ಮನಸ್ಸಿನ ಕರೆಗೆ ಓ ಗೊಟ್ಟು ಹುತಾತ್ಮರಿಗಾಗಿ ಈತ ಮಾಡುವ ಛಲದ ಈ ಕೆಲಸಕ್ಕೆ ಮೆಚ್ಚಲೇಬೇಕು.

ಮನಸ್ಸಿನ ಕರೆಗೆ ಓ ಗೊಟ್ಟು ಹುತಾತ್ಮರಿಗಾಗಿ ಈತ ಮಾಡುವ ಛಲದ ಈ ಕೆಲಸಕ್ಕೆ ಮೆಚ್ಚಲೇಬೇಕು.

 

ಸಮೀರ್ ಸಿಂಗ್ ‘ದ ಫೇಥ್ ರನ್ನರ್ ‘ಎಂದು ಹೆಸರುವಾಸಿ ಯಾಗಿದ್ದಾನೆ. ಕಾರಣ ಇಂತಹ ಸ್ವಪ್ನಗಳನ್ನು ಬರೀ ವಿಚಾರ ಮತ್ತು ವಿಶ್ವಾಸಗಳ ಕಾರಣದಿಂದಲೇ ಈತನ ಓಟ ಪ್ರಸಿದ್ಧಿ ಪಡೆದಿದೆ.

ಕೆಲವು ದಿವಸಗಳ ಹಿಂದೆ ಈತ 100 ದಿವಸಗಳಲ್ಲಿ ದಿನಕ್ಕೆ 100 ಕಿ.ಮೀ ಓಡುವ ಸಾಧನೆಯನ್ನು ಮಾಡಿ ರಿಕಾರ್ಡ್ ಗಿಟ್ಟಿಸಿದ್ದಾರೆ.

ಈಗ ತನ್ನ ದೇಶದ ಸಲುವಾಗಿ ಮತ್ತು ದೇಶಕ್ಕಾಗಿ ವೀರ ಮರಣವನ್ನು ಅಪ್ಪಿದ ಸೈನಿಕರಿಗಾಗಿ 15000 ಕಿ.ಮೀ ಓಟವನ್ನು ಪೂರ್ಣಗೊಳಿಸುವ ಆಸೆಯನ್ನು ಹೊಂದಿದ್ದಾರೆ.

ಡಿಸೆಂಬರ್ ತಿಂಗಳಿನಲ್ಲಿ ಪಂಜಾಬದ ಅಮೃತಸರದ ವಾಘಾ ಬಾರ್ಡರ್ ನಿಂದ ಈ ಓಟ ಪ್ರಾರಂಭಿಸಿ 5 ತಿಂಗಳುಗಳ ವರೆಗೆ ದೇಶದ ಉತ್ತರ, ಪಶ್ಚಿಮ , ದಕ್ಷಿಣ ಮತ್ತು ಪೂರ್ವ ಹೀಗೆ ನಾಲ್ಕು ದಿಕ್ಕುಗಳಲ್ಲಿ ಸಂಚರಿಸುವಾಗ ಎಲ್ಲ ರಾಜ್ಯಗಳಲ್ಲಿ ಕ್ರಮಿಸಿ ಕೊನೆಗೆ ವಾಘಾ ಬಾರ್ಡರ್ ನಲ್ಲಿಯೇ ಈ ಓಟದ ಮುಕ್ತಾಯ ಮಾಡುವವರಿದ್ದಾರೆ.

ಸಮೀರ್ ನ ಈ ಒಂದು ದೊಡ್ಡ ಛಲದ ಹಿಂದಿನ ಶಕ್ತಿ ಶ್ರೀಕೃಷ್ಣನಂತೆ. ಹೇಗೆಂದರೆ ಇಸ್ ಕಾನ್ ಮಂದಿರದಲ್ಲಿ ಮಣಿ ಜಪಿಸುವಾಗ ಈ ಮೇಲಿನ ಕಲ್ಪನೆ ಹೂಳೆಯಿತಂತೆ. ಆದಕಾರಣ ಇಂತಹ ಒಂದು ಮಹತ್ತರವಾದ ಒಳ್ಳೆಯ ವಿಚಾರದ ಧ್ಯೇಯ ಪೂರ್ಣಗೊಳಿಸಲು ಹೊರಟಿದ್ದಾರೆ ಎಂದರೆ ನಿಜಕ್ಕೂ ಶ್ಲಾಘನಿಯ. ಶುಭ ಹಾರೈಕೆ ನಿನಗೆ ಸಮೀರ್.

Leave a Reply

Your email address will not be published. Required fields are marked *