಕ್ ಕಂಪನಿಗಳಿಗೆ ಮತ್ತೊಮ್ಮೆ ಶೆಡ್ಡು ಹೊಡೆದಿದೆ.
ಈಗ ಕಂಪನಿ ಗ್ರಾಹಕರಿಗೆ ಕ್ಯಾಶ್ ಬ್ಯಾಕ್ ಆಫರ್ ನ ಸೌಲಭ್ಯ ಕೊಡಲಿದೆ. ಈ ಲಾಭ ಜಿಯೋದ ಪ್ರೈಮ್ ಮೇಂಬರಗಳ ಸಲುವಾಗಿ ಇದೆ. ಈ ಪ್ಲ್ಯಾನ್ ನಲ್ಲಿ 399 ₹ ಗಳ ಹಾಗೂ ಇದಕ್ಕಿಂತ ಮೇಲ್ಪಟ್ಟು 2599 ₹ ಗಳವರೆಗೆ ಮಾಡಿದ ಪ್ರತಿ ರಿಚಾರ್ಜ ಮೇಲೆ ಕ್ಯಾಶ್ ಬ್ಯಾಕ್ ಸಿಗಲಿದೆ. ಕಂಪನಿಯು ತಾನು ಮೊದಲು ಮಾಡಿದ ಘೋಷಣೆಯನ್ನು ಕಾರ್ಯಾನ್ವಿತಗೊಳಿಸುವ ನಿಟ್ಟಿನಲ್ಲಿ ಈ ಹೆಜ್ಜೆಯನ್ನು ಇಟ್ಟಿದೆ. ಕಂಪನಿಯ ಹೇಳಿಕೆಯ ಪ್ರಕಾರ ಪ್ರೈಮ್ ಮೆಂಬರ್ಸ್ ಗಳಿಗೆ ಕಾಲಕಾಲಕ್ಕೆ ಒಳ್ಳೆಯ ಆಫರ್ಸಗಳನ್ನೂ ಒದಗಿಸಲಿದ್ದಾರೆ.

2599 ₹ ರೀಚಾರ್ಜ್ ಮೇಲೆ 400 ₹ ಗಳು ಮಾಯ್ ಜಿಯೋ app ನಲ್ಲಿ, ಹಾಗೂ 300 ₹ ಗಳು ಮೊಬೈಲ್ ವಾಲೆಟ್ ನಲ್ಲಿ ಮರಳಿ ಸಿಗಲಿದೆ. ಹಾಗೂ 1899 ₹ ಗಳ e commerce ಸೈಟ್ ನಲ್ಲಿ ಶಾಪಿಂಗ್ ವವಚರ್ ಸಹಿತ ದೊರೆಯುವದು. ಈ ಸುವರ್ಣ ಸಂಧಿ 10 ರಿಂದ 25 ನವೆಂಬರ್ ವರೆಗೆ ಲಭ್ಯವಾಗಲಿದೆ.

● ಈ ಕ್ಯಾಶ್ ಬ್ಯಾಕ್ ಆಫರ್ ಲಾಭ ಗಳಿಸುವದು ಹೇಗೆ?
ಈ ಆಫರ್ ನಲ್ಲಿ 399 ₹ ಗಳ ಅಥವಾ ಅದಕ್ಕಿಂತ ಹೆಚ್ಚಿನ ರೀಚಾರ್ಜ್ ಮೈ ಜಿಯೋ app ನಿಂದ ಮಾಡಲಾಗಿ 400 ₹ ಗಳ ಕ್ಯಾಶ್ ಬ್ಯಾಕ್ ದೊರೆಯಲಿದೆ. ಈ 400 ₹ಗಳು 50-50 ರೂಪಾಯಿಯಂತೆ 8 ಸಲ ದೊರೆಯುವದು. ಜಿಯೋ ಈ ಆಫರ್ ಸಲುವಾಗಿ ಅನೇಕ ಡಿಜಿಟಲ್ ವಾಲೆಟ್ ಕಂಪನಿಗಳ ಜೊತೆಗೆ ಪಾರ್ಟನರ್ ಶಿಪ್ ಮಾಡಿಕೊಂಡಿದೆ. ಅವುಗಳಲ್ಲಿ ಅಮೆಜಾನ್ ಪೆ, ಎಕ್ಸೆಸ್ ಪೇ, ಫ್ರೀ ಚಾರ್ಜ್, ಮೋಬಿ ಕ್ವಿಕ್, ಪೆ ಟಿ ಎಂ ಮತ್ತು ಫೋನ್ ಪೆ ಈ ಕಂಪನಿಗಳು ಶಾಮಿಲಾಗಿವೆ.

ಹೊಸ ಗ್ರಾಹಕರು ಅಮೆಜಾನ್ ಪೇ ನಿಂದ ರಿಚಾರ್ಜ ಮಾಡಲಾಗಿ 99 ₹ ಗಳ ಕ್ಯಾಶ್ ಬ್ಯಾಕ್ ದೊರೆಯಲಿದೆ. ಇದಕ್ಕಾಗಿ NEWJIO PROMO CODE ಅಪ್ಲಯ್ ಮಾಡಬೇಕಾಗುವದು.

● ಹಳೆಯ ಗ್ರಾಹಕರಿಗೆ ದೊರೆಯಲಿದೆ ಈ ಕ್ಯಾಶ್ ಬ್ಯಾಕ್ ಆಫರ್-
Paytm ನಿಂದ ರೀಚಾರ್ಜ್ ಮಾಡುವ ಯೂಜರ್ಸಗಳಿಗೆ 50 ₹ ಗಳ ಕ್ಯಾಶ್ ಬ್ಯಾಕ್ ಆಫರ್ ಇದೆ. ಇದರ ಸಲುವಾಗಿ ಈ ಮೇಲೆ ಹೇಳಿದ promo code ಅಪ್ಲಯ್ ಮಾಡಬೇಕಾಗುವದು. ಹೊಸ ಬಳಕೆದಾರರು ಫೋನ್ ಪೇ ನಲ್ಲಿ ರೀಚಾರ್ಜ್ ಮಾಡಲಾಗಿ 75 ₹ ಗಳ , ಮೋಬಿ ಕ್ವಿಕ್ ನಲ್ಲಿ 300 ₹ ಗಳು, ಎಕ್ಸೆಸ್ ಪೇ ನಲ್ಲಿ 100 ₹ ಗಳ ಹಾಗೂ ಫ್ರೀ ಚಾರ್ಜ್ ನಲ್ಲಿ 50 ₹ ಗಳ ಕ್ಯಾಶ್ ಬ್ಯಾಕ್ ಸಿಗಲಿದೆ.

ಇದರ ಹೊರೆತಾಗಿ ಎಲ್ಲ ಗ್ರಾಹಕರಿಗೆ ಅಮೆಜಾನ್ ಪೇ, ಪೆ ಟಿ ಎಮ್, ಮೋಬಿ ಕ್ವಿಕ್ ಹಾಗೂ ಆಕ್ಸಿಸ್ ಪೇ ದಿಂದ ಕ್ರಮವಾಗಿ 20, 15, 30 , 149 ಮತ್ತು 35 ₹ ಗಳ ತ್ವರಿತ ಕ್ಯಾಶ್ ಬ್ಯಾಕ್ ದೊರೆಯಲಿದೆ.

1 Comment

Leave a Reply

Your email address will not be published. Required fields are marked *