ರೋರಿಂಗ್ ಸ್ಟಾರ್ ಶ್ರೀ ಮುರುಳಿ ಬಿಡುಗಡೆ ಮಾಡಿರುವ, ಮೈ ನವಿರೇಳಿಸುವ ಕನ್ನಡದ ಹಾಡು.. “ತಾಯಿ ಕನ್ನಡ” ಪ್ರತಿಯೊಬ್ಬರೂ ನೋಡಲೇಬೇಕಾದ ಕನ್ನಡಿಗರ ಹಾಡು..

ರೋರಿಂಗ್ ಸ್ಟಾರ್ ಶ್ರೀ ಮುರುಳಿ ಬಿಡುಗಡೆ ಮಾಡಿರುವ, ಮೈ ನವಿರೇಳಿಸುವ ಕನ್ನಡದ ಹಾಡು.. "ತಾಯಿ ಕನ್ನಡ" ಪ್ರತಿಯೊಬ್ಬರೂ ನೋಡಲೇಬೇಕಾದ ಕನ್ನಡಿಗರ ಹಾಡು..

 

ಮೈ ನವಿರೇಳಿಸುವ ಅತ್ಯದ್ಭುತ ಆಲ್ಬಂ ಒಂದನ್ನು ರೋರಿಂಗ್ ಸ್ಟಾರ್ ಶ್ರೀ ಮುರುಳಿ ರವರು ಬಿಡುಗಡೆ ಮಾಡಿದ್ದಾರೆ.. ಅದೇ “ತಾಯಿ ಕನ್ನಡ”.. ಹೆಣ್ಣನ್ನು ಪ್ರಧಾನವಾಗಿಟ್ಟುಕೊಂಡು ಮಾಡಿರುವ ಈ ಕನ್ನಡದ ಆಲ್ಬಂಗೆ ಬಿಡುಗಡೆಯಾದ ಕೆಲವೇ ಘಂಟೆಗಳಲ್ಲಿ ಎಲ್ಲಾ ಕಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ..


ಬೆಂಗಳೂರಿನ ಸಂಜಯನಗರದ ಸಮಾಜ ಸೇವಕರಾದ ಶ್ರೀಮತಿ ಸುನಿತಾ ಮಂಜುನಾಥ್ ರವರು ಕನ್ನಡದ ಮೇಲಿನ ಅಭಿಮಾನಕ್ಕಾಗಿ ಈ ಆಲ್ಬಂ ಅನ್ನು ನಿರ್ಮಾಣ ಮಾಡಿದ್ದಾರೆ.. ಈಗಾಗಲೇ ತಮ್ಮ ಎಜುಕೇಶನ್ ಟ್ರಸ್ಟ್ ಗಳ ಮೂಲಕ ಸಮಾಜ ಸೇವೆ ಮಾಡುತ್ತಾ ಅಪಾರ ಹೆಸರು ಗಳಿಸಿರುವ ಇವರು ಇದೀಗ ಕನ್ನಡಕ್ಕೆ ಹಾಡಿನ ರೂಪದಲ್ಲಿ ಕೊಡುಗೆಯೊಂದನ್ನು ನೀಡಿದ್ದಾರೆ.


ಪ್ರಖ್ಯಾತ ರ್ಯಾಪರ್ ಅಲೋಕ್ ರವರು ಹಾಡಿರುವ ಈ ಆಲ್ಬಂ ನಲ್ಲಿ ಹೆಸರಾಂತ IPS ಆಫೀಸರ್ ಡಿ.ರೂಪ ರವರು, ಸುಧಾ ನಾರಾಯಣಮೂರ್ತಿಯವರು, ಹಾಗೂ ಚಿತ್ರ ನಟಿಯರಾದ ಮಯೂರಿ, ಸಂಯುಕ್ತ ಹೊರನಾಡ್, ಸುಧಾ ಬೆಳವಾಡಿ, ಹಾಗೂ ಆಯುಷಿ ರವರು ಸೇರಿದಂತೆ ಇನ್ನು ಅನೇಕ ಮಂದಿ ಕಾಣಿಸಿಕೊಂಡಿದ್ದಾರೆ..

ಕೇಳಿದರೇ ಮೈ ರೋಮಾಂಚನವಾಗುವ ಈ ಹಾಡನ್ನು ನಮ್ಮ ಸ್ಯಾಂಡಲ್ವುಡ್ ನ ರೋರಿಂಗ್ ಸ್ಟಾರ್ ಶ್ರೀ ಮುರುಳಿ ರವರು ಬಿಡುಗಡೆ ಮಾಡಿದ್ದಾರೆ..ಆಲ್ಬಂ ಬಿಡುಗಡೆ ಮಾಡಿದ ಸಂಧರ್ಭದಲ್ಲಿ ರೋರಿಂಗ್ ಸ್ಟಾರ್ ಶ್ರೀ ಮುರುಳಿ ರವರು ಮಾತನಾಡಿ “ತಾಯಿ ಕನ್ನಡ” ಆಲ್ಬಂ ವೈಯಕ್ತಿಕವಾಗಿ ನನಗೆ ಬಹಳ ಇಷ್ಟವಾದ ಹಾಡು.. ಇಂತಹ ಕನ್ನಡದ ಹಾಡುಗಳು ಹೆಚ್ಚು ಹೆಚ್ಚಾಗಿ ಬರಬೇಕೆಂದು ಆಶಯ ವ್ಯಕ್ತಪಡಿಸಿದರು..
ಈ ಅಧ್ಬುತ ವೀಡಿಯೋವನ್ನು ನೀವು ಈ ಲಿಂಕ್ ಮೂಲಕ ನೋಡಬಹುದು..

ಕನ್ನಡ ತಾಯಿ ಪ್ರಧಾನವಾದ ಈ ಆಲ್ಬಂ ನಲ್ಲಿ ನೂರಾರು ಮಕ್ಕಳು ಅಭಿನಯಿಸಿದ್ದಾರೆ.. ನಗರದ ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿಸಿರುವ ಸುನಿತಾ ಮಂಜುನಾಥ್ ರವರು ತಮ್ಮ ಶಾಲೆಗಳಲ್ಲೂ ಈ ಹಾಡಿನ ಚಿತ್ರೀಕರಣಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ..

ಇಂತಹ ಕನ್ನಡದ ಹಾಡನ್ನು ನಮಗೆ ನೀಡಿದ ಸಮಾಜ ಸೇವಕಿ ಶ್ರೀಮತಿ ಸುನಿತಾ ಮಂಜುನಾಥ್ ರವರಿಗೆ ಹಾಗೂ ಹಾಡಿದಂತಹ ಅಲೋಕ್ ರವರಿಗೆ.. ಈ ಆಲ್ಬಂ ನಲ್ಲಿ ಕಾಣಿಸಿಕೊಂಡಿರುವ ಎಲ್ಲಾ ಸಾಧಕರಿಗೂ ನಮ್ಮ ಧನ್ಯವಾದಗಳು..

ಜೈ ಕರ್ನಾಟಕ..

Leave a Reply

Your email address will not be published. Required fields are marked *