ಅವಕಾಶಗಳು ಕೈ ಬಿಟ್ಟಾಗ ಕನ್ನಡದ ಈ ನಟಿ ‘ಇಂಥ’ ಕೆಲಸವೂ ಮಾಡಿದಳಂತೆ ಶಾಕ್ ಆಗುವಿರಿ!

ಅವಕಾಶಗಳು ಕೈ ಬಿಟ್ಟಾಗ ಕನ್ನಡದ ಈ ನಟಿ 'ಇಂಥ' ಕೆಲಸವೂ ಮಾಡಿದಳಂತೆ ಶಾಕ್ ಆಗುವಿರಿ!

 

ಚಿತ್ರರಂಗದಲ್ಲಿ ತಂದೆಯ ದೊಡ್ಡ ಹೆಸರು. ಅಂದಾಗ ಸಹಜವಾಗಿಯೇ ತಂದೆಯಿಂದ ಅವಕಾಶಗಳು ತಾನೇ ಸಿಗುತ್ತವೆ ಎನ್ನುವ ಭರವಸೆ ಇದ್ದೇ ಇರುತ್ತದೆ. ಚಿತ್ರರಂಗದಲ್ಲಿ ಯಾವುದೇ ಕಲೆಗೂ ಮುನ್ನ ಒಬ್ಬ ಗಾಡ್ ಫಾದರ್ ಇರುವುದು ಬಹಳ ಮುಖ್ಯ.ಈ ಮಾಯಾಲೋಕದಲ್ಲಿ ಸ್ವಂತದ ಬಲದಿಂದ ಮೇಲೆ ಬಂದವರು ತೀರಾ ಬೆರಳೆಣಿಕೆಯಷ್ಟು ಎಂದೇ ಹೇಳಬಹುದು.

ನಾವು ಉಲ್ಲೇಖಿಸಲು ಹೊರಟಿರುವ ತಾರೆಯ ಹೆಸರು ಪವಿತ್ರಾ ಲೋಕೇಶ್. ಇವರ ತಂದೆಯು ಕನ್ನಡ ಚಿತ್ರ ಜಗತ್ತಿನಲ್ಲಿಯೇ ಒಳ್ಳೆಯ ಹೆಸರು ಗಿಟ್ಟಿಸಿಕೊಂಡವರು.

ತಂದೆಯ ಅಕಾಲಿಕ ನಿಧನದಿಂದ ಮನೆಯ ಸಂಪೂರ್ಣ ಹೊಣೆ ಪವಿತ್ರಾ ಅವರ ಮೇಲೆ ಬಿತ್ತು. 16ನೆ ವಯಸ್ಸಿಗೆ ಬಣ್ಣ ಹಚ್ಚಿಕೊಂಡರು. ತಂದೆಯ ಹೆಸರಿನಿಂದ ಅವಕಾಶಗಳು ಸಿಗುತ್ತವೆ ಎನ್ನುವ ವಿಶ್ವಾಸ ಕೆಲಸಕ್ಕಾಗಿ ಅಲೆಯುವಾಗ ನುಚ್ಚುನೂರಾಯಿತು.ಅವಕಾಶಕ್ಕಾಗಿ ಬಾಯಿ ತರೆದಾಗ ಅವಾಕಾಶವಾದಿಗಳ ಕಲುಷಿತ ಮನಸು ಗೋಚರಿಸಲಾರಂಭಿಸಿತು. ಕೊನೆಗೆ ದಿಗ್ಗಜ ನಟರಾದ ಅಂಬರೀಷ್ ಅವರಿಂದ ಕೆಲವು ಚಿತ್ರಗಳಲ್ಲಿ ಅವಕಾಶ ಸಿಕ್ಕರೂ ಕೆಲಸದ ಬರ ಮಾತ್ರ ನೀಗಲಿಲ್ಲ.

ಕೊನೆಗೆ ಸ್ವಲ್ಪ ಬ್ರೆಕ್ ತೆಗೆದುಕೊಂಡು ಹಣ ಮತ್ತು ಕುಟುಂಬಕ್ಕಾಗಿ ಏನಾದರೂ ಮಾಡುವ ಹವಣಿಕೆಯಿಂದ ಒಂದು ಪ್ರೈವೇಟ್ ಕಂಪನಿಯಲ್ಲಿ ಅಸಿಸ್ಟಂಟ್ ನೌಕರಿಯನ್ನೂ ಮಾಡಿದರು.ಈ ಮಧ್ಯ ಅವರು ಕೆಲಸಕ್ಕಾಗಿ ಸಾಮಾನ್ಯರಂತೆ ಬಸ್ಸಿನಲ್ಲಿ ಹೋಗುವದು ಬರುವದು ಹಾಗೂ ಮುಂಜಾನೆಯಿಂದ ಸಾಯಂಕಾಲದ ವರೆಗೆ ಆಫೀಸಿನಲ್ಲಿ ಕೆಲಸ ಮಾಡಿ ಬರುತ್ತಿದ್ದರು.

ಕೆಲವು ದಿವಸಗಳ ನಂತರ ಚಿತ್ರರಂಗಕ್ಕೆ ಮತ್ತೆ ರೀಎಂಟ್ರಿ ಕೊಟ್ಟರು. ಆದರೆ ಮೊದಲಿನ ಹಾಗೆ ಅಲ್ಲ, ಅದಕ್ಕಿಂತ ಸ್ವಲ್ಪ ವಿಭಿನ್ನವಾಗಿ ತಮ್ಮದೇ ಶೈಲಿಯಲ್ಲಿ ನಟಿಸಿ ಅಭಿಮಾನಿಗಳಿಂದ ಸೈ ಎನಿಸಿಕೊಂಡರು. ಇವರು ಕನ್ನಡ ಹೊರತಾಗಿ ಬೇರೆ ಭಾಷೆಯಲ್ಲಿಯೂ ತಮ್ಮ ವಿಭಿನ್ನ ಅಭಿನಯದ ಛಾಪು ಮೂಡಿಸಿದ್ದಾರೆ.

Leave a Reply

Your email address will not be published. Required fields are marked *