ವಾಟ್ಸಾಪ್ ಡೌನ್ಲೋಡ್ ಮಾಡ್ತಾ ಇದ್ದೀರಾ ಸ್ವಲ್ಪ ನಿಲ್ಲಿ! ಮೊದಲು ಇದನ್ನು ಓದಿ.

ವಾಟ್ಸಾಪ್ ಡೌನ್ಲೋಡ್ ಮಾಡ್ತಾ ಇದ್ದೀರಾ ಸ್ವಲ್ಪ ನಿಲ್ಲಿ! ಮೊದಲು ಇದನ್ನು ಓದಿ.

 

 

ಯಾಕೆ ಗೊತ್ತಾ ಪ್ಲೇ ಸ್ಟೋರ್ ನಲ್ಲಿ ವಾಟ್ಸಾಪ್ ನ ಒಂದು ನಕಲಿ ವರ್ಜನ್ ಉಪಲಬ್ದವಿದೆ. ಆ ನಕಲಿ ವರ್ಜನ್ ಆಪ್ ಡೌನ್ಲೋಡ್ ಮಾಡಿದ್ದಲ್ಲಿ ಮೋಸ ಹೋಗುತ್ತೀರಿ. ಯಾಕೆಂದರೆ ಇಲ್ಲಿಯವರೆಗೆ 5 ಸಾವಿರಕ್ಕೂ ಮೇಲ್ಪಟ್ಟು ವಾಟ್ಸಾಪ್ ಬಳಕೆದಾರರು ಇದರಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಇದು ಪೂರ್ಣತಃ ನಕಲಿ ಆಪ್ ಎಂದು ತಿಳಿದು ಬಂದಿದೆ.

ಗೂಗಲ್ ಪ್ಲೇ ಸ್ಟೋರ್ ನಲ್ಲಿ ‘update whatsapp Messenger’ ಈ ಹೆಸರಿನಲ್ಲಿ ಆಪ್ ಕಂಡು ಬರುವದು. ಅದನ್ನೇ WhatsApp Inc ನ ಹೆಸರಿನಿಂದ ಮಾಡಿದ್ದಾರೆಂದು ಹೀಗೆ ಉಲ್ಲೇಖಿಸಲಾಗಿದೆ. ಇದನ್ನೇ ಇಲ್ಲಿಯವರೆಗೆ 5 ಸಾವಿರಕ್ಕೂ ಮೇಲ್ಪಟ್ಟು ಬಳಕೆದಾರರು ಡೌನ್ಲೋಡ್ ಮಾಡಿಕೊಂಡಿದ್ದಾರೆ.


ಅಷ್ಟೇ ಅಲ್ಲ ಪ್ಲೇ ಸ್ಟೋರ್ ನಲ್ಲಿ ಇದೆ ಹೆಸರಿನ ಇನ್ನೊಂದು ಆಪ್ ಇದೆ. ಅದನ್ನು ಇಲ್ಲಿಯವರೆಗೆ 10 ಲಕ್ಷ ಬಳಕೆದಾರರು ಡೌನ್ಲೋಡ್ ಮಾಡಿಕೊಂಡಿದ್ದಾರೆ. ಈ ಆಪ್ ಡೌನ್ಲೋಡ್ ಮಾಡಿಕೊಂಡ ನಂತರ ಫೋನಿನಲ್ಲಿಯ ಎಲ್ಲಾ ಮಾಹಿತಿ ಸೋರಿಕೆ ಯಾಗುವದು ನಿಶ್ಚಿತ. ಹಾಗೂ ಬಳಕೆದಾರನ ಮಾನಹಾನಿಗಳಿಗೂ ಕಾರಣವಾಗುವ ಸಾಧ್ಯತೆಗಳಿವೆ ಎಂಬುದು ತಜ್ಞರ ಅಭಿಮತವಾಗಿದೆ. ಮತ್ತು ಬಳಕೆದಾರನ ಫೋನಿನಲ್ಲಿ ವೈರಸ್ ಅಂಟುವ ಸಾಧ್ಯತೆಯು ಇದೆ. ಈ ನಕಲಿ ಆಪ್ ನ ಮಾಹಿತಿ ಎಲ್ಲಕ್ಕೂ ಮೊದಲು WABetainfo ಈ ವಾಟ್ಸಾಪ್ ಟ್ರ್ಯಾಕಿಂಗ್ ವೆಬ್ಸೈಟ್ ನವರು ಟ್ವಿಟ್ಟರ್ ಮಾಧ್ಯಮದಿಂದ ಮಾಹಿತಿ ನೀಡಿದ್ದಾರೆ. ವಾಟ್ಸಾಪ್ ಈ ಮೇಲಿನ ವಿಷಯದ ಬಗ್ಗೆ ಗೂಗಲ್ ಪ್ಲೇ ಸ್ಟೋರ್ ಗೆ ತಿಳಿಸಿ ನಕಲಿ ಇರುವ ಆಪ್ ತೆಗೆದು ಹಾಕಲು ವಿನಂತಿಸ ಬೇಕೆಂದು ವೆಬ್ಸೈಟಿನವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *