ಇಲ್ಲಿ ಕಾಣುವದು ಬರಿ ಬಸ್ಸಲ್ಲ! ಐಷಾರಾಮಿ ಜೀವನದ ಪ್ರತೀಕ.

ಇಲ್ಲಿ ಕಾಣುವದು ಬರಿ ಬಸ್ಸಲ್ಲ! ಐಷಾರಾಮಿ ಜೀವನದ ಪ್ರತೀಕ.

 

 

ಸಾಮಾನ್ಯ ಮನುಷ್ಯ ಬರೀ ಇಂತಹ ಕನಸು, ಫೋಟೋ, ಹಾಗೂ ವೀಡಿಯೊ ಗಳನ್ನಷ್ಟೆ ನೋಡಬಹುದು.

ಇಲ್ಲಿ ಕಾಣಿಸುವ ವಾಹನ ಬಸ್. ಆದರಿದು ಬಸ್ ಅಲ್ಲ. 5 ಸ್ಟಾರ್ ಮೊಬೈಲ್ ಹೋಟೆಲಿದೆ. ಇದನ್ನು ನೀವು ಎಲ್ಲಿಗೆ ಬೇಕೋ ಅಲ್ಲಿಗೆ ತೆಗೆದುಕೊಂಡು ಹೋಗ ಬಹುದು. ಹಾಗೂ ಎಲ್ಲಿಯೂ ಪಾರ್ಕ್ ಮಾಡಬಹುದು.

ಈ ಬಸ್ಸು 40 ಫೀಟ್ ಗಳ ವರೆಗೆ ಉದ್ದವಾಗಿದ್ದು. ಇದರಲ್ಲಿ ಸುಂದರವಾದ ಅತ್ಯಾಧುನಿಕ ಕಿಚನ್ ರೂಮಿನಿಂದ ಹಿಡಿದು, ಡ್ರಾಯಿಂಗ್ , ಬೆಡ್ ರೂಮ್ ಮತ್ತು ಬಾತ್ ರೂಮ್ ಸಹ ಇದೆ. ಈ ಬಸ್ಸಿನ ರೂಪರೇಖೆ 5 ಸ್ಟಾರ್ ಮಾದರಿಯಲ್ಲಿ ವಿನ್ಯಾಸ ಮಾಡಲಾಗಿದೆ.

ಎಲ್ಲಕ್ಕೂ ಮಿಗಿಲಾದ ವೈಶಿಷ್ಟ ವೆನೆಂದರೆ ಈ ಬಸ್ಸಿನಲ್ಲಿ ಎಲೆಕ್ಟ್ರೋಹೈಡ್ರೋಲಿಕ್ ಸ್ವರೂಪದ ಗ್ಯಾರೆಜಿದೆ. ಇದರಲ್ಲಿ ಒಂದು ಕಾರನ್ನು ಇಟ್ಟು ನೀವು ಎಲ್ಲಿ ಬೆಕಲ್ಲಿ ಸಂಚರಿಸ ಬಹುದಾಗಿದೆ. ಈ ಬಸ್ಸನ್ನು VOLKNER MOBILE ನವರು ತಯಾರಿಸಿದ್ದು ಇದಕ್ಕೆ performance S ಎಂದು ನಾಮಕರಣ ಮಾಡಲಾಗಿದೆ. ಈ ಬಸ್ಸಿಗೆ ಇನ್ನೊಂದು ಹೆಸರು ಮೋಟರ್ ಹೋಮ್ ಎಂತಲೂ ಕರೆಯುತ್ತಾರೆ. ಇದನ್ನು ತಯಾರಿಸಿದ ಕಂಪನಿಯ ಮಾಲೀಕನ ದಾವೆಯ ಪ್ರಕಾರ ಜಗತ್ತಿನಲ್ಲಿಯ ಲೇಟೆಸ್ಟ್ ಮೋಟರ್ ಹೋಮ್ ತಯಾರಿಸುವ ಕಂಪನಿ ತಮ್ಮದಾಗಿದೆ ಎಂದು ಅಭಿಮಾನದಿಂದ ಹೇಳುತ್ತಿದ್ದಾರೆ.

●ವಾಹನದ ಒಳಗಿನ ಫೋಟೋ ನೋಡಿ👇

ಇಷ್ಟೆಲ್ಲ ಆಯಿತು ಇನ್ನು ಈ 5 ಸ್ಟಾರ್ ಮೋಟರ್ ಹೋಮನ ಬೆಲೆ ಗೊತ್ತಾಗ ಬೇಕಲ್ಲ ಈ ಮೋಬೈಲ್ ವಾಹನದ ಪ್ರೈಸ್ 1.7 ಮಿಲಿಯನ್ ಡಾಲರ್.
ಅಂದರೆ ಭಾರತದ ಮೌಲ್ಯದಲ್ಲಿ ಹೇಳುವದಾದರೆ 11 ಕೋಟಿ 4 ಲಕ್ಷ ರೂಪಾಯಿಗಳ ವರೆಗೆ ಆಗುತ್ತದೆ. ಇದರಿಂದ ಇಂತಹ ಉನ್ನತ ಸೌಲಭ್ಯವಿರುವ ಈ ಮೋಟರ್ ಹೋಮ್ ಆಗರ್ಭ ಶ್ರೀಮಂತ ಜನರಿಗಾಗಿಯೆ ತಯಾರಿಸಲಾಗುತ್ತದೆಂದೆ ತಿಳಿದು ಬರುತ್ತದೆ. ಅಂದಹಾಗೆ ಸಾಮಾನ್ಯ ಮನುಷ್ಯ ಈ ಮೋಬೈಲ್ ವಾಹನದ ಫೋಟೋ ಗಳನ್ನು ಮತ್ತು ವೀಡಿಯೊಗಳನ್ನಷ್ಟೆ ನೋಡಬಹುದು.

ಪ್ರಸ್ತುತ ದರ್ಶಿಸಿದ ವೀಡಿಯೊ ನೋಡಲಾಗಿ ಕಂಪನಿಯು ಮಾಡಿದ ದಾವೆಗೆ ಅನುಸಾರ ನಿಜಕ್ಕೂ ಸರಿ ಇದೆ ಎಂದು ತಿಳಿದು ಬರುತ್ತದೆ.

ವೀಡಿಯೊ ನೋಡಿ..

Leave a Reply

Your email address will not be published. Required fields are marked *